ಶಿಗ್ಗಾಂವಿ: ಶಿಕ್ಷಣಕ್ಕೆ ಯುವ ಪೀಳಿಗೆಯನ್ನು ಬದಲಾಯಿಸುವ ಶಕ್ತಿ ಇದೆ. ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ಯುವಕರಿಗೆ ದಾರಿಪೀಪವಾಗಲಿ ಎಂದು ಕೆಎಸ್‌ಆರ್‌ಪಿ ೧೦ನೇ ಪೊಲೀಸ್ ಪಡೆ ಕಮಾಡೆಂಟ್ ಎನ್.ಬಿ. ಮೆಳ್ಳಾಗಟ್ಟಿ ಹಾರೈಸಿದರು. ಪಟ್ಟಣದ ಪಿನಿಕ್ಸ ಇಂಟರ್ ನ್ಯಾಶನಲ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮಗುವನ್ನು ಪ್ರೋತ್ಸಾಹಿಸುವ ಕೆಲಸ ಶಿಕ್ಷಕರದಾಗಬೇಕು, ಮಕ್ಕಳಿಗೆ ನಿರಂತರವಾಗಿ ಪ್ರೋತ್ಸಾಹಿಸುವುದರಿಂದ ಅವರಲ್ಲಿ ಆತ್ಮವಿಶ್ವಾಸ ಬರುತ್ತದೆ ಹಾಗೂ ಉನ್ನತ ಶಿಕ್ಷಣ ಮತ್ತು ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಗುತ್ತದೆ. ಶಿಕ್ಷಕರ ಜೊತೆಗೆ ಪಾಲಕರು ಗಮನಿಸುವ ಹೊಣೆಗಾರಿಕೆ ಅವಶ್ಯವಿದೆ. ತಂತ್ರಜ್ಞಾನ ಅನಿವಾರ್ಯ ಆದರೆ ಮಕ್ಕಳ ಮೇಲೆ ಅದರ ದುಷ್ಪರಿಣಾಮ ಬೀರಬಾರದು ಎಂದರು. ಈ ಸಂಸ್ಥೆಯಿಂದ ಅನೇಕ ಪ್ರತಿಭೆಗಳು ಹೊರಹೊಮ್ಮಿವೆ ಹಾಗೂ ಯಾವುದೇ ಕ್ಷೇತ್ರವಾಗಲಿ. ನೂರು ಪ್ರತಿಶತ ನಿಮ್ಮ ಪ್ರಯತ್ನವಿದ್ದರೆ ಅದು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಮಕ್ಕಳಿಗೆ ಕಿವಿ ತು ಹೇಳಿದರು.
ಸಂಸ್ಥೆ ಅದ್ಯಕ್ಷ ಡಾ. ಎಂ.ಎಂ.ತಿರ್ಲಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಹಾಗೂ ಪಾಲಕರ, ಪೋಷಕರ ಮೂಲಕ ನಮ್ಮ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಡಾ.ರಾಣಿ ತಿರ್ಲಾಪೂರ, ನಿರ್ದೇಶಕರಾದ ಸಿದ್ದನಗೌಡ ಪಾಟೀಲ, ಸುಮಿತ್ರಾ ಪಾಟೀಲ, ಲಕ್ಣ್ಮೀಬಾಯಿ ಕಟ್ಟಿ, ಪ್ರಾಚಾರ್ಯ ಶ್ರೀನಿವಾಸ ಮಡ್ಡಿ, ಉಪ ಪ್ರಾಚಾರ್ಯ ಹನುಮಂತ ಗೊರವರ ಸೇರಿದಂತೆ ಶಿಕ್ಷಕರು, ಮಕ್ಕಳು, ಪಾಲಕರು ಉಪಸ್ಥಿತರಿದ್ದರು.