ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕು ಆಡಳಿತದಿಂದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶೈಕ್ಷಣಿಕ ಬದಲಾವಣೆಯಾದರೆ ಮಾತ್ರ ದೇಶ ಪರಿವರ್ತನೆಯಾಗುತ್ತದೆ. ಶೈಕ್ಷಣಿಕ ಪ್ರಗತಿಯಲ್ಲಿ ದೇಶದ ಪ್ರಗತಿ ಅಡಗಿದೆ. ಇಂಡಿಯ ನಿಂಬೆಗೆ ದೊರಕಿರುವ ಜಿಐ ಟ್ಯಾಗ್‌ನಿಂದ ಇಂಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಚೆಲ್ಲಿದೆ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಇಂಡಿ, ಭವಿಷ್ಯದಲ್ಲಿ ಮುಂದುವರಿದ ತಾಲೂಕು ಆಗಲಿದೆ. ಸಿಎಂ ಸಿದ್ದರಾಮಯ್ಯನವರೇ ಇದನ್ನು ಹೇಳಿದ್ದಾರೆ ಎಂದು ಹೇಳಿದರು.
ಜಿಲ್ಲೆಗೆ ಮಂಜೂರು ಆಗಬೇಕಾದ ಕಾರ್ಮಿಕ ಮಕ್ಕಳ ವಸತಿ ಶಾಲೆ ಇಂಡಿ ತಾಲೂಕಿಗೆ ತಂದಿದ್ದೇನೆ. ಮಾತಿಗಿಂತ ಕಾರ್ಯಗಳು ಮಾತನಾಡಬೇಕು ಎಂಬ ಸಿದ್ಧಾಂತ ಹೊಂದಿದವನು ನಾನು. ಕೇಂದ್ರ, ರಾಜ್ಯಗಳು ಸಮನ್ವಯತೆಯಿಂದ ಆಡಳಿತ ನಡೆಸಬೇಕಾಗಿದೆ. ದೇಶಾಭಿಮಾನದಿಂದ ಹುತಾತ್ಮರ ಕನಸು ನನಸು ಮಾಡಲು ಶ್ರಮಿಸಬೇಕಾಗಿದೆ. ಡಾ.ಅಂಬೇಡ್ಕರ್ ಅವರ ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತದ ಆಧಾರದ ಮೇಲೆ ರಾಜ್ಯ ಸರ್ಕಾರ ನಡೆಯುತ್ತಿದೆ. ಜನರ ಕಲ್ಯಾಣಕ್ಕೆ ಸಂವಿಧಾನವೇ ಸ್ಫೂರ್ತಿಯಾಗಿದೆ. ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡು ನಮ್ಮದ್ದು, ತ್ಯಾಗ, ಬಲಿದಾನದಲ್ಲಿಯೂ ನಮ್ಮ ಜಿಲ್ಲೆ ಮುಂದಿದೆ. ಜಿಲ್ಲೆಯಲ್ಲಿ ಮಳೆಯಾಗಿದೆ. ಕಾಲುವೆ ಮೂಲಕವೂ ಕೆರೆಗಳು ತುಂಬಿಸಲಾಗಿದೆ. ಹೀಗಾಗಿ ರೈತ ವರ್ಗ ಖುಷಿಯಲ್ಲಿ ಇದ್ದಾರೆ. ನಾವೆಲ್ಲರೂ ದೇಶಕ್ಕಾಗಿ ಶ್ರಮಿಸೋಣ, ದೇಶಭಿಮಾನದಿಂದ ಬದುಕೋಣ ಎಂದು ಹೇಳೀದರು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಸಿ ಅನುರಾಧಾ ವಸ್ತ್ರದ ಅವರು, ನಮ್ಮ ಪೂರ್ವಜರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನ ಸ್ಮರಿಸುವ ದಿನ. ತ್ಯಾಗ, ಬಲಿದಾನದ ಮೂಲಕ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಇಂದು ನಾವೆಲ್ಲರೂ ಸಂಭ್ರಮಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಇಂಡಿ ತಾಲೂಕಿನ ದೇಶಾಭಿಮಾನಿಗಳು ಭಾಗವಹಿಸಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಭೀಮನಗೌಡ ಪಾಟೀಲ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಸಾಗರ ಬಿರಾದಾರ, ಶ್ರೀಶೈಲಗೌಡ ಪಾಟೀಲ, ಜಹಾಂಗೀರ ಸೌದಾಗರ, ಮುಸ್ತಾಕ ಇಂಡಿಕರ, ಭೀಮಾಶಂಖರ ಮೂರಮನ, ಉಮೇಶ ದೇಗಿನಾಳ, ಸತೀಶ ಕುಂಬಾರ, ಶಬ್ಬಿರ ಖಾಜಿ, ಅಯುಬ ಬಾಗವಾನ, ಜಾವೇದ ಮೋಮಿನ, ಬಾಬು ಗುಡಮಿ, ಮಹಾದೇವಪ್ಪ ಏವೂರ, ಎಚ್.ಎಸ್.ಪಾಟೀಲ, ದಯಾನಂದ ಮಠ, ಭೀಮಣ್ಣ ಕವಲಗಿ, ಸಿಪಿಐ ಪ್ರದೀಪ ಭೀಸೆ, ಪಿಎಸೈ ಸುರೇಶ ಗೆಜ್ಜಿ, ಚಂದ್ರಶೇಖರ ವಾಲಿಕಾರ, ಎಸ್.ಆರ್.ಮೇಂಡೆಗಾರ, ಮಂಜುನಾಥ ಧೂಳೆ, ಉಮೇಶ ಲಮಾಣಿ, ಎಸ್.ಬಿ.ಗದ್ಯಾಳ, ಹಣಮಂತ ಅರವತ್ತು, ಬಸವರಾಜ ರಾವೂರ, ಸಂತೋಷ ಹೊಟಗಾರ, ಸಂಜೀವ ಬೊರಗಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.