ಕಸಾಪ ಹಳ್ಳಿ ಹಳ್ಳಿಯಲ್ಲೂ ಪಸರಿಸುತ್ತಿದೆ ಕನ್ನಡದ ಕಂಪು

KannadaprabhaNewsNetwork |  
Published : Sep 13, 2024, 01:40 AM IST
ನರಸಿಂಹರಾಜಪುರ ತಾಲೂಕು ಕ.ಸಾ.ಪ ಆಶ್ರಯದಲ್ಲಿ ಪಟ್ಟಣಧ ನೇತಾಜಿ ನಗರದಲ್ಲಿ  ನಡೆದ ಕನ್ನಡ ಚಲನಚಿತ್ರಗೀತೆಗಳ ಅಂತ್ಯಾಕ್ಷರಿ ಕಾರ್ಯಕ್ರಮವನ್ನು ತಾ.ಕ.ಸಾ.ಪ ಹಿರಿಯ ಸದಸ್ಯ ಎಂ.ಚಕ್ರಪಾಣಿ ಉದ್ಘಾಟಿಸಿದರು  | Kannada Prabha

ಸಾರಾಂಶ

ನರಸಿಂಹರಾಜಪುರ, ಕನ್ನಡ ಸಾಹಿತ್ಯ ಪರಿಷತ್ ಹಳ್ಳಿ, ಹಳ್ಳಿಗಳಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಎಂ.ಪಿ. ಚಕ್ರಪಾಣಿ ತಿಳಿಸಿದರು.

- ಗಣೇಶೋತ್ಸವ ನಿಮಿತ್ತ ಆಯೋಜಿಸಲಾದ ಚಲನಚಿತ್ರ ಗೀತೆಗಳ ಅಂತ್ಯಾಕ್ಷರಿ ಉದ್ಘಾಟಿಸಿದ ಚಕ್ರಪಾಣಿ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕನ್ನಡ ಸಾಹಿತ್ಯ ಪರಿಷತ್ ಹಳ್ಳಿ, ಹಳ್ಳಿಗಳಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಎಂ.ಪಿ. ಚಕ್ರಪಾಣಿ ತಿಳಿಸಿದರು.

ಮಂಗಳವಾರ ಸಂಜೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದ ಪಟ್ಟಣದ ನೇತಾಜಿ ನಗರದಲ್ಲಿ ನಡೆದ ಗಣೇಶೋತ್ಸವ ದಲ್ಲಿ ರಸ ಪ್ರಶ್ನೆ ಹಾಗೂ ಕನ್ನಡ ಚಲನಚಿತ್ರ ಗೀತೆಗಳ ಅಂತ್ಯಾಕ್ಷರಿ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕಸಾಪ ಕಾರ್ಯಕ್ರಮದಲ್ಲಿ ಪ್ರತಿಭಾವಂತರ ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ. ಇದೇ ರೀತಿ ಸತ್ಕಾರ್ಯ ಗಳು ಮುಂದುವರಿಯಲಿ ಎಂಬ ಆಶಯ ವ್ಯಕ್ತಪಡಿಸಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆ ಯನ್ನು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ತಲಪಿಸುತ್ತಿದ್ದೇವೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಕನ್ನಡಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಒಗಟು ಬಿಡಿಸುವುದು, ಗಾದೆಗಳ ಸ್ಪರ್ಧೆ, ಅಂತ್ಯಾಕ್ಷರಿ ಏರ್ಪಡಿಸಿ ಬಹುಮಾನ ನೀಡುತ್ತಿದ್ದೇವೆ. ಶೀಘ್ರ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಿದ್ದು, ಪೂರ್ವ ಭಾವಿ ಸಭೆ ಕರೆಯಲಾಗುವುದು. ಕನ್ನಡ ಕಟ್ಟುವ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, 1893 ರಲ್ಲಿ ಬಾಲಗಂಗಾಧರ ತಿಲಕ್‌ ಅವರು ಸಾರ್ವಜವಿಕ ಗಣೇಶೋತ್ಸವ ಆಚರಣೆ ಜಾರಿಗೆ ತಂದಿದ್ದು, ಅಂದಿನಿಂದ ಇಂದಿನವರೆಗೂ ದೇಶದಾದ್ಯಂತ ಸಾರ್ವಜನಿಕ ವಾಗಿ ಗಣೇಶೋತ್ಸವ ನಡೆಸಲಾಗುತ್ತಿದೆ ಎಂದರು.

ಇದೇ ವೇಳೆ ಪತ್ರಕರ್ತ ಪುರುಷೋತ್ತಮ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಬಿ. ನಂಜುಂಡಪ್ಪ, ಅತಿಥಿಗಳಾಗಿ ಹೋಬಳಿ ಘಟಕದ ಅಧ್ಯಕ್ಷೆ ಜುಬೇದ, ನೇತಾಜಿ ನಗರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪರಮೇಶ್‌, ತಾ.ಕಸಾಪ ಕಾರ್ಯದರ್ಶಿ ಮಂಜಪ್ಪ, ಹೋಬಳಿ ಕಾರ್ಯದರ್ಶಿ ಆರ್‌. ನಾಗರಾಜ್‌, ಜೇಸಿ ಪೂರ್ವಾಧ್ಯಕ್ಷ ಚರಣರಾಜ್, ದೇವರಾಜ್‌, ಸುಜಾತ ಇದ್ದರು. ನಂತರ ಕಡೂರು ತಾಲೂಕಿನ ಖ್ಯಾತ ಗಾಯಕ ಹಿರೇನಲ್ಲೂರು ಶ್ರೀನಿವಾಸ್ ಕನ್ನಡ ಚಲನಚಿತ್ರಗೀತೆಗಳ ಅಂತ್ಯಾಕ್ಷರಿ ನಡೆಸಿಕೊಟ್ಟರು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ನೀಡಲಾಯಿತು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ