ವಿದ್ಯೆ ಯಾರೊಬ್ಬರ ಆಸ್ತಿಯಲ್ಲ; ಕೀಳರಿಮೆ ಬಿಟ್ಟು ಕಲಿಯಿರಿ: ಆಶಾಲತಾ

KannadaprabhaNewsNetwork |  
Published : Nov 10, 2025, 12:30 AM IST
೯ಕೆಎಂಎನ್‌ಡಿ-೫ಮಂಡ್ಯದ ಅರಕೇಶ್ವರ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ವತಿಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿಗಳನ್ನು ನಿಕಟಪೂರ್ವ ಅಧ್ಯಕ್ಷೆ ಆಶಾಲತಾಪುಟ್ಟೇಗೌಡ ನೀಡಿದರು. | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಓದಿದವರು ಉನ್ನತಮಟ್ಟದ ಸಾಧನೆ ಮಾಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿಗೆ. ವಿದ್ಯೆ ಯಾರೊಬ್ಬರ ಆಸ್ತಿಯಲ್ಲ. ಕೀಳರಿಮೆ ಬಿಟ್ಟು ಗುರುಗಳು ಕಲಿಸಿ ಪಾಠ ಮತ್ತು ಸಂಸ್ಕಾರವನ್ನು ಶ್ರದ್ಧೆ ಮತ್ತು ಆಸಕ್ತಿಯಿಂದ ಕಲಿತರೆ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸುವುದನ್ನು ಗುರಿಯಾಗಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದು ಸಾಧನೆಯ ಗುರಿಯಿರಿಸಿಕೊಳ್ಳಬೇಕು ಎಂದು ಶ್ರೀರಂಗನಾಯಕಿ ಸ್ತ್ರೀ ಸಮಾಜದ ನಿಕಟಪೂರ್ವ ಅಧ್ಯಕ್ಷೆ ಆಶಾಲತಾ ಹೇಳಿದರು.

ನಗರದ ಅರಕೇಶ್ವರ ಬಡಾವಣೆಯಲ್ಲಿರುವ ಅರಳಿಮರ ಸರ್ಕಾರಿ ಶಾಲೆಯಲ್ಲಿ ಶ್ರೀರಂಗನಾಯಕಿ ಸ್ತ್ರೀ ಸಮಾಜ, ಕಾಮದೇನು ಶ್ರೀಶಕ್ತಿ ಸ್ವ-ಸಹಾಯ ಸಂಘ ಮತ್ತು ವಿವಿದ್ದೋಶ ಸಹಕಾರ ಸಂಘ ಆಯೋಜಿಸಿದ್ದ ದಿವಂಗತ ಸುಂದರಮ್ಮ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿ ವಿತರಣೆ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದಿದವರು ಉನ್ನತಮಟ್ಟದ ಸಾಧನೆ ಮಾಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿಗೆ. ವಿದ್ಯೆ ಯಾರೊಬ್ಬರ ಆಸ್ತಿಯಲ್ಲ. ಕೀಳರಿಮೆ ಬಿಟ್ಟು ಗುರುಗಳು ಕಲಿಸಿ ಪಾಠ ಮತ್ತು ಸಂಸ್ಕಾರವನ್ನು ಶ್ರದ್ಧೆ ಮತ್ತು ಆಸಕ್ತಿಯಿಂದ ಕಲಿತರೆ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ ಎಂದರು.

ಶ್ರೀರಂಗನಾಯಕಿ ಸ್ತ್ರೀ ಸಮಾಜ ಸಂಘಟನೆಯಿಂದ ಸಾಕಷ್ಟು ಅಭಿವೃದ್ಧಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದೇವೆ. ಶಾಲೆ ಆರಂಭಿಸಿದ್ದೇವೆ. ಮಹಿಳೆಯರಿಗೆ ಕೌಶಲ ತರಬೇತಿ ನೀಡುತ್ತಿದ್ದೇವೆ. ನಮ್ಮ ಸೇವಾ ಕಾರ್ಯ ಗುರುತಿಸಿ ರಾಜ್ಯಸರ್ಕಾರ ಕಿತ್ತೂರು ರಾಣಿ ಚನ್ನಮ್ಮ ಪುರಸ್ಕಾರ ಮತ್ತು ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿದೆ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ದಿ.ಸುಂದರಮ್ಮ ಸ್ಮರಣಾರ್ಥ ಹಾಗೂ ಸಮಾಜಸೇವಕಿ ಮನುಶ್ರೀ ಸಹಕಾರದಿಂದ ಪರೀಕ್ಷಾ ಪರಿಕರ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ, ಕಮಲಮ್ಮ, ಸುವರ್ಣಾದೇವಿ, ರಾಷ್ಟ ಯುವ ಪ್ರಶಸ್ತಿ ಪುರಸ್ಕೃತೆ ಅನುಪಮಾ, ಮುಖ್ಯಶಿಕ್ಷಕಿ ಕಲ್ಪನಾ, ಮಂಜುನಾಥ್, ರಾಘವೇಂದ್ರ, ಕಾವ್ಯ, ವಿಜಯಲಕ್ಷ್ಮೀ, ಸುರೇಖಾ, ಅಪ್ಪಾಜಯ್ಯ ಮತ್ತಿತರರಿದ್ದರು.

ನ.11 ರಂದು ನೋಂದಣಿಗೆ ಅವಕಾಶ

ಮಂಡ್ಯ: ಕೃಷಿ ಇಲಾಖೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ವಿ.ಸಿ.ಫಾರಂ ವತಿಯಿಂದ ಜಿಲ್ಲಾ ವ್ಯಾಪ್ತಿಯ ರೈತರಿಗೆ ಮಾವು, ತೆಂಗು, ಬಾಳೆ ಮತ್ತು ಅಡಿಕೆ ಬೆಳೆ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಮೂರು ದಿನಗಳ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತ ರೈತರು ನವೆಂಬರ್ 11 ರೊಳಗೆ ನೋಂದಣಿ ಮಾಡಬಹುದಾಗಿದೆ. ತರಬೇತಿಯಲ್ಲಿ ಭಾಗವಹಿಸುವವರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಸದರಿ ತರಬೇತಿಯು 45 ರೈತರು, ರೈತ ಮಹಿಳೆಯರಿಗೆ ಆಯೋಜಿಸಲಾಗಿದ್ದು, ಮೊದಲ ಬಂದವರಿಗೆ ಆದ್ಯತೆ ನೀಡಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ