ಮೌಲ್ಯಗಳೊಂದಿಗೆ ಸಮಾಜಮುಖಿಯಾಗಿ: ಪ್ರೊ.ಪಿ.ಎಲ್‌. ಧರ್ಮ

KannadaprabhaNewsNetwork |  
Published : Sep 13, 2024, 01:40 AM IST
ರಾಮಕೃಷ್ಣ ಮಠದಲ್ಲಿ ಪ್ರಜ್ಞಾ ಶೈಕ್ಷಣಿಕ ವಿಚಾರ ಸಂಕಿರಣ ನಡೆಯಿತು. | Kannada Prabha

ಸಾರಾಂಶ

ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು. ೫೫೦ ವೃತ್ತಿಪರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಈ ನೆಲದ ಎಲ್ಲ ಸಂಪನ್ಮೂಲಗಳನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ. ಇಂದಿನ ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತುವ ಕಾರ್ಯ ನಡೆಯಬೇಕಿದೆ. ಸ್ವಾರ್ಥಪರವಾಗಿರುವ ನಮ್ಮ ಆಲೋಚನೆಗಳಲ್ಲಿ ಬದಲಾವಣೆ ತಂದು ಸಮಾಜಮುಖಿಯಾಗಬೇಕಾದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದ್ದಾರೆ.ನಗರದ ರಾಮಕೃಷ್ಣ ಮಿಷನ್‌ನಲ್ಲಿ ಪ್ರಜ್ಞಾ- ವೃತ್ತಿಪರ ವಿದ್ಯಾರ್ಥಿಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಕೇವಲ ವಯಸ್ಸಿನಿಂದ ಅಲ್ಲ, ಮನಸ್ಸಿನಿಂದ ಯುವಕರಾಗೋಣ. ಇದಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆಗಳು ನಮಗೆ ಪ್ರೇರಣೆ ನೀಡಲಿ ಎಂದರು.

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು. ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು.

ಕಾನ್ಪುರದ ರಾಮಕೃಷ್ಣ ಮಿಷನ್‌ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮಶ್ರದ್ಧಾನಂದಜಿ ಮೊದಲ ಅವಧಿಯನ್ನು ನಡೆಸಿಕೊಟ್ಟರು. 2ನೇ ಅವಧಿಯಲ್ಲಿ ಹೈದರಾಬಾದ್‌ನ ಮಾನವ ಸಂಪನ್ಮೂಲ ಕಾರ್ಯ ನಿರ್ವಾಹಕ ಮತ್ತು ತಂತ್ರಜ್ಞ ಎಸ್.ಎನ್. ಶ್ರೀನಿವಾಸ್‌ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಂತರ ‘ಶಿಕ್ಷಣ ಮತ್ತು ಮಾನವ ಶ್ರೇಷ್ಠತೆ’ ವಿಷಯದ ಕುರಿತಾಗಿ ನಡೆದ ಸಂವಾದದಲ್ಲಿ ಎಸ್.ಸಿ.ಎಸ್. ಆಸ್ಪತ್ರೆಯ ಗ್ಯಾಸ್ಟೋಎಂಟರಾಲಜಿಸ್ಟ್‌ ಚಂದ್ರಶೇಖರ್‌ ಜೆ. ಸೊರಕೆ ಮತ್ತು ಮಂಗಳೂರಿನ ಪರಿಸರವಾದಿ ಅರ್ಜುನ್ ಮಸ್ಕರೇನಸ್‌ ಭಾಗವಹಿಸಿದ್ದರು.

ಮಾಜಿ ಎಂಎಲ್ಸಿ ಗಣೇಶ್‌ ಕಾರ್ಣಿಕ್ ಸ್ವಾಗತಿಸಿದರು. ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪ್ಪಾಡಿ ವಂದಿಸಿದರು. ಮಂಜುಳಾ ಶೆಟ್ಟಿ ನಿರ್ವಹಿಸಿದರು. ೫೫೦ ವೃತ್ತಿಪರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಕ್ರಾಂತಿಯಂದು ಪಂಚಮಸಾಲಿ ಪೀಠದಲ್ಲಿ ಹರ ಜಾತ್ರೆ
ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಮಾಡಿ