ಶಿಕ್ಷಣ ಪಡೆದ ವಿದ್ಯಾರ್ಥಿ ದೇಶದ ಆಸ್ತಿ: ಕೃಷ್ಣಾವಧೂತ ಶ್ರೀ

KannadaprabhaNewsNetwork |  
Published : Apr 12, 2025, 12:47 AM IST
 ಜಮಖಂಡಿ ನಗರದ ರುದ್ರಾವಧೂತ ಮಠದ ಸಭಾ ಭವನದಲ್ಲಿ ನಡೆದ ಶ್ರೀ ರುದ್ರಾವಧೂತ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ೬ನೇ ವರ್ಷದ ಉಚಿತ ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ಸಹಜಾನಂದ ಅವಧೂತರು ಹಾಗೂ ಕೃಷ್ಣಾನಂದ ಅವಧೂತರು ಉದ್ಘಾಟಿಸಿದರು, | Kannada Prabha

ಸಾರಾಂಶ

ಶಿಕ್ಷಣ ಪಡೆದುಕೊಂಡ ಪ್ರತಿಯೊಬ್ಬ ವಿದ್ಯಾರ್ಥಿ ದೇಶದ ದೊಡ್ಡ ಆಸ್ತಿಯಾಗಲು ಸಾಧ್ಯ ಎಂದು ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಶಿಕ್ಷಣ ಪಡೆದುಕೊಂಡ ಪ್ರತಿಯೊಬ್ಬ ವಿದ್ಯಾರ್ಥಿ ದೇಶದ ದೊಡ್ಡ ಆಸ್ತಿಯಾಗಲು ಸಾಧ್ಯ ಎಂದು ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು ಹೇಳಿದರು.

ನಗರದ ರುದ್ರಾವಧೂತ ಮಠದ ಸಭಾಭವನದಲ್ಲಿ ನಡೆದ ರುದ್ರಾವಧೂತ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ 6ನೇ ವರ್ಷದ ಉಚಿತ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮಠಮಾನ್ಯಗಳು ಉಚಿತ ಶಿಕ್ಷಣ ನೀಡುತ್ತಿದ್ದು, ಅದರ ಸದುಪಯೋಗ ಪಡಿಸಿಕೊಂಡು ಹೆತ್ತ ತಂದೆ, ತಾಯಿ, ಕಲಿಸಿದ ಗುರು ಹಾಗೂ ಕಲಿತಿರುವ ಮಠದ ಕೀರ್ತಿ ತರುವ ವಿದ್ಯಾರ್ಥಿಗಳು ತಾವಾಗಬೇಕು ಎಂದು ಹೇಳಿದರು.

ಬೇಸಿಗೆ ಶಿಬಿರದಲ್ಲಿ ಬೇರೆ ಕಡೆಗಳಲ್ಲಿ ಸಾವಿರಾರು ಹಣ ನೀಡಿ ಶಿಕ್ಷಣ ಪಡೆದುಕೊಳ್ಳುತ್ತಾರೆ. ಆದರೆ ಬಡ ವಿದ್ಯಾರ್ಥಿಗಳು ಸಾವಿರಾರು ಹಣ ಕೊಟ್ಟು ಶಿಕ್ಷಣ ಕಲಿಯಲು ಸಾಧ್ಯವಿಲ್ಲ. ಆದ ಕಾರಣ ರುದ್ರಾವಧೂತ ಮಠದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಉಚಿತ ಪಠ್ಯಪುಸ್ತಕ, ಪೆನ್ನುಗಳು, ಊಟ ಉಪಚಾರ, ವಸತಿ, ಪ್ರತಿನಿತ್ಯ ಬಳಸುವ ವಸ್ತುಗಳು, ಪೇಸ್ಟ್, ಬ್ರಶ್ ಸೇರಿ ವಿದ್ಯಾರ್ಥಿಗೆ ಬೇಕಾಗುವ ಸಾಮಗ್ರಿಗಳನ್ನು ಉಚಿತವಾಗಿ ನೀಡುವ ಜೊತೆಗೆ ನುರಿತ ಶಿಕ್ಷಕ, ಶಿಕ್ಷಕಿಯರಿಂದ ಬೋಧನೆ ಮಾಡಲಿದ್ದಾರೆ. ಮಠದ ಹಿರಿಯ ಪೀಠಾಧಿಕಾರಿ ಸಹಜಾನಂದ ಅವಧೂತರು, ನಗರಸಭೆ ಸದಸ್ಯ ಸಿದ್ದು ಮೀಶಿ, ಅಶೋಕ ಮೀಶಿ, ಸುರೇಂದ್ರ ಕಡಕೋಳ, ರವಿ ಲಗಳಿ, ಬಿ.ಬಿ. ಮನಗೂಳಿ, ಜಗದೀಶ ಕಾಂಬಳೆ ಮಾತನಾಡಿದರು.

ಪ್ರಕಾಶ ಮೀಶಿ, ಶಿವಪ್ಪ ಕಡಕೋಳ, ಭೀಮಶಿ ಗಡಕರ, ಮಾದೇವ ಕಡಕೋಳ, ಜಗದೀಶ ತರತರಿ, ಶಶಿಕಾಂತ ತೇರದಾಳ, ದಿಲೀಪ ದಾಶ್ಯಾಳ, ಕುಮಾರ ಕಾಂಬಳೆ, ರುದ್ರಪ್ಪ ಲಗಳಿ, ಸತ್ಯಪ್ಪ ಕಾಂಬಳೆ, ಶ್ರೀಶೈಲ್ ಧರೆನ್ನವರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಇದ್ದರು. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌
ಸಿಎಂ ಬದಲು ಕುರಿತು ಹೇಳಿಕೆ : ಯತೀಂದ್ರಗೆ ಸಿಎಂ ಸಿದ್ದು ಕ್ಲಾಸ್‌?