ಕನ್ನಡಪ್ರಭ ವಾರ್ತೆ ಮುಧೋಳ
ಜಿಲ್ಲಾ ಅಂಬಿಗೇರ ನೌಕರರ ಸಂಘ, ಜಿಲ್ಲಾ ಹಾಗೂ ತಾಲೂಕು ಅಂಬಿಗೇರ ಸಮಾಜ ಸೇವಾ ಸಂಘ, ತಾಲೂಕು ನಿಜಶರಣ ಅಂಬಿಗೇರ ಚೌಡಯ್ಯನವರ ಕ್ಷೇಮಾಭಿವೃದ್ಧಿ ಸಮಾಜ ಸಂಘ ಮುಧೋಳ ಇವರ ಆಶ್ರಯದಲ್ಲಿ ಭಾನುವಾರ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸೈನಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡ, ಶ್ರಮಜೀವಿಗಳ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕು. ಶ್ರೇಣೀಕೃತ ಜಾತಿ ವ್ಯವಸ್ಥೆಯ ಬದಲಿಗೆ ಮನುಷ್ಯರನ್ನು ಮನುಷ್ಯರಂತೆ ಕಾಣುವ ಸಮಾನತೆಯ ಧರ್ಮವೇ ಮುಖ್ಯ. ಈ ವ್ಯವಸ್ಥೆಯಿಂದ ಹೊರಬರಲು ನಮ್ಮಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಕೊಳ್ಳಬೇಕು. ಸಮಾಜದಲ್ಲಿನ ಅಸಮಾನತೆ ಕಿತ್ತೊಗೆಯಲು ನಾವು ಶಿಕ್ಷಣವಂತರಾಗಬೇಕು. ಪ್ರಶ್ನಿಸಲು ಕಲಿಯಬೇಕೆಂದು ಹೇಳಿದರು.ರಾಜಕೀಯ ಪ್ರಜ್ಞೆಯ ಮೂಲಕ ಶಕ್ತಿ ಪ್ರದರ್ಶನ ಸಮಾಜದಲ್ಲಿ ಸಮಾನತೆ ಎಲ್ಲಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮತದಾನದಲ್ಲಿ ಬೇಕಾದವರನ್ನು ಆಯ್ಕೆ ಮಾಡುವ ಹಕ್ಕನ್ನು ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಸ್ಮರಿಸಿದರು, ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಿ ನಿಮ್ಮ ಶಕ್ತಿಯನ್ನು ತೋರಿಸಿದರೆ, ರಾಜಕೀಯದ ಕೀಲಿ ಕೈ ನಿಮ್ಮ ಕಡೆಗೆ ಬರುತ್ತದೆ. ಜನರಲ್ಲಿ ರಾಜಕೀಯ ಪ್ರಜ್ಞೆ ಇರಬೇಕು. ಸಮಾಜಕ್ಕೆ ಬೇಕು-ಬೇಡಿಕೆಗಳನ್ನು ಈಡೇರಿಸಲು ಸದಾ ಸಿದ್ಧನಿದ್ದೇನೆ ಎಂದು ತಿಮ್ಮಾಪೂರ ಘೋಷಿಸಿದರು.
ಮನುವಾದಿಗಳಿಂದ ದೂರವಿರಿ: ಸಚಿವರ ಎಚ್ಚರಿಕೆಅಂಬಿಗೇರ ಸಮಾಜ ರಾಜಕೀಯವಾಗಿ ಬಹಳ ಹಿಂದುಳಿದಿದೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು, ಇನ್ನೊಬ್ಬರಿಗೆ ಶಕ್ತಿ ನೀಡುವ ಈ ಸಮಾಜದ ಜನರಿಗೆ ಸರ್ಕಾರದ ಸಹಾಯ ದೊರೆಯಬೇಕು, ಮುಂದಿನ ಪೀಳಿಗೆ ನಮ್ಮ ಕೊಡುಗೆ ಏನು ಎಂದು ಚಿಂತನೆ ಆಗಬೇಕು, ಸೈನಿಕ ರಂತೆ ಮುಂದೆ ಸಾಗಬೇಕು ಎಂದು ಸಚಿವ ತಿಮ್ಮಾಪೂರ ಎಚ್ಚರಿಸಿದರು.
- ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವರು