ಕಾಂಗ್ರೆಸ್‌ ಬಗ್ಗೆ ಯುವಕರಿಗೆ ತಿಳಿವಳಿಕೆ ನೀಡಿ

KannadaprabhaNewsNetwork |  
Published : Mar 14, 2025, 12:34 AM IST
ಫೋಟೊಪೈಲ್- ೧೦ಎಸ್ಡಿಪಿ೨- ಸಿದ್ದಾಪುರ ತಾಲೂಕಿನ ಮಾಸ್ತಿಹಕ್ಕಲಿನಲ್ಲಿ ವಾಜಗೋಡ ಕಾಂಗ್ರೆಸ್ ಘಟಕ ಹಾಗೂ ಯುವ ಘಟಕದಿಂದ ರಾಜ್ಯ ಯುವ ಕಾಂಗ್ರೆಸ್‌ಗೆ ಆಯ್ಕೆಯಾದ  ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಕಾಂಗ್ರೆಸ್ ನೀಡಿದ ಕೊಡುಗೆ ಜನತೆಗೆ ತಿಳಿಸಿದರೆ ಹೊಸ ಪ್ರಚಾರದ ಅವಶ್ಯಕತೆ ಇರುವುದಿಲ್ಲ.

ಸಿದ್ದಾಪುರ: ಕಾಂಗ್ರೆಸ್ ನೀಡಿದ ಕೊಡುಗೆ ಜನತೆಗೆ ತಿಳಿಸಿದರೆ ಹೊಸ ಪ್ರಚಾರದ ಅವಶ್ಯಕತೆ ಇರುವುದಿಲ್ಲ, ಪಕ್ಷದ ಬಗ್ಗೆ ಯುವಕರಲ್ಲಿ ತಿಳಿವಳಿಕೆ ನೀಡಿದಾಗ ಪಕ್ಷ ಬಲಗೊಳ್ಳುತ್ತದೆ. ಸಂಘಟನೆಯಾಗುತ್ತದೆ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಜಿ.ಟಿ. ನಾಯ್ಕ ಮಣಕಿನಕುಳಿ ಹೇಳಿದರು.

ಅವರು ತಾಲೂಕಿನ ಮಾಸ್ತಿಹಕ್ಲನಲ್ಲಿ ವಾಜಗೋಡ ಕಾಂಗ್ರೆಸ್ ಘಟಕ ಹಾಗೂ ಯುವ ಘಟಕದಿಂದ ರಾಜ್ಯ ಯುವ ಕಾಂಗ್ರೆಸ್‌ಗೆ ಆಯ್ಕೆಯಾದ ತಾಲೂಕಿನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅವರು ಹಲವಾರು ಬಾರಿ ಸೋಲು ಕಂಡು ಕೊನೆಗೆ ಗೆಲುವು ಕಂಡಿದ್ದಾರೆ. ಅವರ ಅನುಭವ ಪಡೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ. ನಾವು ನಮ್ಮ ಪಕ್ಷದಲ್ಲಿಯೇ ವಿರೋಧ ಮಾಡಬಾರದು, ವೈಯಕ್ತಿಕ ವಿಚಾರವನ್ನು ರಾಜಕೀಯಕ್ಕೆ ತರಬಾರದು. ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಸಮಾನವಾದ ಭಾವನೆಯಿಂದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಜಿಪಂ ಮಾಜಿ ಸದಸ್ಯ ವಿ.ಎನ್. ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ, ಯುವ ಕಾಂಗ್ರೆಸ್‌ಗೆ ಆಯ್ಕೆಯಾದ ಯುವ ನಾಯಕರಿಗೆ ಕಾಂಗ್ರೆಸ್ ಇತಿಹಾಸ, ಕಾಂಗ್ರೆಸ್‌ನ ಕೊಡುಗೆಗಳ ಬಗ್ಗೆ ಪರಿಣತ ನಾಯಕರಿಂದ ತಿಳಿವಳಿಕೆ ತರಬೇತಿ ಆಯೋಜನೆ ಮಾಡಬೇಕು. ಪಕ್ಷದ ಬಗ್ಗೆ ತಿಳಿವಳಿಕೆ ಇದ್ದರೆ ಮಾತನಾಡಲು ಉತ್ಸಾಹ ಬರುತ್ತದೆ. ನಾಯಕನಿಗೆ ಭಾಷಣ ಕಲೆ ಅತಿ ಮುಖ್ಯ. ಪಕ್ಷದ ಕೊಡುಗೆಯ ಬಗ್ಗೆ ತಿಳಿದುಕೊಂಡಾಗ ಧೈರ್ಯದಿಂದ ಮಾತನಾಡಬಹುದು. ಹಾಗಾಗಿ ಭಾಷಣದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು.

ಹಿರಿಯ ವಕೀಲ ಎನ್.ಡಿ. ನಾಯ್ಕ್ ಐಸೂರ್ ಮಾತನಾಡಿ, ಜೀವನದಲ್ಲಿ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ನಾಯಕರಾಗಿ ಹೊರಹೊಮ್ಮಿ ಎಂದರು.

ದೊಡ್ಮನೆ ಗ್ರಾಪಂ ಸದಸ್ಯ ಬೀರಾ ಗೌಡ, ಜಿಪಂ ಮಾಜಿ ಸದಸ್ಯೆ ಇಂದಿರಾ ನಾಯ್ಕ, ಪ್ರಮುಖರಾದ ಸಿ.ಆರ್. ನಾಯ್ಕ, ಎನ್.ಎಸ್.ಯು.ಐ. ಜಿಲ್ಲಾ ಅಧ್ಯಕ್ಷ ವಿಶ್ವ ಗೌಡ ಮಾತನಾಡಿದರು. ವಾಜಗೋಡು ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ಎಸ್.ಎಂ. ಭಟ್ಟ, ಸದಸ್ಯ ಸುರೇಶ್ ನಾಯ್ಕ, ಸದಸ್ಯೆ ಲಲಿತ ಹಸ್ಲರ್ ಮತ್ತಿತರರು ಉಪಸ್ಥಿತರಿದ್ದರು.

ವಾಜಗೋಡು ಪಂಚಾಯಿತಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಐ.ಕೆ. ನಾಯ್ಕ ಸ್ವಾಗತಿಸಿದರು. ಉದಯ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ