ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಚೇತರಿಕೆ, ಉಳಿತಾಯ

KannadaprabhaNewsNetwork |  
Published : Nov 25, 2025, 01:45 AM IST

ಸಾರಾಂಶ

ಕೊರೋನಾ ಕಾಲಘಟ್ಟದಲ್ಲಿ ಹಾಗೂ ನೋಟ್ ಬ್ಯಾನ್ ಹಾಗೂ ಬೆಲೆ ಏರಿಕೆಯಿಂದ ಜನತೆ ತತ್ತರಿಸಿ ಹೊಗಿದ್ದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಹಾಗೂ ಗೃಹ ಜ್ಯೋತಿ ನೀಡಿದ ಕಾರಣ ಬಡ ಜನತೆಯ ಸಾವಿರ ರುಪಾಯಿ ಉಳಿತಾಯವಾಗಿದ್ದು ಆರ್ಥಿಕವಾಗಿ ಚೇತರಿಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸೂಲಿಬೆಲೆ

ಕಾಂಗ್ರೆಸ್ ಸರ್ಕಾರ ರಾಜ್ಯವ್ಯಾಪಿ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ವಿಚಾರದಲ್ಲಿ ಸರ್ಕಾರಿ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಬಚ್ಚೇಗೌಡ ಹೇಳಿದರು.ಸೂಲಿಬೆಲೆ ಹೋಬಳಿ ದೊಡ್ಡಹರಳಗೆರೆ ಗ್ರಾಮ ಪಂಚಾಯಿತಿ ಮಟ್ಟದ ಪಂಚ ಗ್ಯಾರಂಟಿ ಯೋಜನೆಯ ಕುಂದುಕೊರತೆಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಕೊರೋನಾ ಕಾಲಘಟ್ಟದಲ್ಲಿ ಹಾಗೂ ನೋಟ್ ಬ್ಯಾನ್ ಹಾಗೂ ಬೆಲೆ ಏರಿಕೆಯಿಂದ ಜನತೆ ತತ್ತರಿಸಿ ಹೊಗಿದ್ದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಹಾಗೂ ಗೃಹ ಜ್ಯೋತಿ ನೀಡಿದ ಕಾರಣ ಬಡ ಜನತೆಯ ಸಾವಿರ ರುಪಾಯಿ ಉಳಿತಾಯವಾಗಿದ್ದು ಆರ್ಥಿಕವಾಗಿ ಚೇತರಿಕೆಯಾಗಿದ್ದಾರೆ ಎಂದರು.ಕೆಲವು ತಾಂತ್ರಿಕ ದೋಷದಿಂದ ವಿಳಂಬವಾಗಿದ್ದು ಶೇ. 90ಕ್ಕೂ ಹೆಚ್ಚು ಫಲಾನುಭವಿಗಳಿಗೆ ಯೋಜನೆ ಮನೆ ಬಾಗಿಲಿಗೆ ತಲುಪಿಸಲಾಗಿದೆ, ಗೃಹ ಜ್ಯೋತಿ ಹೆಚ್ಚಿನ ಅನುಕೂಲವಾಗಿದ್ದು ಗೃಹ ಲಕ್ಷ್ಮೀ ಯಾವುದೇ ದಲ್ಲಾಳಿಗಳ ಕಾಟವಿಲ್ಲದೇ ಹಣ ಖಾತೆಗೆ ಜಮೆಯಾಗಿರುವುದು ಹೆಮ್ಮಯ ವಿಷಯ ಎಂದು ಹೇಳಿದರು.ಗ್ಯಾರಂಟಿ ಯೋಜನೆ ನಿರ್ದೇಶಕ ಹೆಮಣ್ಣ ಮಾತನಾಡಿ, ಸಮಾಜದ ಕಟ್ಟ ಕಡೆಯ ಪ್ರಜೆಗೂ ನಮ್ಮ ಸವಲತ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ನಮ್ಮ ಯೋಜನೆಯ ಕಮಿಟಿ ರಚಿಸಲಾಗಿದ್ದು ಆನ್ನಭಾಗ್ಯ ಯೋಜನೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ಸ್ತ್ರಿಶಕ್ತಿ ಫಲಾನುಭವಿಗಳು ಸದುಪಯೋಗ ಪಡೆದುಕೊಳ್ಳಬೆಕು ಎಂದರು.ಆಹಾರ ಇಲಾಖೆಯ ಇನ್‌ಸ್ಪೆಕ್ಟರ್ ಶಿವಕುಮಾರ್ ಮಾತನಾಡಿ, ದೊಡ್ಡಹರಳಗೆರೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 4 ನ್ಯಾಯಬೆಲೆ ಅಂಗಡಿಗಳಿದ್ದು 109 ಅಂತ್ಯೋದಯ 1108 ಬಿಪಿಎಲ್ ಕಾರ್ಡಗಳಿದ್ದು ಕೇಂದ್ರ ಸರ್ಕಾರ ಆರ್ಥಿಕ ಇಲಾಖೆಯ ಮಾನದಂಡಗಳAತೆ ಕೆಲವು ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದ್ದು ನಿರ್ದಿಷ್ಟ ಕಾರಣಗಳನ್ನು ಒದಗಿಸಿ ಅರ್ಜಿ ಸಲ್ಲಿಸಿದರು ಪರಿಶೀಲಿಸಿ ಮರಳಿ ಬಿಪಿಎಲ್ ಕಾರ್ಡ ನೀಡಲಾಗುವುದು ಎಂದರು.ಗ್ಯಾರಂಟಿ ಯೋಜನೆ ಸದಸ್ಯರಾದ ಸೈಯದ್ ಮಹಬೂಬ್, ಬೋಧನಹೊಸಹಳ್ಳಿ ಮಂಜುನಾಥ್, ಅಮ್ಜದ್ ಬೇಗ್, ವಾಬಸಂದ್ರ ಹೇಮಣ್ಣ, ಪಿಡಿಓ ರಘು, ಆಹಾರ ಇಲಾಖೆಯ ಶಿವಕುಮಾರ್, ಸಾರಿಗೆ ಇಲಾಖೆ ನಟರಾಜ್, ಬೆಸ್ಕಾಂ ಇಲಾಖೆ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾರತಿ, ಯುವ ನಿಧಿಯ ಮಹಾಂತ್, ಗ್ರಾ.ಪಂ.ಅಧ್ಯಕ್ಷೆ ಶಿವಕುಮಾರಿ, ಸದಸ್ಯರಾಧ ಈರಣ್ಣ, ಮುನಿರಾಜು, ಮಮತಾ, ಇತರರು ಇದ್ದರು.

ಚಿತ್ರ; ೨೪ ಸೂಲಿಬೆಲೆ ೧ ಜೆಪಿಜೆ ನಲ್ಲಿದೆ

PREV

Recommended Stories

ಮನೆ ಬಳಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೇರಳಿಗರ ಗೂಂಡಾಗಿರಿ
ಶಾಲೆ ಮುಚ್ಚುವ ವಿರುದ್ಧ ಬೀದಿಗಿಳಿದು ಹೋರಾಟ: ರಾಜೇಶೇಖರ್‌