ಆರೋಗ್ಯಕ್ಕಾಗಿ ಶಿಕ್ಷಣ ಇಂದಿನ ಅಗತ್ಯ-ಮಮತಾ ಆರೆಗೊಪ್ಪ

KannadaprabhaNewsNetwork |  
Published : Sep 13, 2024, 01:41 AM IST
ಫೋಟೋ : ೧೨ಎಚ್‌ಎನ್‌ಎಲ್೨ | Kannada Prabha

ಸಾರಾಂಶ

ಆರೋಗ್ಯಕ್ಕಾಗಿ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಕ್ರೀಡೆಗೆ ಮಹತ್ವ ನೀಡಿದರೆ ಇದು ಸಾಧ್ಯವಾಗುವುದಲ್ಲದೆ, ಉತ್ತಮ ಆಸಕ್ತಿಗಳ ಮೂಲಕ ಮಕ್ಕಳನ್ನು ಮೊಬೈಲ್ ಆಕರ್ಷಣೆಯಿಂದ ದೂರ ಮಾಡಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ ತಿಳಿಸಿದರು.

ಹಾನಗಲ್ಲ: ಆರೋಗ್ಯಕ್ಕಾಗಿ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಕ್ರೀಡೆಗೆ ಮಹತ್ವ ನೀಡಿದರೆ ಇದು ಸಾಧ್ಯವಾಗುವುದಲ್ಲದೆ, ಉತ್ತಮ ಆಸಕ್ತಿಗಳ ಮೂಲಕ ಮಕ್ಕಳನ್ನು ಮೊಬೈಲ್ ಆಕರ್ಷಣೆಯಿಂದ ದೂರ ಮಾಡಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ ತಿಳಿಸಿದರು. ಹಾನಗಲ್ಲಿನ ನವೀನ ಪ್ರೌಢಶಾಲೆಯಲ್ಲಿ ಆಯೋಜಿಸಿದ ಹಾನಗಲ್ಲ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದೃಢ ದೇಹ ಮನಸ್ಸಿಗಾಗಿ ಕ್ರೀಡಾ ಚಟುವಟಿಕೆಗಳು ಬೇಕು. ಮಕ್ಕಳಿಗೆ ಕ್ರೀಡಾ ಆಸಕ್ತಿ ಬೆಳೆಸಿದರೆ ಇಂದಿನ ಮೊಬೈಲ್‌ನಿಂದ ದೂರವಿಡಲು ಸಾಧ್ಯ. ಉತ್ತಮ ಆಸಕ್ತಿಯಿಂದ ಮಾತ್ರ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಉತ್ತಮ ವಿಷಯಗಳ ಓದು ಉತ್ತಮ ಚಟುವಟಿಕೆಗಳ ಕಡೆ ಗಮನ ಹರಿಸುವಂತಾಗಬೇಕು ಎಂದರು.ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ ಮಾತನಾಡಿ, ಪಠ್ಯದ ಉತ್ತಮ ಅಧ್ಯಯನಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿ. ವಿದ್ಯಾರ್ಥಿಗಳನ್ನು ಉತ್ಸಾಹದಿಂದಿಡಲು ಹೆಚ್ಚು ಉಪಯೋಗವಾಗುತ್ತದೆ. ಶಾಲಾ ಹಂತದಲ್ಲಿಯೇ ಕ್ರೀಡಾ ಆಸಕ್ತಿ ಬೆಳೆದರೆ ಪ್ರತಿಭಾವಂತರು ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯ. ಅಂತಹ ಪ್ರೋತ್ಸಾಹ ಶಾಲಾ ಮಟ್ಟದಲ್ಲೇ ಸಿಗಲು ಎಂದರು.ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ಮಾತನಾಡಿ, ಮಕ್ಕಳಿಗೆ ವರ್ಷಪೂರ್ತಿ ಕ್ರೀಡೆಯ ಆಸಕ್ತಿ ಉಳಿಯುವಂತೆ ಮಾರ್ಗದರ್ಶನ ಮಾಡುವಲ್ಲಿ ಶಿಕ್ಷಕರು ಕಾಳಜಿವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಸರಕಾರ ಕ್ರೀಡಾ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಅದರ ಸದುಪಯೋಗ ಆಗಬೇಕು ಎಂದರು. ಸಂಸ್ಥೆಯ ಉಪಾಧ್ಯಕ್ಷ ಪ್ರದೀಪ ಮಹೇಂದ್ರಕರ ಅಧ್ಯಕ್ಷತೆವಹಿಸಿದ್ದರು. ಸಿಆರ್‌ಪಿ ಶ್ರೀನಿವಾಸ ದೀಕ್ಷಿತ್, ಇಸಿಓ ಬಸವರಾಜ ಸಂಗೂರು, ದೈಹಿಕ ಶಿಕ್ಷಣಾಧಿಕಾರಿ ಜಿ.ಎಂ. ಪಂಚಾಳ, ನವೀನ ಪ್ರೌಢಶಾಲೆ ಮುಖ್ಯೋಪಧ್ಯಾಯ ರಾಜು ಬಳಲದವರ, ನವೀನ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸಂತೋಷ ದೊಡ್ಡಮನಿ, ಎಂ.ಎಸ್. ಅಮರದ, ವಿನಾಯಕ ಕಳಸೂರ, ಮಹೇಶ್ವರಿ ಪೂಜಾರ, ಪ್ರಕಾಶ ಬಡಿಗೇರ, ಉಳವಪ್ಪ ಲಮಾಣಿ, ಎಂ.ಎಂ.ಮಾಸಣಗಿ, ಬಸವರಾಜ ತಿತ್ತಿ, ಕಾಶಿನಾಥ ಬಗರೆ, ವೇದಾ ಬಣಕಾರ, ಬಿ.ಎಂ. ದಿಡಗೂರ, ಲತಾ ಸದಾರಾಧ್ಯಮಠ, ಐ.ಬಿ. ಕುಂಕೂರ, ಎಂ. ಪಂಚಾಕ್ಷರಿ, ಸಹನಾ ಓಲೇಕಾರ, ಸಿ.ಆರ್. ವಡ್ಡರ, ಎಂ.ಎನ್.ಗೊಪಣ್ಣನವರ ಮೊದಲಾದವರಿದ್ದರು.

PREV

Recommended Stories

ರಾಮಚಂದ್ರಾಪುರ ಮಠದಲ್ಲಿ ಸಾಮೂಹಿಕ ಉತ್ಸರ್ಜನ, ಉಪಾಕರ್ಮ
ಮಳೆ ಮಾಪನ ಯಂತ್ರವೊಂದೇ ಬೆಳೆ ವಿಮೆಗೆ ಆಧಾರ ಎಂಬುದು ಸರಿಯಲ್ಲ: ಶಿವರಾಮ ಹೆಬ್ಬಾರ