ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶ್ರೀ ಭಾಗ್ಯವಂತಿ ವಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಭಾಗ್ಯವಂತಿ ನರ್ಸಿಂಗ್ ಕಾಲೇಜ್‌ನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ್ಞಾನ ಶಕ್ತಿಯ ಜೊತೆಗೆ ಏಕಾಗ್ರತೆ ಎಂಬುವುದು ವಿದ್ಯಾರ್ಥಿಗಳಿಗೆ ಅವಶ್ಯವಿದೆ. ಏಕಾಗ್ರತೆ ರೂಢಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಕಲಿಯಬೇಕು. ಇದರಿಂದ ಪುಸ್ತಕದಲ್ಲಿಯ ಅಕ್ಷರ ಮಸ್ತಕದಲ್ಲಿ ಮೂಡಲು ಸಾಧ್ಯವಾಗಲಿದೆ ಎಂದು ಸ್ವಾಮಿ ವಿವೇಕಾನಂದರು ಹೊಂದಿದ್ದ ಅಪಾರವಾದ ಜ್ಞಾನದಿಂದ ಇಡೀ ವಿಶ್ವದಲ್ಲಿಯೇ ಅವರ ಹೆಸರು ಪ್ರಜ್ವಲಿಸಿದ್ದರು ಎಂದು ವಿವರಿಸಿದರು.
ಮುದ್ದೇಬಿಹಾಳ ಎಂಜಿವಿಸಿ ಕಾಲೇಜ್‌ನ ಉಪನ್ಯಾಸಕ ವಿ.ಎಸ್.ಲಮಾಣಿ ಮಾತನಾಡಿ, ಕೇವಲ ಶಿಕ್ಷಣ ಕಲಿಸಿದರೆ ಗುರುವಾಗುವುದಿಲ್ಲ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ತಂದೆ-ತಾಯಿಯ ಸ್ವರೂಪದಲ್ಲಿ ನಿಂತು ಸಂಸ್ಕಾರವನ್ನು ಬಿತ್ತುವಂತಹ ಕಾರ್ಯ ಮಾಡಬೇಕು. ಅಂದಾಗ ಮಕ್ಕಳಿಗೆ ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಸಂಸ್ಕಾರಯುತ ಬದುಕನ್ನು ರೂಪಿಸಿದಂತಾಗುತ್ತದೆ. ಅಂತಹ ಕಾರ್ಯವನ್ನು ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಸವಿತಾ ತಳ್ಳೊಳ್ಳಿ ಅವರು ತಾಯಿಯ ಸ್ವರೂಪದಲ್ಲಿ ಸಂಸ್ಕಾರಯುತ ಪಾಠ ಬೋಧನೆ ಮಾಡಿರುವುದು ಮಕ್ಕಳಲ್ಲಿ ನಾವು ನೀವೆಲ್ಲರೂ ಇಂದು ಕಾಣುತ್ತಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಒಬ್ಬ ತಾಯಿಯಾಗಿ ಯಾವ ರೀತಿ ತನ್ನ ಮಗುವಿಗೆ ಹೆಜ್ಜೆ ಹಾಕುವುದನ್ನು ಕಲಿಸುತ್ತಾರೋ ಹಾಗೆ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತಗೆ ಸಂಸ್ಕಾರಯುತ ಬದುಕನ್ನು ರೂಪಿಸುವಂತಹ ಕಾರ್ಯ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯಲ್ಲಿ ಮಾಡಲಾಗಿದೆ. ಇದನ್ನು ವಿದ್ಯಾರ್ಥಿಗಳ ಸಾಧನೆಯ ಹೆಜ್ಜೆಯಲ್ಲಿ ಗುರುತಿಸಬಹುದಾಗಿದೆ ಎಂದರು.
ಮಾವಿನಭಾವಿಯ ಬಸವರಾಜ ಗುರೂಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇಳಕಲ್ಲದ ವಿ.ಸಿ.ಅಕ್ಕಿ ಸ್ಮಾರಕ ಸಂಘದ ಆಡಳಿತಾಧಿಕಾರಿ ಅವಿನಾಶ ಅಕ್ಕಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೊ.ಶ್ರೀಕಾಂತ ಪಾಟೀಲ ಅವರು ಪರೀಕ್ಷೆಗಳನ್ನು ಯಾವ ರೀತಿಯಾಗಿ ಎದುರಿಸಬೇಕೆಂಬುವುದರ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಮಯದಲ್ಲಿ ಭಾಗೇಶ ತಳ್ಳೊಳ್ಳಿ, ಸ್ವಪ್ನಾ ಪಡಸಾಲಿ, ಸುಮಯ್ಯಾ ಲಾಹೋರಿ, ಭಾಗ್ಯಶ್ರೀ ಗೋನಾಳ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
-ಡಾ.ವೀರೇಶ ತಳ್ಳೊಳ್ಳಿ, ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಚಿಕ್ಕಮಕ್ಕಳ ತಜ್ಞರು.