ಗದಗ: ಮಕ್ಕಳು ಶಿಕ್ಷಣವೆಂಬ ಭದ್ರಬುನಾದಿ ಕಟ್ಟಿಕೊಳ್ಳುವ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ಮಲ್ಲಸಮುದ್ರದ ಓಂಕಾರೇಶ್ವರ ಮಠದ ಫಕೀರೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ಗಂಗಾಪುರ ಪೇಟೆಯಲ್ಲಿರುವ ದುರ್ಗಾದೇವಿ ಶಿಕ್ಷಣ ಸಮಿತಿಯಲ್ಲಿ 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.ಮಕ್ಕಳಿಗೆ ಇಂದಿನ ದಿನಗಳಲ್ಲಿ ಶಿಕ್ಷಣ, ಸಂಸ್ಕಾರ, ದೇಶಪ್ರೇಮ ಮುಖ್ಯವಾಗಿವೆ. ಪಾಲಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಇವುಗಳ ಬಗ್ಗೆ ಅರಿವು ಮೂಡಿಸಿದರೆ ಮುಂದಿನ ದಿನಗಳಲ್ಲಿ ಅವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಮಕ್ಕಳನ್ನು ಮೊಬೈಲ್‌ನಿಂದ ದೂರ ಇಟ್ಟು ದೇಶಭಕ್ತರ, ಆದರ್ಶಪುರುಷರು, ಮಹಾನ ಸಾಧಕರು ಚರಿತ್ರೆಗಳನ್ನು ಹೇಳುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಪ್ರತಿಯೊಬ್ಬ ಮಗುವಿನಲ್ಲೂ ಒಬ್ಬ ಸಾಧಕರು ಇದ್ದೇ ಇರುತ್ತಾನೆ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಬೇಕಾಗಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು, ತಾವು ಕಲಿತ ಶಾಲೆಯ ಹೆಸರನ್ನು, ಕಲಿಸಿದ ಗುರುಗಳನ್ನು ಎಂದು ಮರೆಯಬಾರದು. ಜೀವನದಲ್ಲಿ ನಮ್ಮೊಂದಿಗೆ ಕೊನೆಯವರೆಗೂ ಜೊತೆಯಾಗಿ ಬರುವದು ವಿದ್ಯೆ ಮಾತ್ರ ಎಂದು ಹೇಳಿದರು.ಕೀರ್ತನಕಾರರಾದ ಶಿವಲಿಂಗಯ್ಯಶಾಸ್ತ್ರಿಗಳು ಹಿರೇಮಠ ಸಿದ್ದಾಪೂರ ಮಾತನಾಡಿ, ಒಂದು ಕಲ್ಲು ನೂರು ಉಳಿಪೆಟ್ಟು ತಿಂದ ಮೇಲೆ ಒಂದು ಮೂರ್ತಿಯಾಗಿ ಪೂಜಿಸಲ್ಪಡುತ್ತದೆ. ಆದ್ದರಿಂದ ಮಕ್ಕಳು ಸಾಧನೆಗೆ ಎದುರಾಗುವ ಎಲ್ಲ ಕಷ್ಟಗಳನ್ನು ಎದುರಿಸಿ ಗುರಿ ಮುಟ್ಟಬೇಕು ಎಂದರು. ಈ ಸಂದರ್ಭದಲ್ಲಿ ದುರ್ಗಾದೇವಿ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯ ನಿರ್ದೇಶಕ ಸಾವಿತ್ರಿ ಕವಡಕಿ, ಉಮಾ ಇಮರಾಪೂರ, ಸವಿತಾ ಇಮರಾಪೂರ, ಕವಿತಾ ಇಮರಾಪೂರ, ಸಲಹಾ ಸಮಿತಿಯ ಸದಸ್ಯ ಲೋಕೇಶ ಮಲ್ಲಿಗವಾಡ, ಮುತ್ತು ಜಡಿ, ಮುಖ್ಯ ಶಿಕ್ಷಕಿ ಎಚ್.ಎಂ. ನದಾಫ್, ಸಹಶಿಕ್ಷಕಿ ಎಂ.ಎಂ. ಹಿಡ್ಕಿಮಠ, ಆರ್. ಎಂ. ಅಂಗಡಿ, ಎಸ್. ವೈ. ತಿರುಕಣ್ಣವರ, ವಿ. ವಿ.ಕಲ್ಮನಿ, ಎಸ್.ಎ. ಕರೆಸಾಬಣ್ಣವರ, ಸಿಬ್ಬಂದಿ ಲಕ್ಷ್ಮಿ ಕಮಡೊಳ್ಳಿ, ಸೈನಾಜಬಾನು ರೋಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.