ಕನ್ನಡಪ್ರಭ ವಾರ್ತೆ ಮಧುಗಿರಿ
ಬುಧವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆ.ಎನ್.ಆರ್.ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಕ್ಷರ ಅಮೃತ ಯೋಜನೆ ಮತ್ತು 2026-27ನೇ ಸಾಲಿನ ಕಾಲೇಜಿನ ವಾರ್ಷಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನದಾಸೋಹ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣ ಕುಂಠಿತವಾಗದಂತೆ ನೋಡಿಕೊಳ್ಳುತ್ತದೆ. ಮುಂದೆ ನೀವು ಹುನ್ನತ ಹುದ್ದೆ ಗಳಿಸಿದಾಗ ಸಮಾಜದ ಋಣವೆಂಬಂತೆ ತೀರಿಸುವ ಮಹತ್ತರ ಜವಾಬ್ದಾರಿ ನಿಮ್ಮದು. ಈ ಅಕ್ಷರ ಅಮೃತ ಯೋಜನೆ ನಿರಂತರವಾಗಿ ನಡೆಯಲಿದೆ ಎಂದರು.ಟ್ರಸ್ಟ್ ಅಧ್ಯಕ್ಷೆ ಶಾಂತಲಾ ಲಾಜಣ್ಣ ಮಾತನಾಡಿ, ಒಂದು ಯೋಜನೆ ರೂಪಿಸುವುದು ಮಾತ್ರವಲ್ಲ. ಅದನ್ನು ಯಶಸ್ವಿಯಾಗಿ ಕಾರ್ಯ ರೂಪಕ್ಕೆ ತರುವಲ್ಲಿ ಎಲ್ಲರ ಸಹಕಾರ ಅಗತ್ಯ. ಅಕ್ಷರ ಅಮೃತ ಯೋಜನೆ ಸಕಾರಗೊಳ್ಳಲು ಮಧುಗಿರಿಯ ಮುಖಂಡರು ತಮ್ಮದೇ ಆದ ಸಾಮರ್ಥ್ಯ ಸಹಕಾರ ಕೊಡುಗೆ ನೀಡಿದ್ದಾರೆ. ಯೋಜನೆ ರೂಪಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಶುಭ ಕೋರಿದರು.
ಸಿದ್ದರಬೆಟ್ಟದ ಕ್ಷೇತ್ರದ ಶ್ರೀವೀರಭದ್ರಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಬಡ ಮಕ್ಕಳ ಶೈಕ್ಷಣಿಕ ಪ್ರಗತಿ ಸುಧಾರಿಸುವ ನಿಟ್ಟಿನಲ್ಲಿ ಶಾಸಕ ಕೆ.ಎನ್.ರಾಜಣ್ಣರವರು ಮಧುಗಿರಿ ತಾಲೂಕಿನಲ್ಲಿ ಪ್ರಾರಂಭಿಸಿರುವ ಅಕ್ಷರ ಅಮೃತ ಯೋಜನೆ ಇಡೀ ಜಿಲ್ಲೆಗೆ ಹೆಮ್ಮೆಯ ಸಗಂತಿ,ಈ ಯೋಜನೆ ರಾಜ್ಯಕ್ಕೆ ಅನ್ವಯವಾಗಲಿ ಎಂದರು.ಕಾರ್ಯಕ್ರಮದಲ್ಲಿ ಎಂಎಲ್ಸಿ ರಾಜೇಂದ್ರ, ರವೀಂದ್ರ ರಾಜಣ್ಣ, ರಶ್ಮಿರಾಜಣ್ಣ, ಎಸಿ ಗೋಟೂರು ಶಿವಪ್ಪ ಡಿವೈಎಸ್‌ಪಿ ಮಂಜುನಾಥ್, ತಹಸೀಲ್ದಾರ್ ನಂದಿನಿ, ಇಒ ಉತ್ತಮ್, ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಕಾಲೇಜು ಪ್ರಾಂಶುಪಾಲ ಪ್ರೊ.ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಪ್ರೊ. ಮ.ಲ.ನ.ಮೂರ್ತಿ ಮುಖಂಡರಾದ ಎಂ.ಕೆ.ನಂಜುಂಡರಾಜು, ತುಂಗೋಟಿ ರಾಮಣ್ಣ, ಲಾಲಪೇಟೆ ಮಂಜುನಾಥ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.