ಲಯನ್ಸ್ ಸೇವೆಯಲ್ಲಿ ಶಿಕ್ಷಣ, ಆರೋಗ್ಯಕ್ಕೆ ಮೊದಲ ಆದ್ಯತೆ: ಮೆಲ್ವಿನ್ ಡಿಸೋಜ

KannadaprabhaNewsNetwork |  
Published : Jan 20, 2024, 02:01 AM IST
ಫೋಟೋ: ಗುರುವಾರ ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಲ|| ಡಾ. ಮೆಲ್ವಿನ್ ಡಿಸೋಜ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.  | Kannada Prabha

ಸಾರಾಂಶ

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲಾ 317ಡಿ ರೀಜನ್ 11 ವಲಯ 2 ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಲ. ಡಾ. ಮೆಲ್ವಿನ್ ಡಿಸೋಜ ಹೇಳಿದರು.

- ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಸುದ್ಧಿಗೋಷ್ಠಿ

ಕನ್ನಡಪ್ರಭ ವಾರ್ತೆ, ಕೊಪ್ಪ

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲಾ 317ಡಿ ರೀಜನ್ 11 ವಲಯ 2 ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಲ. ಡಾ. ಮೆಲ್ವಿನ್ ಡಿಸೋಜ ಹೇಳಿದರು.ಲಯನ್ಸ್ ಕ್ಲಬ್‌ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾಲ್ಕು ಜಿಲ್ಲಾ ವ್ಯಾಪ್ತಿಯಲ್ಲಿ 120 ಲಯನ್ಸ್ ಕ್ಲಬ್‌ಗಳಿದ್ದು 4600 ಸದಸ್ಯರು ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 1917ರಲ್ಲಿ ಆರಂಭಗೊಂಡ ಲಯನ್ಸ್ ಸೇವಾ ಸಂಸ್ಥೆ ವಿಶ್ವದ 210 ದೇಶಗಳಲ್ಲಿ ಅಸ್ತಿತ್ವದಲ್ಲಿದ್ದು 48000 ಲಯನ್ಸ್ ಕ್ಲಬ್‌ಗಳು ಕ್ರಿಯಾ ಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು 14,00,000 ಸದಸ್ಯರನ್ನು ಹೊಂದಿದೆ. ಕೊಪ್ಪ ಲಯನ್ಸ್ ಕ್ಲಬ್ ಯಶಸ್ವಿ 50 ವರ್ಷ ಗಳನ್ನು ಪೂರೈಸಿ 51ನೇ ವರ್ಷದಲ್ಲಿ ಮಧುಲಿಕಾ ಪ್ರಜ್ವಲ್‌ರವರ ಸಾರಥ್ಯದಲ್ಲಿ ಮುನ್ನಡೆಯುತ್ತಿದೆ. ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಕೊಪ್ಪ ಲಯನ್ಸ್ ಅಧ್ಯಕ್ಷೆ ಮಧುಲಿಕಾ ಪ್ರಜ್ವಲ್ ಮಾತನಾಡಿ ಶೈಕ್ಷಣಿಕ, ಆರೋಗ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಸೇವಾ ಕಾರ್ಯಗಳಲ್ಲಿ ತೊಡಗಿರುವ ಕೊಪ್ಪ ಲಯನ್ಸ್ ಪ್ರಸ್ತುತ ವರ್ಷದಲ್ಲಿ ಹೆಚ್ಚು ಆರೋಗ್ಯ ಶಿಬಿರ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಿದೆ. 2023ರ ನ.4ರಂದು ಹೃದಯ ತಪಾಸಣೆ, ಮಹಿಳೆಯರ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯಕೀಯ ತಂಡದಿಂದ ತ್ಯಾಗರಾಜ ರಸ್ತೆಯ ಲಯನ್ಸ್ ಹೆಲ್ತ್ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು. ನ.5 ರಂದು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ತಂಡದಿಂದ ಉಚಿತ ನೇತ್ರ ಮತ್ತು ಇತರೆ ರೋಗಗಳ ತಪಾಸಣಾ ಮತ್ತು ಚಕಿತ್ಸಾ ಶಿಬಿರವನ್ನು ನಡೆಸಿತು.

ಜ.18ರ ಗುರುವಾರ ಗ್ರಾಮೀಣ ಭಾಗವಾದ ಕಾಚ್‌ಕಲ್‌ನಲ್ಲಿ ಪಶುಸಂಗೋಪನಾ ಇಲಾಖೆ ಸಹಯೋಗದಲ್ಲಿ ನಡೆದ ಜಾನುವಾರುಗಳ ಚಿಕಿತ್ಸಾ ಕಾರ್ಯಕ್ರಮದಲ್ಲಿ ಶಾನುವಳ್ಳಿ ಅಂಗನವಾಡಿಗೆ ಅಗತ್ಯವಿರುವ ಚೇರ್ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು. ವಿಜ್ಞಾನ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಲುವಾಗಿಲು ಶಾಲೆ ಮೂವರು ಮಕ್ಕಳಿಗೆ ಪ್ರತಿಭಾ ಪುರಸ್ಕಾ, ಹರಿಹರಪುರದ ಗುರುಕುಲಕ್ಕೆ ಆಹಾರ ಸಾಮಾಗ್ರಿಗಳನ್ನು ಕೊಪ್ಪ ನವಚೇತನ ಶಾಲೆಗೆ ಕೊಪ್ಪ ಲಯನ್ಸ್‌ ನಿಂದ ನಿರಂತರವಾಗಿ ನೀಡುವ ದೇಣಿಗೆ, ಚಿಟ್ಟಿಕೊಡಿಗೆ ಆಶ್ರಮಕ್ಕೆ ರಕ್ತದೊತ್ತಡ ಪರೀಕ್ಷಾ ಯಂತ್ರ, ಇನ್ನು ಹತ್ತು ಹಲವು ಸೇವಾ ಕಾರ್ಯಗಳನ್ನು ಲಯನ್ಸ್ ಮಾಡಿದೆ. ಆರೋಗ್ಯ ಶಿಬಿರಕ್ಕೆ ಹೆಚ್ಚಿನ ಒತ್ತು ನೀಡಲು ಲಯನ್ಸ್ ಸೇವಾ ಮಂದಿರದ ಪಕ್ಕದಲ್ಲಿಯೇ ಲಯನ್ಸ್ ಹೆಲ್ತ್ ಸೆಂಟರ್ ಕಟ್ಟಡವನ್ನು ಎಚ್.ಜಿ.ವೆಂಕಟೇಶ್ ಗವರ್ನರ್ ಆಗಿದ್ದ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದರು.

ಕೊಪ್ಪ ಲಯನ್ಸ್ ಕಾರ್ಯದರ್ಶಿ ಜೀನಾ ರಿತಿನ್, ಖಜಾಂಚಿ ಶ್ರೀಗೌರಿ ಸುದ್ಧಿಗೋಷ್ಠಿಯಲ್ಲಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ