ಕನ್ನಡಪ್ರಭ ವಾರ್ತೆ ಕೋಲಾರಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಟೀಕಿಸಿಕೊಂಡು ಇಟಲಿ ಮೇಡಂ ಮತ್ತು ರಾಹುಲ್ ಗಾಂಧಿರನ್ನು ಮೆಚ್ಚಿಸಿ ಹೀರೋ ಆಗಿ ರಾಜ್ಯದ ಸಿಎಂ ಸ್ಥಾನ ಪಡೆಯುವ ದಿಸೆಯಲ್ಲಿ ಹಗಲು ಕನಸು ಕಾಣುತ್ತಿದ್ದಾರೆ ಬಿಜೆಪಿಯ ಮಾಜಿ ಸಂಸದ ಎಸ್. ಮುನಿಸ್ವಾಮಿ ವಾಗ್ದಾಳಿ ನಡೆಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಪ್ರಿಯಾಂಕ ಅವರು ತಮಗೆ ವಹಿಸಿರುವ ಐ.ಟಿ. ಬಿ.ಟಿ. ಕಂಪನಿಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮುಂತಾದ ಜವಾಬ್ದಾರಿಯುತ ಕೆಲಸಗಳನ್ನು ಮಾಡದೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಚರ್ಚೆಯಲ್ಲಿ ತೊಡಗಿ ಪುಕ್ಕಟೆ ಪ್ರಚಾರ ಪ್ರಿಯರಾಗಿದ್ದಾರೆ ಎಂದು ವ್ಯಂಗವಾಡಿದರು.ಅಂಬೇಡ್ಕರ್ ತಂದ ಸಂವಿಧಾನದ ಮೀಸಲಾತಿ ಭಿಕ್ಷೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಹಾಗೂ ರಾಧಾಕೃಷ್ಣ ಸಹ ಸಂಸದರಾಗಿ ಸ್ಥಾನಮಾನ ಪಡೆದಿದ್ದಾರೆ. ಅಂಬೇಡ್ಕರ್‌ಗೆ ರಾಜಕಾರಣದಲ್ಲಿ ಬೆಳೆಯಲು ಅವಕಾಶ ನೀಡದಂತೆ ಕುತಂತ್ರ ಮಾಡಿದಂತ ಕಾಂಗ್ರೆಸ್‌ನ ಖಳನಾಯಕರು ಎಂದು ದೂರಿದರು.ಆರ್.ಎಸ್.ಎಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಪ್ರಿಯಾಂಕ ಖರ್ಗೆ ಡಿಎನ್‌ಎ ಪರೀಕ್ಷೆಯಾಗಬೇಕು. ಮಲ್ಲಿಕಾರ್ಜುನ ಖರ್ಗೆ ಇಟಾಲಿ ಮೇಡಂ ಮೆಚ್ಚಿಸಲು ತಮ್ಮ ಮಕ್ಕಳಿಗೆ ಪ್ರಿಯಾಂಕ್ ಹಾಗೂ ರಾಹುಲ್ ಎಂದು ಹೆಸರಿಟ್ಟು ಎ.ಐ.ಸಿ.ಸಿ. ಅಧ್ಯಕ್ಷ ಸ್ಥಾನ ಪಡೆದರು. ಅದೇ ರೀತಿ ಪ್ರಿಯಾಂಕ ಅವರು ಆರ್.ಎಸ್.ಎಸ್ ಹಾಗೂ ಬಿಜೆಪಿಯನ್ನು ಟೀಕಿಸುವ ಮೂಲಕ ರಾಜ್ಯದ ಸಿಎಂ ಕುರ್ಚಿ ಪಡೆಯಲು ಕುತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ಆರ್.ಎಸ್.ಎಸ್. ನೋಂದಣಿಯಾಗಿಲ್ಲ ಎಂದು ದೂರುತ್ತಿದ್ದಾರೆ. ಆದರೆ ಆರ್.ಎಸ್.ಎಸ್. ಪಕ್ಷಕ್ಕೆ ನೂರಾರು ವರ್ಷದ ಇತಿಹಾಸವಿದೆ. ಸ್ವಾತಂತ್ರ್ಯಕ್ಕಾಗಿ 10 ಮಂದಿಯಲ್ಲ ಸಾವಿರಾರು ಮಂದಿ ಹೋರಾಟ ಮಾಡಿ ತಮ್ಮ ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ. ದಲಿತ ಸಮುದಾಯದಲ್ಲಿ ಹುಟ್ಟಿರುವ ಇವರು ತಮ್ಮ ತಾತನ ಜನ್ಮ ದಿನಾಂಕದ ಪ್ರಮಾಣ ಪತ್ರ ತರಲಿ. ತಾತನೇ ಇಲ್ಲದೆ ತಂದೆ ಬರಲು ಹೇಗೆ ಸಾಧ್ಯವಾಗುತ್ತೆ, ಹಿಂದೂಗಳು, ಹಿಂದುತ್ವವನ್ನು ವಿರೋಧಿಸುವಂತ ಇಂತಹವರಿಗೆ ಆರ್.ಎಸ್.ಎಸ್ ದಾಖಲೆಗಳು ಕೊಡುವಂತ, ತೋರಿಸುವಂತ ಅವಶ್ಯಕತೆ ಇಲ್ಲ ಎಂದರು. ಪ್ರಿಯಾಂಕ ಖರ್ಗೆ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಇರುವಂತ ಈ ನೆಲದ ಹಿಂದೂಗಳ ಸಂಘಟನೆ ಹೀಯ್ಯಾಳಿಸಿರುವುದಕ್ಕೆ ಕೂಡಲೇ ಕ್ಷಮೆಯಾಚಿಸಬೇಕು. ಐಟಿ, ಬಿಟಿಯ ಒಂದು ಕಂಪನಿ ತರಲು ಯೋಗ್ಯತೆ ಇಲ್ಲದವರಿಗೆ ಸಚಿವ ಸ್ಥಾನ ನೀಡಿರುವುದು ನಾಲಾಯಕ್ ಆಗಿದೆ. ದಲಿತರು, ಅಂಬೇಡ್ಕರ್, ಸಂವಿಧಾನ ಈ ಪದಗಳು ಬಳಸಿಕೊಂಡು ಇವರು ಸ್ವಾರ್ಥಕ್ಕೆ ಬಳಸಿಕೊಂಡು ಉದ್ದಾರ ಆಗುತ್ತಿದ್ದಾರೆ ಎಂದರು.
ಈ ಹಿಂದೆ ನಿಮ್ಮಗಳ ಆಸ್ತಿ ಪಾಸ್ತಿ ಎಷ್ಟಿತ್ತು, ಈಗ ಎಷ್ಟಾಗಿದೆ ಹೇಗೆ ಬಂತು? ಎಷ್ಟು ಲಕ್ಷ ಕೋಟಿಗಳಿದೆ ಎಂಬುವುದು ಸರ್ಕಾರಕ್ಕೆ ಲೆಕ್ಕಾ ನೀಡಿದ್ದೀರಾ. ಈ ಬಗ್ಗೆ ನಾವೇ ಚಿತ್ತಾಪುರಕ್ಕೆ ಬಂದು ಕೇಳ ಬೇಕೋ ಎಂದ ಅವರು ಬೆಂಗಳೂರಿನ ಏರ್ ಪೋರ್ಟ್ ಬಳಿಯ 50 ಎಕರೆ ಜಾಗ ಕಬಳಿಸಿದ್ದೀರಾ, ರೈತರ ಜಮೀನುಗಳನ್ನು ಕಬಳಿಸಿ ಎಷ್ಟು ಮಂದಿಗೆ ಕೆಲಸ ನೀಡಿದ್ದೀರಾ? ಹೋಗಲಿ ನಿಮ್ಮ ಮನೆಯಲ್ಲಿ ಯಾರದಾರೂ ದಲಿತರನ್ನ ಮದುವೆ ಆಗಿದ್ದೀರಾ, 12ನೇ ಕ್ಲಾಸ್ ಫೈಲ್ ಆಗಿರೋದೂ ನಿಮಗೆ ಇಷ್ಟೊಂದು ಇದ್ದಾರೆ ಇನ್ನು ಉನ್ನತ ವ್ಯಾಸಂಗ ಮಾಡಿರುವವರಿಗೆ ಇನ್ನೆಷ್ಟೂ ಇರಬೇಡ ಎಂದರು. ಅಧಿಕಾರದಲ್ಲಿ ಸುಮಾರು 3 ವರ್ಷ ಕಳೆದಿದ್ದೀರಾ ಎಂದಾದರೂ ನಿಮ್ಮ ಖಾತೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೀರಾ, ನಿಮ್ಮ ಕೊಳಕು ಬಾಯಿ ಬಿಟ್ಟರೆ ಹಿಂದೂಗಳ ಬಗ್ಗೆ, ಆರ್.ಎಸ್.ಎಸ್. ಬಗ್ಗೆ ಅಥವಾ ಬಿಜೆಪಿ ಬಗ್ಗೆ ಆರೋಪಗಳು ಹೊರತುಪಡಿಸಿ ದೇಶದ ಉದ್ದಾರ, ನಿಮ್ಮ ಖಾತೆಯ ಅಭಿವೃದ್ದಿ ಯೋಜನೆಗಳ ಕುರಿತು ಎಂದಾದರೂ ಮಾತನಾಡಿದ್ದೀರಾ ಹೇಳಿ. ನಿಮ್ಮ ತಾತ ದೇಶ ವಿಭಜಿಸುವ ಕೆಲಸ ಮಾಡಿದ. ಈಗ ಅಲ್ಪಸಂಖ್ಯಾತರ ಒಲೈಸಿ ಓಟ್ ಬ್ಯಾಂಕ್ ಆಗಿ ಪರಿವರ್ತಿಸಲು ನೀವು ರಾಜ್ಯವನ್ನು ವಿಭಜಿಸುವ ಕೆಲಸ ಮಾಡಲು ಮುಂದಾಗಿದ್ದೀರಿ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ಗಾಂಧಿನಗರ ವೆಂಕಟೇಶ್, ಕೆಂಬೋಡಿ ನಾರಾಯಣಸ್ವಾಮಿ, ಯುವ ಮೋರ್ಚಾ ಬಾಲಾಜಿ, ಚಲಪತಿ, ಮಹೇಶ್, ರಾಜಕುಮಾರ್, ಜಮೀರ್ ಖಾನ್, ಗೋವಿಂದರಾಜು, ಕಾಡುಗುರು ನಾಗಭೂಷಣ್ ಇದ್ದರು.ಇಟಲಿ ಮೇಡಂ ಮೆಚ್ಚಿಸಲು ಆರ್‌ಎಸ್‌ಎಸ್ ಟೀಕೆ: ಮಾಜಿ ಸಂಸದ ಎಸ್. ಮುನಿಸ್ವಾಮಿ
ಅಂಬೇಡ್ಕರ್ ತಂದ ಸಂವಿಧಾನದ ಮೀಸಲಾತಿ ಭಿಕ್ಷೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಹಾಗೂ ರಾಧಾಕೃಷ್ಣ ಸಹ ಸಂಸದರಾಗಿ ಸ್ಥಾನಮಾನ ಪಡೆದಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.