ದೊಡ್ಡಬಳ್ಳಾಪುರದಲ್ಲಿ ಕಮಲಶಿಲೆ ಕ್ಷೇತ್ರ ಮಹಾತ್ಮೆ ಯಕ್ಷಗಾನ

KannadaprabhaNewsNetwork |  
Published : Nov 10, 2025, 12:15 AM IST
ದೊಡ್ಡಬಳ್ಳಾಪುರದಲ್ಲಿ ನಾಗಶ್ರೀ ಕರಾವಳಿ ಯಕ್ಷಗಾನ ಮಿತ್ರ ಬಳಗದ ವತಿಯಿಂದ ನಡೆದ ಕಮಲಶಿಲೆ ಕ್ಷೇತ್ರ ಮಹಾ ಯಕ್ಷಗಾನ ಪ್ರದರ್ಶನ ವೇಳೆ ಕಲಾವಿದರನ್ನು ಗೌರವಿಸಲಾಯಿತು | Kannada Prabha

ಸಾರಾಂಶ

ದೊಡ್ಡಬಳ್ಳಾಪುರ : ಇಲ್ಲಿನ ನಾಗಶ್ರೀ ಕರಾವಳಿ ಯಕ್ಷಗಾನ ಮಿತ್ರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ, ಶ್ರೀ ಕ್ಷೇತ್ರ ದಶಾವತಾರ ಯಕ್ಷಗಾನ ಮೇಳದ ಪ್ರಸಿದ್ದ ಕಲಾವಿದರಿಂದ ಕಮಲಶಿಲೆ ಕ್ಷೇತ್ರ ಮಹಾತ್ಮ ( ಶ್ರೀ ಬ್ರಾಹ್ಮ ದುರ್ಗಾಪರಮೇಶ್ವರಿ ಚರಿತ್ರೆ) ಯಕ್ಷಗಾನ ಪ್ರದರ್ಶನ ನಗರದ ಶ್ರೀ ನೆಲದಾಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯಿತು.

ದೊಡ್ಡಬಳ್ಳಾಪುರ : ಇಲ್ಲಿನ ನಾಗಶ್ರೀ ಕರಾವಳಿ ಯಕ್ಷಗಾನ ಮಿತ್ರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ, ಶ್ರೀ ಕ್ಷೇತ್ರ ದಶಾವತಾರ ಯಕ್ಷಗಾನ ಮೇಳದ ಪ್ರಸಿದ್ದ ಕಲಾವಿದರಿಂದ ಕಮಲಶಿಲೆ ಕ್ಷೇತ್ರ ಮಹಾತ್ಮ ( ಶ್ರೀ ಬ್ರಾಹ್ಮ ದುರ್ಗಾಪರಮೇಶ್ವರಿ ಚರಿತ್ರೆ) ಯಕ್ಷಗಾನ ಪ್ರದರ್ಶನ ನಗರದ ಶ್ರೀ ನೆಲದಾಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಸದಾಶಿವ ಅಮೀನ್, ಮಧುಕರ ಹೆಗ್ಗಡೆ ಭಾಗವತಿಕೆ, ವಿಶ್ವನಾಥ ಅವರ ಸಂಗೀತದಲ್ಲಿ ಮೂಡಿಬಂದ ಯಕ್ಷಗಾನ ಪ್ರಸಂಗದಲ್ಲಿ ಕಲಾವಿದರ ಮನೋಜ್ಞ ಅಭಿನಯದ ಯಕ್ಷಗಾನ ಬಯಲಾಟ ನೆರೆದಿದ್ದ ಸಭಿಕರನ್ನು ರೋಮಾಂಚನಗೊಳಿಸಿತು. ಬ್ರಾಹ್ಮಿ ದುರ್ಗಾಪರಮೇಶ್ವರಿಯ ದರ್ಶನಕ್ಕೆ ಪ್ರೇಕ್ಷಕರು ಭಾವಪರವಶರಾದರು.ಯಕ್ಷಗಾನದ ಉದ್ಘಾಟನೆ ಬಳಿಕ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ನಮ್ಮ ಸಂಸ್ಕೃತಿ, ಪರಂಪರೆ ಬಿಂಬಿಸುವ ನಿಟ್ಟಿನಲ್ಲಿ ಯಕ್ಷಗಾನ ಪ್ರಸಂಗ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಪ್ರಸಂಗ ತನ್ನದೇ ಆದ ವೈಶಿಷ್ಟ್ಯ ಹೊಂದಿವೆ. ಕರಾವಳಿ ದೈವಾರಾಧನೆಗೆ ಪ್ರಸಿದ್ದಿಯಾಗಿದೆ. ಕಾಂತಾರ ಚಲನಚಿತ್ರದಲ್ಲಿಯೂ ದೈವೃತ್ವದ ವಿಚಾರ ಅಡಗಿದ್ದು, ಕರ್ನಾಟಕ ಕಲೆ, ಸಂಸ್ಕೃತಿಗಳ ನೆಲೆಬೀಡು ಎನ್ನುವುದಕ್ಕೆ ಇದು ನಿದರ್ಶನ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್, ಲಕ್ಷ್ಮೀಪತಿ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ನವೀನ್, ನೆಲದಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಸೀತಾರಾಂ, ನಾಗಶ್ರೀ ಕರಾವಳಿ ಮಿತ್ರ ಬಳಗದ ಮುಖ್ಯಸ್ಥರಾದ ಕೆ.ಎಸ್.ಚಂದ್ರು, ನರಸಿಂಹಮೂರ್ತಿ, ಸದಾಶಿವ, ಶ್ರೀಕಾಂತ್ ಆಚಾರ್ಯ, ರಮೇಶ್, ಶ್ರೀನಿವಾಸ್, ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಲಿ ಸಂಚಾಲಕ ಗೋಪಾಲ ಮತ್ತಿತರರು ಇದ್ದರು.

9ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ನಾಗಶ್ರೀ ಕರಾವಳಿ ಯಕ್ಷಗಾನ ಮಿತ್ರ ಬಳಗದ ವತಿಯಿಂದ ನಡೆದ ಕಮಲಶಿಲೆ ಕ್ಷೇತ್ರ ಮಹಾ ಯಕ್ಷಗಾನ ಪ್ರದರ್ಶನ ವೇಳೆ ಕಲಾವಿದರನ್ನು ಗೌರವಿಸಲಾಯಿತು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ