ಸಣ್ಣ ಉದ್ಯಮಗಳಿಂದ ಆರ್ಥಿಕ ಅವಲಂಬನೆ

KannadaprabhaNewsNetwork |  
Published : Jul 18, 2026, 12:15 AM IST
ಗುಬ್ಬಿತಾಲ್ಲೂಕಿನ ಸಿಎಸ್ ಪುರ ಗ್ರಾಮದ  ಕೆನರಾ ಬ್ಯಾಂಕ್ ಗುಬ್ಬಿ ಶಾಖೆ ಹಾಗೂ ಸಾಧನ ಎಜುಕೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಶ್ರಯದಲ್ಲಿ ಏರ್ಪಡಿಸಿದ್ದ ಸ್ವಸಹಾಯ ಸಂಘಗಳ ಆರ್ಥಿಕ ಅರಿವು ಮತ್ತು ಸಾಲ ಜೋಡಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನ ವ್ಯವಸ್ಥಾಪಕ ಗಂಗೇಶ್ ಗುಂಜನ್. | Kannada Prabha

ಸಾರಾಂಶ

ಮಹಿಳೆಯರು ಸಣ್ಣ ಉದ್ಯಮಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇಂತಹ ಸಾಲ ಜೋಡಣೆ ಕಾರ್ಯಕ್ರಮಗಳು ದಾರಿದೀಪವಾಗಿವೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಂಗೇಶ್ ಗುಂಜನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಮಹಿಳೆಯರು ಸಣ್ಣ ಉದ್ಯಮಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇಂತಹ ಸಾಲ ಜೋಡಣೆ ಕಾರ್ಯಕ್ರಮಗಳು ದಾರಿದೀಪವಾಗಿವೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಂಗೇಶ್ ಗುಂಜನ್ ತಿಳಿಸಿದರು.ತಾಲೂಕಿನ ಸಿಎಸ್ ಪುರ ಗ್ರಾಮದ ಕೆನರಾ ಬ್ಯಾಂಕ್ ಗುಬ್ಬಿ ಶಾಖೆ ಹಾಗೂ ಸಾಧನಾ ಎಜ್ಯುಕೇಷನ್ ಆ್ಯಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಶ್ರಯದಲ್ಲಿ ಏರ್ಪಡಿಸಿದ್ದ ಸ್ವಸಹಾಯ ಸಂಘಗಳ ಆರ್ಥಿಕ ಅರಿವು ಮತ್ತು ಸಾಲ ಜೋಡಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಲ ಪಡೆಯುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು, ಕೆನರಾ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಮತ್ತು ವೇಗವಾಗಿ ಸಾಲ ಕೊಡುತ್ತದೆ. ಗ್ರಾಹಕರ ವಿವಿಧ ಅಗತ್ಯಗಳಿಗೆ ತಕ್ಕಂತೆ ​ಗೃಹ ಸಾಲ, ​ವಾಹನ ಸಾಲ, ​ಶಿಕ್ಷಣ ಸಾಲ, ವೈಯಕ್ತಿಕ ಸಾಲ, ​ಕೃಷಿ ಸಾಲ ಈ ರೀತಿ ಹಲವು ರೀತಿಯ ಸಾಲಗಳನ್ನು ಕೆನರಾ ಬ್ಯಾಂಕ್ ನೀಡುತ್ತದೆ. ಸಂಘದ ಸದಸ್ಯರು ಸಣ್ಣಮೋತ್ತದ ಹಣ ಕಟ್ಟಿ ವಿಮೆ ಮಾಡಿಸಿಕೊಂಡರೆ ಆಪತ್ಕಾಲದಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕ ಶುಭ್ರಾಂಶು ಕುಮಾರ್ ಮಿಶ್ರಾ , ಸಾಧನ ಸಂಸ್ಥೆಯ ಕಾರ್ಯದರ್ಶಿ ಸಿ. ಬಿ ಪವನ್, ಸತ್ಯಜೀತ್, ಎ.ಯೋಗೀಶ್, ನರಸಿಂಹಮೂರ್ತಿ ರವೀಶ್, ತ್ರಿವೇಣಿ, ಕೆ.ಡಿ ರವೀಶ್, ಶ್ವೇತ, ರೇಖಾ , ಉಮಾ, ಶಿವಕುಮಾರ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರೇಟರ್‌ ಬೆಂಗಳೂರು ಪಾಲಿಕೆ ಚುನಾವಣೆ ಮತ್ತೆ ಮುಂದೂಡಿಕೆ
‘ಸಚಿವರ ಪಟ್ಟಿ’ ಪರಿಷ್ಕರಿಸಲು ಹೈಕಮಾಂಡ್‌ನಿಂದ ಸೂಚನೆ