ಧಾರ್ಮಿಕ ಶಿಕ್ಷಣದ ಜೊತೆಗೆ ಬೌದ್ಧಿಕ ವಿದ್ಯಾಭ್ಯಾಸ ಅಗತ್ಯ: ಡಾ ಮಂತರ್ ಗೌಡ

KannadaprabhaNewsNetwork |  
Published : Sep 17, 2024, 12:49 AM IST
ಶಾಸಕ ಡಾ ಮಂತರ್ ಗೌಡ ಅವರು ಮಾತನಾಡುತ್ತಿರುವುದು | Kannada Prabha

ಸಾರಾಂಶ

ಧಾರ್ಮಿಕ ಶಿಕ್ಷಣದ ಜೊತೆ ಬೌಧ್ಧಿಕ ವಿದ್ಯಾಭ್ಯಾಸ ಅಗತ್ಯ ಎಂದು ಶಾಸಕ ಡಾ ಮಂತರ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಧಾರ್ಮಿಕ ಶಿಕ್ಷಣದ ಜೊತೆಗೆ ಬೌದ್ಧಿಕ ವಿದ್ಯಾಭ್ಯಾಸ ಕೂಡ ಅಗತ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕುಶಾಲನಗರ ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1499 ನೇ ವರ್ಷದ ಜನ್ಮ‌ ದಿನಾಚರಣೆ ಪ್ರಯುಕ್ತ ‘ಶಪಾಪಾತೇ ಆಲಂ ಮಿಲಾದ್ ಕಾರ್ಯಕ್ರಮ’ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟಕರಾದ ಧರ್ಮ ಗುರುಗಳಾದ ನಾಸಿರ್ ಫೈಜ಼ಿ ಮಾತನಾಡಿ, ಪ್ರವಾದಿಯವರ ಆದರ್ಶಗಳನ್ನು ಹಾಗೂ ಸಂದೇಶವನ್ನು ಸಾರಿದರು.

ಗ್ಯಾರಂಟಿ ಅನುಷ್ಠಾನ ಯೋಜನೆಯ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷರಾದ ವಿ.ಪಿ.ಶಶಿಧರ್ ಮಾತನಾಡಿ, ವಿಶ್ವದ ಎರಡನೇ ದೊಡ್ಡ ರಾಷ್ಟ್ರ ಭಾರತವಾಗಿದೆ. ವಿಶ್ವಾದ್ಯಂತ ಪ್ರವಾದಿಯವರ ಸಂದೇಶವನ್ನು ಇಷ್ಟಪಡುವವರ ಸಂಖ್ಯೆ ಏರಿಕೆಗೊಳ್ಳುತ್ತಿದೆ. ಪ್ರವಾದಿಯವರ ಜೀವನ ಸಂದೇಶವನ್ನು ಅಳವಡಿಸಿಕೊಂಡಿರುವ ಭಾರತೀಯ ಮುಸಲ್ಮಾನರು ಅತ್ಯಂತ ಅನ್ಯೋನ್ಯತೆಯಿಂದ ಬಾಳು ಸಾಗಿಸುತ್ತಿದ್ದಾರೆ ಎಂದರು.

ಸ್ವಾಗತ ಭಾಷಣ ಮಾಡಿದ ದಾರುಲ್ ಉಲೂಂ ಮದ್ರಸದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಗಣ್ಯರನ್ನು ಸ್ವಾಗತಿಸಿದರು.

ನಂತರ ಹಿಲಾಲ್ ಮಸೀದಿ ಹಾಗೂ ದಾರುಲ್ ಉಲೂಂ‌ ಮದ್ರಸಕ್ಕೆ ಸಂಬಂಧಿಸಿದಂತೆ ಶಾಸಕರ ಬಳಿ ಮನವಿ ಸಲ್ಲಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಾರುಲ್ ಉಲೂಂ‌ ಮದ್ರಸದ ಪ್ರಾಂಶುಪಾಲರಾದ ಎಂ.ತಮ್ಲೀಕ್ ದಾರಿಮಿ, ಪ್ರವಾದಿಯವರ ಜೀವನ ಶೈಲಿ ಹಾಗೂ ಅವರ ಮಾನವತಾವಾದವನ್ನು ಪ್ರತಿಯೊಬ್ಬರು ಅರಿಯುವುದು ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಂ.ಎಂ.ಎಸ್.ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ

ಪುರಸಭೆ ಮಾಜಿ ಅಧ್ಯಕ್ಷರಾದ ಜಯವರ್ಧನ್ ಮಾತನಾಡಿ, ಕುಶಾಲನಗರದಲ್ಲಿ ಹಿಂದೂ‌ ಮುಸಲ್ಮಾನರು ಪರಸ್ಪರ ಸಾಮರಸ್ಯರಿಂದ ಬದುಕುತ್ತಿದ್ದಾರೆ ಎಂದರು.‌

ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ , ಜಾಮಿಯಾ ಮಸೀದಿ ಮಾಜಿ‌ ಅಧ್ಯಕ್ಷ ಅಲೀಂ ಅವರು ಮಾತನಾಡಿದರು.

ಧರ್ಮ ಗುರುಗಳಾದ ನಾಸಿರ್ ಫೈಜ಼ಿರವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು

ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ‌ ಪಡೆದ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನ‌ ವಿತರಿಸಲಾಯಿತು.

ಶಾಸಕ ಡಾ.ಮಂತರ್ ಗೌಡ, ವಿ‌.ಪಿ.ಶಶಿಧರ್, ಪ್ರಮೋದ್ ಮುತ್ತಪ್ಪ, ಜಯವರ್ಧನ್ ಹಾಗೂ ಕೆ.ಬಿ.ಶಂಶುದ್ಧೀನ್ ಅವರನ್ನು ಸನ್ಮಾನಿಸಿ‌ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನೂರ್ ಮಸೀದಿ ಅಧ್ಯಕ್ಷರಾದ ಶಬೀರ್ ಭಾಷಾ, ಹಿಲಾಲ್ ಮಸೀದಿ ಉಪಾಧ್ಯಕ್ಷರಾದ ಹಂಸ ಹಾಜಿ, ಸಹ ಕಾರ್ಯದರ್ಶಿ ಮುಹಮ್ಮದಾಲಿ, ಅಲ್ ಇಹ್ಸಾನ್ ಸಮಿತಿ ಅಧ್ಯಕ್ಷರಾದ ಮುಸ್ತಫಾ, ಮಾದಾಪಟ್ಟಣ ಮದರಸ ಅಧ್ಯಕ್ಷರಾದ‌ ಶರಫುದ್ದೀನ್, ಗೊಂದಿಬಸವನಹಳ್ಳಿ‌ ಮದ್ರಸ ಅಧ್ಯಕ್ಷರಾದ ಹಂಜ಼, ಅಸ್ಕರ್ ಅಲಿ, ಸಮಿವುಲ್ಲಾ ಖಾನ್, ದಾರುಲ್ ಉಲೂಂ‌‌ ಮದ್ರಸ ಅಧ್ಯಾಪಕರಾದ ಅಶ್ರಫ್ ಅಝ್ಹರಿ, ರಾಜ಼ಿಕ್ ರಹಮಾನಿ, ಶಫೀರ್, ಹಂಸ, ಅಲವಿ, ಶಕೀರ್ ಫೈಜ಼ಿ, ಉನೈಸ್ ಫೈಜ಼ಿ, ಮುಸ್ತಾಕ್ ದಾರಿಮಿ, ಅಲ್ ಇಹ್ಸಾನ್ ಕಮಿಟಿ ಹಾಗೂ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ