ಕ್ಯೂಎಸ್ ಸಬ್ಜೆಕ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮಾಹೆಯಿಂದ ಉತ್ತಮ ಸಾಧನೆ

KannadaprabhaNewsNetwork |  
Published : Mar 14, 2025, 12:34 AM IST
13ಮಾಹೆ | Kannada Prabha

ಸಾರಾಂಶ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಮಾಹೆ) 2025ನೇ ಸಾಲಿನ ಕ್ವಾಕ್ವರೆಲ್ಲಿ ಸೈಮಂಡ್ಸ್ (ಕ್ಯೂಎಸ್) ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕ ಪಟ್ಟಿಯಲ್ಲಿ ಮಹತ್ತರ ಸಾಧನೆ ಮಾಡಿದೆ. ಮಾಹೆಯ 8 ಸೀಮಿತ ವಿಷಯಗಳಲ್ಲಿ ಮತ್ತು ಒಂದು ವಿಸ್ತಾರ ವಿಷಯದಲ್ಲಿ ಈ ಸಾಧನೆ ಮಾಡಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ (ಮಾಹೆ) 2025ನೇ ಸಾಲಿನ ಕ್ವಾಕ್ವರೆಲ್ಲಿ ಸೈಮಂಡ್ಸ್ (ಕ್ಯೂಎಸ್) ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕ ಪಟ್ಟಿಯಲ್ಲಿ ಮಹತ್ತರ ಸಾಧನೆ ಮಾಡಿದೆ. ಮಾಹೆಯ 8 ಸೀಮಿತ ವಿಷಯಗಳಲ್ಲಿ ಮತ್ತು ಒಂದು ವಿಸ್ತಾರ ವಿಷಯದಲ್ಲಿ ಈ ಸಾಧನೆ ಮಾಡಿದೆ.

ವಿಸ್ತಾರ ವಿಷಯದಲ್ಲಿ ಮಾಹೆಯು ಜೀವ ವಿಜ್ಞಾನ ವಿಭಾಗದಲ್ಲಿ ಕಳೆದ ವರ್ಷ 317ನೇ ಸ್ಥಾನದಲ್ಲಿದ್ದು, ಈ ಬಾರಿ 293ನೇ ಸ್ಥಾನ ಪಡೆದು, 24 ಶ್ರೇಯಾಂಕಗಳ ಏರಿಕೆ ಕಂಡಿದೆ.ಸೀಮಿತ ವಿಷಯಗಳಲ್ಲಿ ಮಾಹೆಯ ಕೆಮಿಕಲ್ ಎಂಜಿನಿಯರಿಂಗ್ ವಿಭಾಗವು 401-450, ಎಕಾನಾಮಿಕ್ಸ್ ಆ್ಯಂಡ್ ಎಕನಾಮೆಟ್ರಿಕ್ಸ್ ವಿಭಾಗವು 551-700, ಫಾರ್ಮಸಿ ಆ್ಯಂಡ್ ಫಾರ್ಮಕಾಲಜಿ ವಿಭಾಗವು 101-150, ರಸಾಯನಶಾಸ್ತ್ರ ವಿಭಾಗವು 501-550, ದಂತ ವೈದ್ಯಕೀಯ ವಿಭಾಗವು 51-120, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇನ್ಫಾರ್ಮೇಷನ್ ಸಿಸ್ಟಮ್ಸ್ ವಿಭಾಗವು 601-650, ಮೆಡಿಸಿನ್ ವಿಭಾಗವು 251-300 ಮತ್ತು ಬಯಾಲಾಜಿಕಲ್ ಸೈನ್ಸಸ್ ವಿಭಾಗವು 501-550ರ ನಡುವಿನ ಶ್ರೇಯಾಂಕಗಳನ್ನು ಗಳಿಸಿವೆ.ಈ ಸಾಧನೆ ಕುರಿತು ಮಾಹೆಯ ಉಪಕುಲಪತಿ ಲೆ.ಜ. (ಡಾ.) ಎಂ.ಡಿ. ವೆಂಕಟೇಶ್, ಈ ಶ್ರೇಯಾಂಕಗಳಿಂದ ಮಾಹೆಯ ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆಯ ಪರಿಚಯವಾಗುತ್ತಿದೆ. ಜಾಗತಿಕ ಮಟ್ಟದ ಈ ಶ್ರೇಯಾಂಕದಲ್ಲಿನ ನಮ್ಮ ಸ್ಥಿರತೆಯು ವಿವಿಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ಮಾನ್ಯತೆಯಿಂದ ನಮ್ಮ ಉತ್ತಮ ಶೈಕ್ಷಣಿಕ ವಾತಾವರಣ, ಸಂಶೋಧನೆ ಮತ್ತು ಸಮಾಜ ಪರಿವರ್ತಿಸುವ ಶಿಕ್ಷಣದ ಬಗ್ಗೆ ನಮ್ಮ ಬದ್ಧತೆಯು ಇನ್ನಷ್ಟು ಬಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ