ದೇಶದ ಪ್ರಗತಿಗೆ ಶಿಕ್ಷಣ ಅವಶ್ಯ

KannadaprabhaNewsNetwork |  
Published : Jun 28, 2025, 12:18 AM IST
ವ್ಸವದ್ಗಬಗನಹ್ಮ | Kannada Prabha

ಸಾರಾಂಶ

ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಿ, ಹಾಜರಾತಿಗೆ ಮಹತ್ವ ನೀಡಿದಾಗ ಮಾತ್ರ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.

ಹನುಮಸಾಗರ:

ದೇಶದ ಪ್ರಗತಿ ಮಕ್ಕಳ ಶಿಕ್ಷಣ ಅವಲಂಬಿಸಿದ್ದು ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಹೂಲಗೇರಿ ಸಿಆರ್‌ಪಿ ವಿಶ್ವನಾಥ ಅಂಬ್ಲಿಕೊಪ್ಪಮಠ ಹೇಳಿದರು.

ಸಮೀಪದ ಮನ್ನೇರಾಳ ಗ್ರಾಮ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್‌ನಲ್ಲಿ ನಡೆದ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಅನೇಕ ಸೌಲಭ್ಯ ಒದಗಿಸಲಾಗಿದೆ. ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ, ಉಚಿತ ಸಮವಸ್ತ್ರ, ಬಿಸಿಯೂಟದ ಜತೆಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಸೇರಿದಂತೆ ಅನೇಕ ಸೌಲಭ್ಯ ಹೊಂದಿದ್ದು ಅವರಿಗೆ ಸದುಪಯೋಗಪಡಿಸಿಕೊಳ್ಳಲು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಟಾಟಾ ಕಲಿಕಾ ಟ್ರಸ್ಟ್‌ ಸಂಯೋಜಕ ರಾಜಕುಮಾರ ಕುಂಬಾರ ಮಾತನಾಡಿ, ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಿ, ಹಾಜರಾತಿಗೆ ಮಹತ್ವ ನೀಡಿದಾಗ ಮಾತ್ರ ಮಕ್ಕಳು ಗುಣಾತ್ಮಕ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಇದೇ ವೇಳೆ ಮಕ್ಕಳ ಕುಂಭ ಮೆರವಣಿಗೆ, ಬ್ಯಾಂಡ್ ಸೆಟ್ ಹಾಗೂ ಡೊಳ್ಳಿನ ಮೇಳದೊಂದಿಗೆ ಶಿಕ್ಷಣದ ಜಾಗೃತಿ ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಶೇಬ್ಬಿ, ಮುಖ್ಯ ಶಿಕ್ಷಕ ಈರಣ್ಣ ಕಕ್ಕಳಮೇಲಿ, ಶಿವಪ್ಪ ಹುಣಿಶ್ಯಾಳ, ದೇವಪ್ಪ ಬೆನ್ನಿ, ಗೂಳಪ್ಪ ಪಾಲಕಾರ, ಚಂದಪ್ಪ ಹುಣಶ್ಯಾಳ, ಚಂದಪ್ಪ ಗುನ್ನಾಳ, ಚಂದ್ರಪ್ಪ ಆಡೂರು, ಅಂದಪ್ಪ ಗೂಳಿ, ಅಂದಪ್ಪ ಆಡೂರು, ಹುಚ್ಚಪ್ಪ ಬನಕಟ್ಟಿ, ಶಿಕ್ಷಕರು ಇತರರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ