ಸಹಕಾರದೊಂದಿಗೆ ಮುನ್ನಡೆದಾಗ ಆರ್ಥಿಕ ಸದೃಢತೆ

KannadaprabhaNewsNetwork |  
Published : Jul 11, 2026, 12:15 AM IST
೧೦ಶಿರಾ೩: ಶಿರಾ ತಾಲೂಕಿನ ದ್ವಾರಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾನಂಗಿ ರಾಮು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. | Kannada Prabha

ಸಾರಾಂಶ

ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಪರಸ್ಪರ ಸ್ನೇಹ ಸಹಕಾರದೊಂದಿಗೆ ಮುನ್ನಡೆದಾಗ ಆರ್ಥಿಕ ಸದೃಢತೆ ಸಾಧಿಸಲು ಸಾಧ್ಯ ಎಂದು ಶಿರಾ ಜೆಡಿಎಸ್ ನಾಯಕ ಆರ್. ಉಗ್ರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಪರಸ್ಪರ ಸ್ನೇಹ ಸಹಕಾರದೊಂದಿಗೆ ಮುನ್ನಡೆದಾಗ ಆರ್ಥಿಕ ಸದೃಢತೆ ಸಾಧಿಸಲು ಸಾಧ್ಯ ಎಂದು ಶಿರಾ ಜೆಡಿಎಸ್ ನಾಯಕ ಆರ್. ಉಗ್ರೇಶ್ ಹೇಳಿದರು.

ಅವರು ಶಿರಾ ತಾಲೂಕಿನ ದ್ವಾರಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾನಂಗಿ ತಾಂಡ ರಾಮುರವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯ ನೀಡುವುದರ ಜೊತೆಗೆ ಕಚೇರಿಗೆ ಆಗಮಿಸುವ ರೈತರೊಂದಿಗೆ ಸ್ನೇಹ ಪ್ರೀತಿ-ವಿಶ್ವಾಸದಿಂದ ಸೇವೆ ಮಾಡಿದರೆ ಸಂಘದ ಪ್ರಗತಿ ಸಾಧ್ಯ ಎಂದರು. ದ್ವಾರಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಮಾನಂಗಿ ತಾಂಡ ರಾಮು ಮಾತನಾಡಿ ಸಂಘದ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅಧ್ಯಕ್ಷ ಸ್ಥಾನ ಪಡೆದಿದ್ದೇನೆ. ನಿಮ್ಮಗಳ ಪ್ರೀತಿ ವಿಶ್ವಾಸ ಸಹಕಾರ ನನ್ನ ಮೇಲೆ ಸದಾ ಇರಲಿ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ ರೈತರಿಗೆ ಹೆಚ್ಚು ಹೆಚ್ಚು ಸಾಲ ಕೊಡುವುದರ ಜೊತೆಗೆ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸೋಣ. ರೈತ ಮತ್ತು ಗ್ರಾಹಕರ ಸಹಕಾರವೇ ಪತ್ತಿನ ಸಹಕಾರ ಸಂಘಕ್ಕೆ ದೊಡ್ಡ ಶಕ್ತಿ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಿ.ಎಸ್. ಲೋಹಿತ್, ಮಾಜಿ ಅಧ್ಯಕ್ಷ ಎಸ್. ಜಿ.ರಾಜಣ್ಣ, ಮುಖಂಡರಾದ ಲಿಂಗದಹಳ್ಳಿ ಸುಧಾಕರ್ ಗೌಡ, ನಗರಸಭೆ ಸದಸ್ಯ ರಾಮು, ಮಾಜಿ ಸದಸ್ಯ ರಾಘವೇಂದ್ರ, ಮಾಜಿ ಅಧ್ಯಕ್ಷ ಅಂಜಿನಪ್ಪ, ಪಿ. ಬಿ.ಕೃಷ್ಣೇಗೌಡ, ನಟರಾಜು, ಹೇಮಂತಗೌಡ, ಅಶ್ವತಪ್ಪ, ವಿಜಯ್ ಕುಮಾರ್, ತಿಪ್ಪೇಶ್, ಹನುಮಂತ ನಾಯ್ಕ, ಸ್ವಾಮ್ಯ ನಾಯ್ಕ, ಜುಂಜಣ್ಣ, ರಾಮಕೃಷ್ಣ ನಾಯ್ಕ , ನಿಸರ್ಗ ಸುರೇಶ್, ನಿತ್ಯಾನಂದ, ರಾಜಣ್ಣ, ತಿಮ್ಮಣ್ಣ ,ಎಲ್.ಡಿ. ಮಂಜುನಾಥ್, ವನಜಾಕ್ಷಮ್ಮ, ಮಾಣಿಕ್ಯ, ಮೇಲ್ವಿಚಾರಕ ಜನಾರ್ಧನ್, ಕಾರ್ಯದರ್ಶಿ ಕೆ ಈರಣ್ಣ ಸೇರಿದಂತೆ ಹಲವಾರು ಮುಖಂಡರು ರೈತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಲಹರಣವಾಗುತ್ತಿದೆ ಹೊರತು ಪ್ರಗತಿ ಇಲ್ಲ
ಬಿಸಿಯೂಟ ಕಾರ್ಮಿಕರ ವೇತನ ಹೆಚ್ಚಿಸುವಂತೆ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ