ಲಕ್ಷ್ಮೇಶ್ವರ: ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರು ಭವಿಷ್ಯ ರೂಪಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ. ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯವನ್ನು ಮಹಿಳೆಯರು ಮಾಡುವುದು ಅಗತ್ಯವಾಗಿದೆ. ಶಿಕ್ಷಣವು ಎಲ್ಲ ಶಕ್ತಿ ನೀಡುವ ಸಾಧನವಾಗಿದೆ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಬೇಕು. ಮಕ್ಕಳು ಹೆಚ್ಚು ಅಂಕ ಗಳಿಸಬೇಕು ಎಂಬ ಒತ್ತಡ ಹೇರುವ ಕಾರ್ಯ ಪಾಲಕರು ಮಾಡಬಾರದು. ಶಿಕ್ಷಣ ಕೊಡಿಸುವ ಕಾರ್ಯದಲ್ಲಿ ಪಾಲಕರು ಮುಂದೆ ಬರಬೇಕು, ಸಮಾಜದ ಸಂಘಟನೆಗೆ ಎಲ್ಲ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಮನಸೂರಿನ ರೇವಣಸಿದ್ಧೇಶ್ವರ ಮಠ ಡಾ. ಬಸವರಾಜ ದೇವರು, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಕೆ.ಎಚ್. ಭಾರ್ಗವ, ಶಾಂತಪ್ಪ, ಫಕ್ಕೀರಪ್ಪ ಹೆಬಸೂರ, ಹುಲ್ಲೂರಿನ ಅಮೋಘಿಮಠದ ಸಿದ್ದಯ್ಯ ಸ್ವಾಮಿಗಳು ಮಾತನಾಡಿದರು.ಸಭೆಯಲ್ಲಿ ಎಸ್.ಎಂ. ತಾಯಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಕೊಕ್ಕರಗುಂದಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಶಿಕ್ಷಕ ಎನ್.ಎನ್. ಶಿಗ್ಲಿ, ಜಿ.ಎನ್. ಶಿರನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಬಾದಾಮಿ ಪ್ರಾರ್ಥಿಸಿದರು. ಸ್ವಾಗತ ಬಿ.ಎಂ. ಯರಗುಪ್ಪಿ ಸ್ವಾಗತಿಸಿದರು.