ಶಿಕ್ಷಣ ಪಡೆದವರು ಸಮಾಜದಲ್ಲಿ ಬೆಳೆಯಲು ಸಾಧ್ಯ: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Sep 15, 2025, 01:00 AM IST
13ಕೆಕೆಡಿಯು1. | Kannada Prabha

ಸಾರಾಂಶ

ಕಡೂರು, ಯಾವ ವ್ಯಕ್ತಿ ಶಿಕ್ಷಣದಿಂದ ವಂಚಿತರಾಗಿರುತ್ತಾರೋ ಅಂತವರು ಮದ್ಯ ವ್ಯಸನಿಗಳಾಗುತ್ತಾರೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

- ಪಟ್ಟಣದಲ್ಲಿ ಆಯೋಜಿಸಿದ್ದ 1980 ನೇ ಮದ್ಯವರ್ಜನ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕಡೂರು

ಯಾವ ವ್ಯಕ್ತಿ ಶಿಕ್ಷಣದಿಂದ ವಂಚಿತರಾಗಿರುತ್ತಾರೋ ಅಂತವರು ಮದ್ಯ ವ್ಯಸನಿಗಳಾಗುತ್ತಾರೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ, ಜನ ಜಾಗೃತಿ ವೇದಿಕೆ ಮತ್ತಿತರ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ 1980 ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಾವಿರಾರು ಜನರು ಶಿಕ್ಷಣದಿಂದ ವಂಚಿತರಾಗಿ ನಿರುದ್ಯೋಗ, ಬಡತನ ಅನುಭವಿಸುವವರು ಮದ್ಯವ್ಯಸನಿಗಳಾಗುವ ಸಂಭವ ಹೆಚ್ಚಾಗಿದೆ. ಆದ್ದರಿಂದ ಶಿಕ್ಷಣ ಕಲಿಯಲು ಪ್ರತಿಯೊಬ್ಬರು ಮುಂದಾಗಬೇಕು. ಶಿಕ್ಷಣ ಕಲಿತವರು ಸಮಾಜದಲ್ಲಿ ಬೆಳೆಯಲು ಸಾಧ್ಯ ಇದರ ಜೊತೆಗೆ ಉದ್ಯೋಗ ಗಳಿಸಬಹುದು, ಸೃಷ್ಠಿಸಲುಬಹುದು ಮತ್ತು ಜನ ಸಾಮಾನ್ಯರೊಂದಿಗೆ ಬೆರೆಯಬಹುದು ಎಂಬ ಸಂದೇಶವನ್ನು ಶಿಬಿರಾರ್ಥಿಗಳಿಗೆ ನೀಡಿದರು.ಪುರಸಭೆ ಕೂಡ ಮದ್ಯಪಾನ ಬಿಡಿಸುವ ಸಂಸ್ಥೆಗೆ ಕಡೂರು ಪಟ್ಟಣದಲ್ಲಿ ಕಟ್ಟಡ ನೀಡಿದ್ದು ಶಿಬಿರಾರ್ಥಿಗಳು ಮದ್ಯಪಾನ ಬಿಟ್ಟು ಸಂಸಾರ, ಸಂಸ್ಕೃತಿಯತ್ತ ಮುಖ ಮಾಡಿರುವುದನ್ನು ಕಂಡಿದ್ದೇವೆ. ಶ್ರೀ ಕ್ಷೇತ್ರ ನಡೆಸುತ್ತಿರುವ ಇಂತಹ ಅನೇಕ ಕಾರ್ಯಕ್ರಮ ಗಳಿಗೆ ಪುರಸಭೆ ಸಹಕಾರ ನೀಡುತ್ತಿದೆ ಎಂದರು.ಧ.ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಬಡತನ, ಕೂಲಿ ಕಾರ್ಮಿಕರ ಸಂಸಾರಗಳಿಗೆ ಬೆಳಕು ತುಂಬಿದ ಕ್ಷೇತ್ರ ಧರ್ಮಸ್ಥಳ ಎಂದರೆ ತಪ್ಪಾಗಲಾರದು. ಕುಡಿಸುವವರು ಹೆಚ್ಚಿಗೆ ಇದ್ದಾರೆ ಅದರೆ ಬಿಡಿಸುವವರು ನಮ್ಮ ವೀರೇಂದ್ರ ಹೆಗ್ಗಡೆಯವರು ಮಾತ್ರ ಎಂದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಈವರೆಗೆ 85 ಮದ್ಯವರ್ಜನ ಶಿಬಿರಗಳು ನಡೆದಿದ್ದು ಅಂದಾಜು 1,375 ಜನ ಸುಖ ಸಂಸಾರದತ್ತ ಮುಖಮಾಡಿ ಜೀವನ ರೂಪಿಸಿಕೊಂಡಿದ್ದಾರೆ. ಅನೇಕರ ಜೀವನ ಕುಡಿತದಿಂದ ನರಕವಾಗಿತ್ತು ಅಂತವರ ಬಾಳಿಗೆ ಶ್ರೀ ಕ್ಷೇತ್ರ ಬೆಳಕು ಮೂಡಿಸಿದೆ ಎಂದರು. ಶ್ರೀವೀರಭದ್ರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಭರತ್‌ ಕೆಂಪರಾಜ್ ಮಾತನಾಡಿ, ವ್ಯಾಪಾರಿ ಮತ್ತು ಸರ್ಕಾರ ಹೊಟ್ಟೆ ತುಂಬಿಸಿಕೊಳ್ಳಲು ನಿಮ್ಮನ್ನು ವ್ಯಸನಿಗಳನ್ನಾಗಿ ಮಾಡುತ್ತಿದೆ. ಸಮಾಜದ ವ್ಯವಸ್ಥೆಯೇ ಹದಗೆಟ್ಟಿದ್ದು, ಶ್ರೀ ಕ್ಷೇತ್ರ ಶಾಪ ವಿಮೋಚನೆ ಮಾಡುತ್ತಿದ್ದು ಶಿಬಿರಾರ್ಥಿಗಳು 8 ದಿನಗಳ ಕಾಲ ಭಾಗವಹಿಸಿ ನಿಮ್ಮ ಜೀವನ ಪುನರ್ ರೂಪಿಸಿಕೊಳ್ಳಿ ಎಂದರು.ಶ್ರೀ ಕ್ಷೇತ್ರದ ಶಿಬಿರಾಧಿಕಾರಿ ದಿವಾಕರ್ ಪೂಜಾರಿ ಮಾತನಾಡಿ, 1997ರಲ್ಲಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಆರಂಭಿಸಿದ ಮದ್ಯವರ್ಜನ ಶಿಬಿರದಲ್ಲಿ ಈವರೆಗೂ 1.30 ಲಕ್ಷ ಜನ ಪಾನಮುಕ್ತರಾಗಿದ್ದಾರೆ ಇಂತಹ ಕಾರ್ಯ ಯಾವುದೇ ಸರ್ಕಾರಗಳಿಂದ ನಡೆದಿಲ್ಲ. ಪಾನ ಮುಕ್ತರಾದವರಲ್ಲಿ ಜನಪ್ರತಿನಿಧಿಗಳು, 900 ಜನ ಗ್ರಾ.ಪಂ ಸದಸ್ಯರು, ರಾಷ್ಟ್ರ ಪ್ರಶಸ್ತಿ ವಿಜೇತರು ಸಮಾಜ ಮುಖಿಯಾಗಿ ಬೆಳೆದಿದ್ದಾರೆ ಎಂದು ಮಾಹಿತಿ ನೀಡಿದರು.ಬಿಜೆಪಿ ಮುಖಂಡ ಜಿಗಣೆಹಳ್ಳಿ ನೀಲಕಂಠಪ್ಪ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿಗೆ ಬಡತನ, ಕೂಲಿ ಕಾರ್ಮಿಕರು ವ್ಯಸನಿಗಳಾಗಿದ್ದು ಅನೇಕ ಹೆಣ್ಣು ಮಕ್ಕಳ ಕಣ್ಣಿಗೆ, ಶ್ರೀ ಕ್ಷೇತ್ರ ಮದ್ಯವರ್ಜನ ಶಿಬಿರ ಏರ್ಪಡಿಸಿ ಪಾನಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಟ್ಟು ನಿಂತಿರುವ ಏಕೈಕ ಸಂಸ್ಥೆ ಎಂದರೆ ಶ್ರೀ ಕ್ಷೇತ್ರದ ಯೋಜನೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಉದ್ಯೋಗ-ಹಣಕಾಸಿನ ಸಹಾಯ ನೀಡಿ, ಕೋಟ್ಯಾಂತರ ಜನರು ಜೀವನ ರೂಪಿಸಿಕೊಳ್ಳುವಲ್ಲಿ ಶ್ರೀ ಕ್ಷೇತ್ರ ರಾಜ್ಯದ 2ನೇ ಸರ್ಕಾರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರೆ ತಪ್ಪಾಗಲಾರದು. ಇಂತಹ ಸಾವಿರಾರು ಕುಟುಂಬಗಳು ಶ್ರೀ ಮಂಜುನಾಥಸ್ವಾಮಿ ಆಶಿರ್ವಾದದಿಂದ ಜೀವನ ನಡೆಸುತ್ತಿದ್ದಾರೆ ಎಂದರು.

ಜನ ಜಾಗೃತಿ ವೇದಿಕೆ ಅಜ್ಜಂಪುರದ ಎ.ಸಿ.ಚಂದ್ರಪ್ಪ, 1980 ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷ ರವಿಶಂಕರ್ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು. ಕಡೂರು ತಾಲೂಕು ಯೋಜನಾಧಿಕಾರಿ ಕೆ.ಬೇಬಿ, ಮೇಲ್ವಿಚಾರಕ ತಿಮ್ಮಪ್ಪ, ಅಮಿತಾ, ರಂಜಿತಾ, ಅಶೋಕ್ ಮತ್ತು ಸಿಬ್ಬಂದಿ ಹಾಗೂ 50ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಇದ್ದರು.

13ಕೆಕೆಡಿಯು1.ಕಡೂರು ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ 1980ನೇ ಮದ್ಯವರ್ಜನ ಶಿಬಿರವನ್ನು ಪುರಸಭೆ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಉದ್ಘಾಟಿಸಿದರು. ರವಿಶಂಕರ್, ಎ.ಸಿ.ಚಂದ್ರಪ್ಪ, ಬಂಗೇರಾ, ಬೇಬಿ ಮತ್ತಿತರರು ಇದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ