ನಾಡಿದ್ದು ತಕ್ಷಶಿಲ ಬುದ್ಧವಿಹಾರ ಟ್ರಸ್ಟ್‌ ಉದ್ಘಾಟನೆ

KannadaprabhaNewsNetwork |  
Published : Mar 14, 2025, 12:34 AM IST
ಮಾ.೧೬ ಕ್ಕೆ ತಕ್ಷಶಿಲ ಬುದ್ದ ವಿಹಾರ ಟ್ರಸ್ಟ್‌ ಉದ್ಘಾಟನೆ | Kannada Prabha

ಸಾರಾಂಶ

ಗುಂಡ್ಲುಪೇಟೆಯಲ್ಲಿ ತಕ್ಷಶಿಲ ಬುದ್ಧ ವಿಹಾರ ಟ್ರಸ್ಟ್‌ ಅಧ್ಯಕ್ಷ ಸುಭಾಷ್‌ ಮಾಡ್ರಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬರುವ ಮಾ.೧೬ ರಂದು ಪಟ್ಟಣದಲ್ಲಿ ತಕ್ಷಶಿಲ ಬುದ್ಧ ವಿಹಾರ ಚಾರಿಟಬಲ್‌ ಟ್ರಸ್ಟ್‌ ಉದ್ಘಾಟನೆ ಸಮಾರಂಭ ನಡೆಯಲಿದೆ ಎಂದು ತಕ್ಷಶಿಲ ಬುದ್ಧ ವಿಹಾರ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಸುಭಾಷ್‌ ಮಾಡ್ರಹಳ್ಳಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾ.೧೬ ರ ಬೆಳಗ್ಗೆ ೧೦.೩೦ ಗಂಟೆಗೆ ಪಟ್ಟಣದ ದರ್ಶನ್‌ ಕನ್ವೆನ್ಷಲ್‌ ಹಾಲ್‌ನಲ್ಲಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ ಎಂದರು. ಮೈಸೂರು ವಿಶ್ವ ಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣ ಸಿರಿ ಬಂತೇಜಿ ಸಾನ್ನಿಧ್ಯದಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ತಕ್ಷಶಿಲ ಬುದ್ಧ ವಿಹಾರ ಚಾರಿಟಬಲ್‌ ಟ್ರಸ್ಟ್‌ ಉದ್ಘಾಟನೆ ಮಾಡಲಿದ್ದಾರೆ ಎಂದರು. ತಕ್ಷಶಿಲ ಬುದ್ಧ ವಿಹಾರ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಸುಭಾಷ್‌ ಮಾಡ್ರಹಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ಎನ್.ಮಹೇಶ್‌ ಲೋಗೋ ಅನಾವರಣ ಮಾಡಲಿದ್ದಾರೆ ಎಂದರು.

ಸಂಸದ ಸುನೀಲ್‌ ಬೋಸ್‌ ಕ್ಯಾಲೆಂಡರ್‌ ಬಿಡುಗಡೆ ಮಾಡಲಿದ್ದು, ವಿಚಾರವಾದಿ, ನಟ ಚೇತನ್‌ ಅಹಿಂಸಾ ಪುಷ್ಪಾರ್ಚನೆ ಮಾಡಲಿದ್ದಾರೆ. ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್‌ ಟ್ರಸ್ಟ್‌ ವರದಿ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ,ವಿಚಾರವಾದಿ ಮೂಡ್ನಾಕೂಡು ಚಿನ್ನಸ್ವಾಮಿ, ಅಕ್ಕ ಐಎಎಸ್‌ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್‌ ವಿಚಾರ ಮಂಡನೆ ಮಾಡಲಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೈಸೂರು ವಲಯ ಜಂಟಿ ನಿರ್ದೇಶಕ ಡಾ.ಲಕ್ಷ್ಮಮ್ಮ,ವಿಚಾರವಾದಿ ಹ.ರಾ.ಮಹೇಶ್‌, ಉದ್ಯಮಿ ಸುಜಾತ ಹಾಗೂ ಯುವ ವಿಜ್ಞಾನಿ ಡಾ.ನವೀನ್‌ ಮೌರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ದಸಂಸ ಹಿರಿಯ ಮುಖಂಡ ಬಿ.ಡಿ.ಶಿವಬುದ್ಧಿ, ಸಮಾಜ ಸೇವಕ, ವಿಮರ್ಶಕ ಸ್ವಾಮಿ ಮರಳಾಪುರ, ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಡಾ.ರತ್ನಮ್ಮ, ಚಿಂತಕ ಡಾ.ಕೃಷ್ಣಮೂರ್ತಿ ಚಮರಂ, ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕಬ್ಬೇಪುರ ಸಿದ್ದರಾಜು, ವಕೀಲ ಉಮೇಶ, ಗ್ರಾಪಂ ಅಧ್ಯಕ್ಷ ಆರ್.ಡಿ.ಉಲ್ಲಾಸ್‌, ವಿಷಕಂಠ, ಎಂಜಿನಿಯರ್‌ ಲೋಕೇಶ್‌ ಎಂ.ಎಸ್‌,ಸಾಹಿತಿ ಮದ್ದಯ್ಯನಹುಂಡಿ ನಾಗರಾಜುಗೆ ಸನ್ಮಾನ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ತಕ್ಷಶಿಲ ಬುದ್ದ ವಿಹಾರ ಟ್ರಸ್ಟ್‌ನ ಆರ್.ಸೋಮಣ್ಣ, ಮುತ್ತ, ಕಿಲಗೆರೆ ಬಸವಣ್ಣ,ಮಲ್ಲೇಶ್‌, ವಕೀಲ ಕೋಟೆಕೆರೆ ಮಾಧು ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ