ಕುಲ ಕಸಬುಗಳ ತರಬೇತಿಯಿಂದ ಆರ್ಥಿಕಾಭಿವೃದ್ಧಿ

KannadaprabhaNewsNetwork |  
Published : Dec 18, 2025, 12:15 AM IST
ಹೆಣ್ಣು ಮಕ್ಕಳು ತಮ್ಮ ಕುಲ ಕಸಬುಗಳನ್ನ ತರಬೇತಿ ಪಡೆಯುತ್ತಿರುವುದು ಸಂತಸ | Kannada Prabha

ಸಾರಾಂಶ

ಗ್ರಾಮೀಣ ಭಾಗದಲ್ಲಿ ಗುಡಿ ಕೈಗಾರಿಕೆ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ವಿವಿಧ ಕುಲ ಕಸಬುಗಳನ್ನು ತರಬೇತಿ ಪಡೆಯುತ್ತಿರುವುದು ಸಂತಸ ತಂದಿದ್ದು ಇದರಿಂದ ಆರ್ಥಿಕಾಭಿವೃದ್ಧಿ ಆಗಲಿದೆ ಎಂದು ಎಂದು ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರಮಣಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಗ್ರಾಮೀಣ ಭಾಗದಲ್ಲಿ ಗುಡಿ ಕೈಗಾರಿಕೆ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ವಿವಿಧ ಕುಲ ಕಸಬುಗಳನ್ನು ತರಬೇತಿ ಪಡೆಯುತ್ತಿರುವುದು ಸಂತಸ ತಂದಿದ್ದು ಇದರಿಂದ ಆರ್ಥಿಕಾಭಿವೃದ್ಧಿ ಆಗಲಿದೆ ಎಂದು ಎಂದು ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರಮಣಪ್ಪ ತಿಳಿಸಿದರು.ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಗಂಕಾರನಹಳ್ಳಿ ಗ್ರಾಮದಲ್ಲಿ ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಚಕ್ರ ಕುಂಬಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಂಬಾರ ತರಬೇತಿ ಸಾಂಪ್ರದಾಯಕ ಕುಂಬಾರಿಕೆ ಕೌಶಲ್ಯಗಳನ್ನ ಆಧುನಿಕ ಯಂತ್ರಗಳೊಂದಿಗೆ ಸಂಯೋಜಿಸಿ ಮಡಿಕೆ, ಕುಡಿಕೆ, ಅಲಂಕಾರರಿಕ ವಸ್ತುಗಳನ್ನ ತಯಾರಿಸಲು ಕೇಂದ್ರ ಸರ್ಕಾರ ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಕುಂಬಾರ ಸಶಕ್ತಿಕರಣ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಅದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಲಕು ಎಂದು ತಿಳಿಸಿದರು.ತರಬೇತಿದಾರ ಸಂಪಂಗಿ ರಾಮಪ್ಪ ಮಾತನಾಡಿ , ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಗ್ರಾಮೀಣ ಭಾಗ ಬಡತನದಲ್ಲಿರುವ ಕುಂಬಾರ ಸಮುದಾಯಕ್ಕೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಜೀವನ ನಡೆಸಲು ಅನೇಕ ಯೋಜನೆಗಳನ್ನ ಜಾರಿಗೆ ತರಲಾಗಿದೆ. ಕುಂಬಾರಿಕೆ ತಯಾರಿ ತರಬೇತಿಯಲ್ಲಿ ಸುಮಾರು ೨೦ಕ್ಕೂ ಹೆಚ್ಚು ಮಹಿಳೆಯರು ತರಬೇರಿಯನ್ನ ಪಡೆದಿದ್ದಾರೆ. ತರಬೇತಿ ಪಡೆದ ಎಲ್ಲರಿಗೂ ಮುಂದಿನ ದಿನಗಳಲ್ಲಿ ಉಪಕರಣಗಳನ್ನ ನೀಡಲಾಗುತ್ತದೆ ಎಂದು ತಿಳಿಸಿದರು.ಕುಂಬಾರ ಸಮುದಾಯದ ಮುಖಂಡ ಮೋಹನ್ ಮಾತನಾಡಿ, ಗ್ರಾಮೀಣ ಬಾಗದಲ್ಲಿ ಕುಂಬಾರಿಕೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ನಮ್ಮ ಸಮುದಾಯದ ಮಹಿಳೆಯರಿಗೆ ಸುಮಾರು ೧೦ ದಿನಗಳ ಕಾಲ ಜೇಡಿ ಮಣ್ಣಿನಿಂದ ಆರೋಗ್ಯಕರ ಮಡಿಕೆ, ಕುಡಿಕೆ, ವಾಟರ್ ಬಾಟಲ್, ಬಿರಿಯಾನಿ ಬಟ್ಟಲು, ತುಳಸಿ ಕಟ್ಟೆ, ದೀಪ, ಸೇರಿದಂತೆ ಮನೆಯಲ್ಲಿ ಇಡುವಂತ ಅಲಂಕಾರಕ ವಸ್ತುಗಳನ್ನ ತರಬೇತಿ ಪಡೆದಿದ್ದಾರೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಅಶ್ವಥಪ್ಪ, ಮಧುಗಿರಿ ವರದರಾಜು, ರಂಗಸ್ವಾಮಿ, ತರಬೇತಿದಾರರಾದ ಸಂಪಂಗಿರಾಮ್, ಮದರ್ ಸಂಸ್ಥೆಯ ಭಾಸ್ಕರ್, ಲಿಂಗ ದೊರೆ, ಮಮತಾ, ನಾಗಮಣಿ, ಪಾರ್ವತಮ್ಮ, ಲತಾಮಣಿ, ಕಾಂತಮ್ಮ, ರೂಪ, ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುಣಮಟ್ಟ ಸಾಹಿತ್ಯ ರಚಿಸಲು ಶುದ್ಧ ಮನಸ್ಸು ಅಗತ್ಯ
ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಬೇಡಿ