ಸಾಮಾಜಿಕ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಣ ಪ್ರಮುಖ

KannadaprabhaNewsNetwork |  
Published : Jan 08, 2024, 01:45 AM IST
ಸಾಂಸ್ಕೃತಿಕ ಲೋಕ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ನಡೆದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  | Kannada Prabha

ಸಾರಾಂಶ

ಸಾಂಸ್ಕೃತಿಕ ಲೋಕ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ ಹಳವದ

ಕನ್ನಡಪ್ರಭ ವಾರ್ತೆ ಧಾರವಾಡ

ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಣ ಕಾರಣವಾದಂತೆ, ಸಮುದಾಯದ ಒಡನಾಟ, ಸಾಮಾಜಿಕ ಕಳಕಳಿ, ನಾಯಕತ್ವದ ಗುಣಗಳ ವೃದ್ಧಿಗೆ ಸಾಂಸ್ಕೃತಿಕ ಚಟುವಟಿಕೆಗಳು ಕಾರಣ ಕರ್ನಾಟಕ ರಕ್ಷಣಾ ವೇದಿಕೆಯ ಧಾರವಾಡ ಜಿಲ್ಲಾಧ್ಯಕ್ಷ ರುದ್ರೇಶ ಹಳವದ ಹೇಳಿದರು.

ಸಾಂಸ್ಕೃತಿಕ ಲೋಕ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ನಡೆದ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘಟಕ ಮಾರ್ತಾಂಡಪ್ಪ ಕತ್ತಿ ಮಾತನಾಡಿ, ಮಕ್ಕಳನ್ನು ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ ಹಾಗೂ ಆಧಾತ್ಮಿಕವಾಗಿ ಬೆಳೆಸಲು ನೆರವಾಗುವುದಕ್ಕೆ ಸೂಕ್ತ ತಿಳಿವಳಿಕೆ ನೀಡಬೇಕು. ಅಂತಹ ಕಾರ್ಯ ಸೈಯದ ಅವರ ಸಾಂಸ್ಕೃತಿಕ ಲೋಕ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ನೃತ್ಯ ನಿರ್ದೇಶಕ ಡಾ. ಪ್ರಕಾಶ ಮಲ್ಲಿಗವಾಡ, ಶೀತಲ್ ಗೋಲ್ಡ್‌ ಸಂಸ್ಥೆಯ ಮುಖ್ಯಸ್ಥರಾದ ಜಯಂತಿಲಾಲ್ ಜೈನ್, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ್, ಕರವೇ ಮಹಿಳಾ ಘಟಕದ ಅಧ್ಯಕ್ಷ ಮಲ್ಲಮ್ಮ ಗೌಡರ, ಕಮಾಡೋಸ್‌ನ ಮುಖ್ಯಸ್ಥರಾದ ಎನ್.ಎ. ದೇಸಾಯಿ, ಕಲಾವಿದರಾದ ಅಶೋಕ ನಿಂಗೋಲಿ ಇದ್ದರು.

ಸುನೀಲ ಅರಳಿಕಟ್ಟಿ ಮತ್ತು ತಂಡ, ರಿತಿಕಾ ನೃತ್ಯ ತಂಡ, ಮಲ್ಲನಗೌಡ ಪಾಟೀಲ ಮತ್ತು ತಂಡ, ಆಶಾ ಮತ್ತು ತಂಡ, ಕಾರ್ತೀಕ ಗೋಸಾವಿ ಮತ್ತು ತಂಡ, ಮಾಜಾನ್ ನದಾಫ ತಂಡ, ಶಿವಾನಂದ ಅಮರಶೆಟ್ಟಿ ತಂಡಗಳಿಂಡ ವಿವಿಧ ಸಾಂಸ್ಕೃತಿಕ ಕಲಾ ವೈಭವದ ಹಾಡುಗಾರಿಕೆ, ನೃತ್ಯಗಳು ನಡೆದವು.

ವಿವಿಧ ಕ್ಷೇತ್ರದದಲ್ಲಿ ಸಾಧನೆ ಮಾಡಿದ ಸಾಧಕ ನಾಗರಾಜ ಕಲ್ಲೂರು (ವಕೀಲ ಕ್ಷೇತ್ರ), ಅಮೃತಾ ಕುರಲಿ (ಕ್ರೀಡಾ ಕ್ಷೇತ್ರ), ನಂದಾ ಅಚಲಕರ (ಯೋಗ ಮತ್ತು ಧ್ಯಾನ), ಆತ್ಮಾನಂದ ಕಬ್ಬೂರ (ನೃತ್ಯ ಕಲಾವಿದರು), ಶ್ರೇಯಾ ಪಡಸಲಗಿ (ಸಂಗೀತ ಕ್ಷೇತ್ರ) ಡಾ. ಮುರಳಿಧರ (ಮಾಜಿ ಅಭಿಯಂತರರು ಪಿ.ಡಬ್ಲ್ಯೂ.ಡಿ), ನಾಗವೇಣಿ ಪುಡಕಲಕಟ್ಟಿ (ಪ್ರಾಚಾರ್ಯರು), ಮನೋಜ ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಂಸ್ಕೃತಿಕ ಲೋಕದ ಕಾರ್ಯದರ್ಶಿ ಸೈಯದ ಎ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಜಾ ನಿರೂಪಿಸಿದರು. ಪ್ರೇಮಾನಂಧ ಶಿಂಧೆ ವಂದಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ