ಇಡಿ ದಾಳಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಮಂಜುನಾಥಗೌಡಗೆ ಬಿಗ್‌ ರಿಲೀಫ್‌

KannadaprabhaNewsNetwork |  
Published : Oct 12, 2023, 12:00 AM IST
ಆರ್‌. ಎಂ. ಮಂಜುನಾಥಗೌಡರು | Kannada Prabha

ಸಾರಾಂಶ

ಯಾವುದೇ ರೀತಿಯ ಪ್ರೊಸಿಡಿಂಗ್ಸ್ ಅನ್ನು ತನ್ನ ಮುಂದಿನ ಆದೇಶದವರೆಗೆ ಮುಂದುವರಿಸದಂತೆ ಹೈಕೋರ್ಟ್‌ ತನ್ನ ಮಧ್ಯಂತರ ಆದೇಶ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಇ.ಡಿ ದಾಳಿಗೆ ಒಳಗಾಗಿದ್ದ ಡಿಸಿಸಿ ಬ್ಯಾಂಕ್ ಆರ್‌.ಎಂ. ಮಂಜುನಾಥಗೌಡ ಅವರಿಗೆ ಇ.ಡಿ ವಿಚಾರಣೆಯಿಂದ ಬಿಗ್ ರಿಲೀಫ್‌ ಸಿಕ್ಕಿದೆ. ಮಂಜುನಾಥಗೌಡ ಅವರಿಗೆ ಇ.ಡಿ ವಿಚಾರಣೆಗೆ ಹಾಜರಾಗುವಂತೆ ನೀಡಿದ ನೋಟೀಸ್‌ಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರೊಸಿಡಿಂಗ್ಸ್ ಅನ್ನು ತನ್ನ ಮುಂದಿನ ಆದೇಶದವರೆಗೆ ಮುಂದುವರಿಸದಂತೆ ಹೈಕೋರ್ಟ್‌ ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಅ.5ರಂದು ಆರ್‌.ಎಂ. ಮಂಜುನಾಥಗೌಡ ಅವರಿಗೆ ಸೇರಿದ ಮೂರು ಸ್ಥಳಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಕರಕುಚ್ಚಿ ತೋಟದ ಮನೆಗಳ ಮೇಲೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಮಾಡಿದ್ದರು. ಈ ವೇಳೆಯಲ್ಲಿ ಮನೆಯಲ್ಲಿ ಆರ್‌.ಎಂ. ಮಂಜುನಾಥಗೌಡರು ಇರಲಿಲ್ಲ. ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ನೀಡಿದ್ದರು. ಇದರ ವಿರುದ್ಧ ಮಂಜುನಾಥಗೌಡ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆರ್‌ಎಂಎಂ ಪರವಾಗಿ ಜಯಕುಮಾರ್‌ ಪಾಟೀಲ್ ಮತ್ತು ಕಿರಣ್‌ ಎಸ್‌. ಜವಳಿ ವಾದಿಸಿದ್ದರು. - - - -ಫೋಟೋ: ಆರ್‌.ಎಂ. ಮಂಜುನಾಥಗೌಡ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ