ಶೃಂಗೇರಿಭಾರತೀಯ ಸಂಸ್ಕೃತಿ ಪರಂಪರೆ ಪ್ರಾಚೀನವಾದುದು. ಪ್ರತಿಯೊಬ್ಬರೂ ನಮ್ಮ ಸಂಸ್ಕೃತಿಯನ್ನು ಸಮಾನವಾಗಿ ಗೌರವಿಸಬೇಕು.ವಿಶಾಲ ಮನೋಭಾವನೆ,ವಿಶಾಲ ದೃಷ್ಠಿಕೋನ ಬೆಳೆಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಹರಿಹರಪುರ ಪೀಠಾಧೀಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಮೆಣಸೆ ಮಂಡಲ ಹಿಂದೂಸಮಾಜೋತ್ಸವದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ
ಕನ್ನಡಪ್ರಭ ವಾರ್ತೆ, ಶೃಂಗೇರಿಭಾರತೀಯ ಸಂಸ್ಕೃತಿ ಪರಂಪರೆ ಪ್ರಾಚೀನವಾದುದು. ಪ್ರತಿಯೊಬ್ಬರೂ ನಮ್ಮ ಸಂಸ್ಕೃತಿಯನ್ನು ಸಮಾನವಾಗಿ ಗೌರವಿಸಬೇಕು.ವಿಶಾಲ ಮನೋಭಾವನೆ,ವಿಶಾಲ ದೃಷ್ಠಿಕೋನ ಬೆಳೆಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಹರಿಹರಪುರ ಪೀಠಾಧೀಶ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಮೆಣಸೆ ಪಂಚಾಯಿತಿ ಕಲ್ಕಟ್ಟೆಯಲ್ಲಿ ನಡೆದ ಕೂತಗೋಡು ಹಾಗೂ ಮೆಣಸೆ ಮಂಡಲ ಹಿಂದೂಸಮಾಜೋತ್ಸವದ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ಬದಲಾವಣೆ ಜಗದ ನಿಯಮ. ಹಿಂದೂ ಸಮಾಜ ಕಟ್ಟಲು ಪ್ರತಿಯೊಬ್ಬರೂ ಪಣ ತೊಡಬೇಕು. ದ್ವೇಷ, ಅಸೂಯೆಯಿಂದ ಸಮಾಜ ಕಟ್ಟಲು ಸಾದ್ಯವಿಲ್ಲ. ಪರಸ್ಪರ ಪ್ರೀತಿ, ಸಾಮರಸ್ಯ, ಸಹೋಧರತ್ವದಿಂದ ಮಾತ್ರ ಸಾಧ್ಯ ಎಂದು ಹೇಳಿದರು.ವೈವಿದ್ಯತೆಯಲ್ಲಿ ಏಕತೆ ಇರುವಂತಹ ಸಂಸ್ಕೃತಿ ನಮ್ಮದು. ವೈವಿದ್ಯತೆ ವಿಜೃಂಭಿಸಲು ಹೋಗಬಾರದು.ಎಲ್ಲರೂ ಒಂದೇ ಎನ್ನುವ ಭಾವನೆ ನಮ್ಮಲ್ಲಿ ಬರಬೇಕು. ಜಾತಿ, ಮತ ನೋಡಬೇಡಿ. ಪ್ರೀತಿಯಿಂದ ಸಮಾಜ ಕಟ್ಟಿ ಬೆಳೆಸಬೇಕು. ದೇವರ ಮೇಲೆ ಅಚಲವಾದ ಭಕ್ತಿ, ನಂಬಿಕೆ ಇದ್ದಾಗ ಮಾತ್ರ ಭಗವಂತನ ಅನುಗ್ರಮ ಸಿಗುತ್ತದೆ. ಪ್ರತಿಯೊಬ್ಬರೂ ಧಾರ್ಮಿಕ, ಸಾಮಾಜಿಕ ಕೆಲಸಗಳನ್ನು ತೊಡಗಿಸಿಕೊಳ್ಳಬೇಕು. ನಮ್ಮಲ್ಲಿ ಯಾವಾಗ ನಾವೆಲ್ಲ ಒಂದು ಎನ್ನುವ ಭಾವನೆ ಬರುತ್ತದೆಯೋ ಆಗ ಮಾತ್ರ ಹಿಂದೂ ಸಮಾಜ,ಧರ್ಮ,ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯ ಎಂದರು.
ಭಾರತೀಯ ಸಂಸ್ಕೃತಿ ತಪಸ್ಸಿಗೆ ಬೆಲೆಕೊಡುವ ಸಂಸ್ಕೃತಿ, ದೇಶ ಧರ್ಮ ಒಡೆಯುವ ಕೆಲಸ ನಡೆಯುತ್ತಿರುವುದು ಅಪಾಯಕಾರಿ. ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ,ಆಚರಣೆಗಳಲ್ಲಿ ರಾಜಕೀಯ ತರಬೇಡಿ. ಇದನ್ನು ಪ್ರತಿಯೊಬ್ಬರೂ ವಿರೋಧಿಸಬೇಕು. ವಿರೋಧಿಸುವ ದಿಟ್ಟತನ ಬೆಳೆಸಿಕೊಳ್ಳಬೇಕು. ಜಾತಿಯತೆ, ಅಸಮಾನತೆ ಸಂಪೂರ್ಣವಾಗಿ ಹೋಗಲಾಡಿಸಬೇಕು ಎಂದರು.ಹಿಂದೂ ಸಮಾಜ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಾ ಬಂದಿದೆ. ಕಳೆದ ನೂರು ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೂ ಸಮಾಜ,ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಾ ಬಂದಿದೆ. ನಮ್ಮ ಧರ್ಮ,ಸಂಸ್ಕೃತಿಯ ವಿಷಯದಲ್ಲಿ ರಾಜಿ ರಹಿತವಾಗಿರಬೇಕು. ಹಿಂದೂಗಳು ಒಗ್ಗಟ್ಟಾಗಬೇಕು. ಜಾಗೃತರಾಗಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಪ್ರೇಮಾನಂದ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.ಹಿಂದೂ ಸಮಾಜೋತ್ಸವ ಆಚರಣಾ ಸಮೀತಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
2 ಶ್ರೀ ಚಿತ್ರ 3-ಶೃಂಗೇರಿ ತಾಲೂಕಿನ ಕಲ್ಕಟ್ಟೆಯಲ್ಲಿ ನಡೆದ ಕೂತಗೋಡು ಹಾಗೂ ಮೆಣಸೆ ಮಂಡಲ ಹಿಂದೂ ಸಮಾಜೋತ್ಸವದಲ್ಲಿ ಹರಿಹರ ಪುರ ಶ್ರೀಗಳು ಆಶೀರ್ವಚನ ನೀಡಿದರು.