ಶಿಕ್ಷಣದಿಂದ ಮನುಕುಲದ ಉದ್ಧಾರ ಸಾಧ್ಯ: ಡಾ ಎಸ್‌ ವಿ ಡಾಣಿ

KannadaprabhaNewsNetwork |  
Published : Jan 29, 2025, 01:30 AM IST
ಪೋಟೊ28ಕೆಎಸಟಿ2: ಕುಷ್ಟಗಿ ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ.ಎಸ್ ವಿ ಡಾಣಿ ಮಾತನಾಡಿದರು. | Kannada Prabha

ಸಾರಾಂಶ

ಸೋಶಿಯಲ್ ಮೀಡಿಯಾ ಅತಿ ಹೆಚ್ಚು ಬಳಸದೆ ಅದರಲ್ಲಿ ಬರುವಂತಹ ಪುಸ್ತಕಗಳ ಜ್ಞಾನ ಪಡೆಯಬೇಕು.

ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಇಂದಿನ ಆಧುನಿಕತೆಯ ಪರಿಣಾಮವಾಗಿ ಡಿಜಿಟಲ್ ಸಾಕ್ಷರತೆ ಬಂದಿದ್ದು, ಆ ಡಿಜಿಟಲ್ ಮೀಡಿಯಾವನ್ನು ಪಬ್ಜಿ ಗೇಮ್ ಆಡದೆ, ಸೋಶಿಯಲ್ ಮೀಡಿಯಾ ಅತಿ ಹೆಚ್ಚು ಬಳಸದೆ ಅದರಲ್ಲಿ ಬರುವಂತಹ ಪುಸ್ತಕಗಳ ಜ್ಞಾನ ಪಡೆಯಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ವಿ. ಡಾಣಿ ಹೇಳಿದರು.ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ಮುಂದೆ ಸಮಾಜದಲ್ಲಿ ತಲೆ ಎತ್ತುವಂತೆ ಮಾಡುತ್ತದೆ. ರಾಷ್ಟ್ರೀಯ ಸೇವಾ ಯೋಜನೆಯು ಶಿಬಿರವೂ ಕೌಶಲ್ಯ, ತಂತ್ರಜ್ಞಾನ, ವಿಜ್ಞಾನ ಹಾಗೂ ಉದ್ಯಮಶೀಲತೆ, ವೃತ್ತಿಪರರನ್ನಾಗಿ ಮಾಡುವ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣ ಅಸ್ತ್ರವಿದ್ದಂತೆ ಸಮರ್ಪಕವಾದ ಶಿಕ್ಷಣ ಪಡೆದುಕೊಂಡರೆ ಮನುಕುಲದ ಉದ್ಧಾರ ಸಾಧ್ಯವಾಗಲಿದೆ ಎಂದರು.ಪ್ರಾಚಾರ್ಯ ವಾದಿರಾಜ ಮಠದ ಮಾತನಾಡಿ, ಶಿಬಿರದಲ್ಲಿ ಕಲಿತ ಶಿಸ್ತು, ಜೀವನದ ಪಾಠ ಬೇರೆಯವರಿಗೆ ಮಾದರಿಯಾಗುವಂತಿರಲಿ. ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ರೂಪಗೊಳ್ಳುವಂತಾಗಲಿ ಎಂದರು.ಕಾರ್ಯಕ್ರಮಾಧಿಕಾರಿ ಡಾ. ಟಿ.ಎಸ್. ಸೌಮ್ಯಾ ಮಾತನಾಡಿ, ಶಿಬಿರವು ಸರ್ವಾಂಗಿಣ ಅಭಿವೃದ್ಧಿಯ ಕಲಿಕೆಯ ತಾಣವಾಗಿದೆ. ಶಿಬಿರದಲ್ಲಿ ಕಲಿತ ಜ್ಞಾನವು ಶಿಬಿರಕ್ಕೆ ಸೀಮಿತವಾಗದೆ ನಿಮ್ಮ ಜೀವನ ಬೆಳಗುವಂತಾಗಲಿ ನಿಮ್ಮ ಜೀವನಶೈಲಿಯಿಂದ ಬೇರೆಯವರು ಪ್ರೋತ್ಸಾಹಗೊಂಡು ಸಮಾಜದಲ್ಲೊಂದು ಚಿಕ್ಕ ಬದಲಾವಣೆಯಾಗಲಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಚೈತ್ರಾ, ಆನಂದ ದೇಸಾಯಿ ಹಾಗೂ ಉಪನ್ಯಾಸಕ ವರ್ಗದವರು ಇದ್ದರು. ಪೂರ್ಣಿಮಾ ಕಾರ್ಯಕ್ರಮದ ನಿರೂಪಿಸಿದರು. ಅಕ್ಷತಾ ಸ್ವಾಗತಿಸಿ, ಪ್ರವೀಣಕುಮಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ