ಅಲ್ಪಸಂಖ್ಯಾತರು ಮಕ್ಕಳಿಗೆ ಶಿಕ್ಷಣ ಕೊಡಿಸಿ-ಶಾಸಕ ಸಿ.ಸಿ. ಪಾಟೀಲ್‌

KannadaprabhaNewsNetwork | Published : Jun 23, 2025 12:33 AM

ಆಧುನಿಕ ಯುಗದಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣ ಕಲಿತರೆ ಮಾತ್ರ ಅವರು ತಮ್ಮ ಕುಟಂಬವು ಸದೃಢವಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಅಲ್ಪಸಂಖ್ಯಾತರು ತಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನರಗುಂದ: ಆಧುನಿಕ ಯುಗದಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣ ಕಲಿತರೆ ಮಾತ್ರ ಅವರು ತಮ್ಮ ಕುಟಂಬವು ಸದೃಢವಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಅಲ್ಪಸಂಖ್ಯಾತರು ತಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಅವರು ಶನಿವಾರ ಪಟ್ಟಣದ ಹಾದಿಮನಿ ಕಾಂಪ್ಲೆಕ್ಸ್‌ನಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿ, ಅಲ್ಪಸಂಖ್ಯಾತರ ಸಮುದಾಯ ತಮ್ಮ ಮಕ್ಕಳಿಗೆ ಚಿಕ್ಕವರಿದ್ದಾಗಲೆ ಉದ್ಯೋಗ ಮಾಡಲು ಹಚ್ಚುವುದರಿಂದ ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಅಲ್ಪಸಂಖ್ಯಾತರು ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು, ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರಿಂದ ನಿಮ್ಮ ಕುಟುಂಬವು ಸುಧಾರಣೆಯಾಗುತ್ತದೆ. ಮೇಲಾಗಿ ದೇಶದ ಒಳ್ಳೆಯ ನಾಗರಿಕರಾಗಲು ಸಾಧ್ಯವಾಗುತ್ತದೆ. ಅಲ್ಪಸಂಖ್ಯಾತರ ಸಮುದಾಯದಲ್ಲಿ ಡಾ. ಅಬ್ದುಲ್ ಕಲಾಂವರು ಹುಟ್ಟಿ ತಮ್ಮ ಕಡು ಬಡತನದಲ್ಲಿ ಉನ್ನತ ಶಿಕ್ಷಣ ಕಲಿತ ವಿಜ್ಞಾನಿಗಳಾಗಿ ಈ ದೇಶದ ರಾಷ್ಟ್ರಪತಿಗಳಾಗಿ ಸೇವೆ ಮಾಡಲು ಸಾಧ್ಯವಾಗಿದೆ ಎಂದರು.

ನಾನು ನನ್ನ ರಾಜಕೀಯ ಜೀವನದಲ್ಲಿ ಶಾಸಕನಾಗಿ, ಸಚಿವನಾದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ, ಮೇಲಾಗಿ ಪುರಸಭೆಗೆ ಮುಸ್ಲಿಂ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಿಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯ ಫಕೀರಪ್ಪ ಹಾದಿಮನಿ, ಶಿವಾನಂದ ಮುತ್ತವಾಡ, ಸಮದು ಮುಲ್ಲಾ, ಎಚ್.ಬಿ. ಅಸೂಟಿ, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಗೌಸ ತಾಲೀಮನವರ, ಪ್ರಮೋದ ಪಾಟೀಲ, ಶರಣಪ್ಪ ಗರೋಳ, ಮಂಜು ಮೆಣಸಗಿ, ಪವಾಡಪ್ಪ ವಡ್ಡಿಗೇರಿ, ಕೆ.ಬಿ. ಖಲೀಪ, ಬಿ.ಎಚ್. ಪಠಾಣ, ಐ.ಪಿ. ಚಂದಣ್ಣವರ, ಮೌಲಸಾಬ ಮುನವಳ್ಳಿ, ಚೌದರಸಾಬ ಪಠಾಣ, ಹುಸೇನಸಾಬ ಗೌಟೂರ, ಮಂಜು ಮೆಣಸಗಿ, ರಿಯಾಜ ಕೊಣ್ಣೂರ, ಐ.ಎಂ. ತಹಸೀಲ್ದಾರ್ ಸೇರಿದಂತೆ ಮುಂತಾದವರು ಇದ್ದರು.