ಭವಿಷ್ಯಕ್ಕಾಗಿ ಪರಿಸರ ಸಮತೋಲನ ಅವಶ್ಯ

KannadaprabhaNewsNetwork |  
Published : Jun 07, 2024, 12:31 AM IST
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಿವಗಿರಿ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನ | Kannada Prabha

ಸಾರಾಂಶ

ಮಗುವಿಗೊಂದು ಮರ, ಶಾಲೆಗೊಂದು ವನ ಮಾಡುವುದರೊಂದಿಗೆ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಫಲ ನೀಡುವ ಮರಗಳನ್ನು ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಗುವಿಗೊಂದು ಮರ, ಶಾಲೆಗೊಂದು ವನ ಮಾಡುವುದರೊಂದಿಗೆ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಫಲ ನೀಡುವ ಮರಗಳನ್ನು ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಿವಗಿರಿ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನ ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದ ಪೀಳಿಗೆಗೆ ಪರಿಸರ ಸಮತೋಲನ ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ವಾಯುಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.

ಮುಖ್ಯ ಅತಿಥಿ, ಸಮಾಜ ಸೇವಕ ರಾಜು ಜಾಧವ ಮಾತನಾಡಿ, ಪರಿಸರ ನಾಶದಿಂದ ಪಶು, ಪಕ್ಷಿ, ಪ್ರಾಣಿಗಳ ವಿನಾಶಕ್ಕೆ ಕಾರಣವಾಗುತ್ತಿದೆ. ಪರಿಸರ ಸಂರಕ್ಷಣೆ ಮಾಡದೆ ಇದ್ದರೆ ಜಾಗತಿಕ ತಾಪಮಾನ ಏರಿಕೆಯಾಗಿ ಮನು ಕುಲಕ್ಕೆ ಧಕ್ಕೆಯುಂಟಾಗುತ್ತದೆ ಎಂದರು.

ಉಪನ್ಯಾಸಕಿ ಡಾ.ಸುಮಾ ಮಮದಾಪೂರ ಮಾತನಾಡಿ, ಮನೆಗೊಂದು ಮರ, ದೇಶಕ್ಕೆ ವರ. ರಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಶಕ್ತಿ ಕಳೆದುಕೊಳ್ಳುತ್ತಿದೆ. ಕಾಡಿನ ಪ್ರಮಾಣ ಹೆಚ್ಚಿಸಿದರೆ ಮಳೆ ಪ್ರಮಾಣವು ಹೆಚ್ಚಾಗುತ್ತದೆ ಎಂದರು.

ಬಿ.ಕೆ.ಸಂಗೀತ ಅಕ್ಕನವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಸ್.ಐ.ಬಗಲಿ, ಬಿ.ಕೆ.ಸರೋಜಾ ಅಕ್ಕನವರು, ಬಿ.ಕೆ.ಕಲ್ಮೇಶ, ನಿಂಗಪ್ಪ ಬೈಚಬಾಳ, ಅಪ್ಪಾಸಾಹೇಬ ಜಂಗಮಶೆಟ್ಟಿ, ಮೊತಿಮಠ ವಕೀಲರು, ಚನ್ನಪ್ಪ ಕೊಪ್ಪದ, ಬಿ.ಕೆ.ಗಂಗಾಧರ, ಬಿ.ಕೆ.ಸಾವಿತ್ರಿ, ಬಿ.ಕೆ.ಶಾಂತಾ, ಬಿ.ಕೆ.ಹಿರೇಮಠ, ಬಿ.ಕೆ.ಶೈಲಾ, ಬಿ.ಕೆ.ಶೋಭಾ, ಬಿ.ಕೆ.ಶೈಲಶ್ರೀ, ಬಿ.ಕೆ.ಕವಿತಾ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ