ಹಾರಂಗಿಯ ಸಮೀಪದ ಅತ್ತೂರು ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ಶತ ಕಂಠದಲ್ಲಿ ಗೀತ ಗಾಯನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರನಾಡಗೀತೆ ಜಯ ಭಾರತ ಜನನಿಯ ತನುಜಾತೆ ಮತ್ತು ವಂದೇ ಮಾತರಂ ಹಾಗೂ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆಗೆ ಶತಮಾನ ಸಂಭ್ರಮ ಹಿನ್ನೆಲೆಯಲ್ಲಿ ಹಾರಂಗಿಯ ಸಮೀಪದ ಅತ್ತೂರು ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ಶತ ಕಂಠದಲ್ಲಿ ಗೀತ ಗಾಯನ ಕಾರ್ಯಕ್ರಮ ನಡೆಯಿತು.ಕನ್ನಡ ಸಿರಿ ಸ್ನೇಹ ಬಳಗ ಆಶ್ರಯದಲ್ಲಿ ಕುಶಾಲನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವನ್ನು ಸಾಹಿತಿ ಕಣಿವೆ ಭಾರಧ್ವಾಜ್ ಆನಂದ ತೀರ್ಥ ಉದ್ಘಾಟಿಸಿದರು.

ನಂತರ ಮಾತನಾಡಿದ ಭಾರದ್ವಾಜ್, ದೇಶದೊಳಗೆ ವಿವಾದಗಳು, ಎಲ್ಲಾ ಕಡೆಯಲ್ಲಿಯೂ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗುವುದು ಸರ್ವೆ ಸಾಮಾನ್ಯ. ಅವೆಲ್ಲವನ್ನು ಬದಿಗೊತ್ತಿ ಎಲ್ಲರೂ ಒಗ್ಗೂಡಿ ನಡೆಯುವ ಕೆಲಸ ನಿರಂತರವಾಗಿ ಸಾಗಬೇಕಾಗಿದೆ. ಮಹಾ ಸಾಹಿತ್ಯಗಳಲ್ಲಿ ಹುದುಗಿರುವ ಒಳ ಅರ್ಥವನ್ನು‌ ಮನದಟ್ಟು‌ ಮಾಡಿಕೊಂಡಲ್ಲಿ ಅದನ್ನು ಆಸ್ವಾದಿಸಲು ಸುಲಭ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಸಿರಿ ಸ್ನೇಹ‌ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು.ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪದಾಧಿಕಾರಿಗಳು ಸದಸ್ಯರು ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಕೊಡಗು‌ ಜಿಲ್ಲಾ ಕನ್ನಡ ಸಿರಿ ಸ್ನೇಹ ಬಳಗ, ಕುಶಾಲನಗರ ತಾಲೂಕು ಜಾನಪದ‌ ಪರಿಷತ್, ಕುಶಾಲನಗರ ರೋಟರಿ ಸಂಸ್ಥೆ, ಜೆಸಿಐ ಕುಶಾಲನಗರ, ಲಯನ್ಸ್ ಸಂಸ್ಥೆ, ಕರ್ನಾಟಕ ವಿಕಾಸ ರಂಗ, ಶ್ರೀ ವೆಂಕಟಾದ್ರಿ ಭಜನಾ ಮಂಡಳಿ, ಆರ್ಯವೈಶ್ಯ ಮಹಿಳಾ ಮಂಡಳಿ, ಸಮಸ್ತ ಭಜನಾ ಮಂಡಳಿ, ಕುಶಾಲನಗರ ಗೆಳೆಯರ ಬಳಗ, ಕಾವೇರಿ ಆರತಿ ಬಳಗದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.ಪ್ರಮುಖರಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.ಸೋಮವಾರಪೇಟೆ ತಹಸೀಲ್ದಾರ್ ಕೃಷ್ಣಮೂರ್ತಿ, ನಿವೃತ್ತ ಸೈನಿಕ ಹೆಚ್.ಆರ್, ಸುರೇಶ್ ರಾಜಪ್ಪ, ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ಜೆಸಿಐ ಮಾಜಿ ಅಧ್ಯಕ್ಷ ಅಮೃತ್ ರಾಜ್, ಅಧ್ಯಕ್ಷ ಶ್ರೀನಿವಾಸ್, ಲಯನ್ಸ್ ಅಧ್ಯಕ್ಷ ನಾರಾಯಣ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ , ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವೈಲೇಶ್, ನಿವೃತ್ತ ಉಪನ್ಯಾಸಕ ಸಬಲಂ ಭೋಜಣ್ಣ ರೆಡ್ಡಿ, ಭಜನಾ ಮಂಡಳಿಯ ಪದ್ಮಾ ಪುರುಷೋತ್ತಮ್, ಕಾವೇರಿ ಆರತಿ ಬಳಗದ ಕೊಡಗನ ಹರ್ಷ, ಪ್ರಮುಖರಾದ ಜವರಪ್ಪ, ಗಾಯತ್ರಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಇದ್ದರು. ನಿವೃತ್ತ ಚಿತ್ರಕಲಾ ಶಿಕ್ಷಕರಾದ ಉ ರಾ ನಾಗೇಶ್ ನಿರೂಪಿಸಿದರು.