ಕನ್ನಡಪ್ರಭ ವಾರ್ತೆ ಪಾವಗಡ
ತಾಲೂಕಿನ ಶ್ರೀ ಕನ್ನಿಕಾಪರಮೇಶ್ವರಿ ದೇವಿ ಆರ್ಯವೈಶ್ಯ ಸಂಘ ಹಾಗೂ ಜಿ.ಎಸ್.ಡಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಬುಧವಾರ ಪಟ್ಟಣದ ಆಂಜನೇಯ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ–2026ರ ಸಮಾರೋಪ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.
ವಿದ್ಯೆ ಸಾಧಕರ ಸತ್ತು. ಪರಿಶ್ರಮವಿದ್ದರೆ ಯಶಸ್ಸು ಖಂಡಿತ ಲಭಿಸುತ್ತದೆ. ಉತ್ತಮ ವಿದ್ಯಾವಂತರಾಗಿ ಉನ್ನತಾ ಹುದ್ದೆ ಹಾಗೂ ಇತರೆ ಸೇವಾ ಕಾರ್ಯಗಳ ಮೂಲಕ ಸಮಾಜ ಹಾಗೂ ದೇಶಕ್ಕೆ ಉಪಯುಕ್ತ ಕೊಡುಗೆ ನೀಡುವಂತೆ ಸಲಹೆ ನೀಡಿದರು.ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಶ್ಲಾಘಿಸಿದ ಶಾಸಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಅವರ ಭವಿಷ್ಯದ ಸಾಧನೆಗೆ ಸ್ಫೂರ್ತಿಯಾಗಲಿವೆ ಎಂದು ತಿಳಿಸಿದರು.ತಾಲೂಕಿನ ಆರ್ಯ ವೈಶ್ಯ ಸಮುದಾಯದ ಬಗ್ಗೆ ಹೆಚ್ಚು ಗೌರವ ಹೊಂದಿದ್ದು ಸೇವಾ ಮನೋಭಾವ ವುಳ್ಳವರಾಗಿದ್ದಾರೆ. ತಮ್ಮ ವ್ಯಾಪಾರ, ವಿದ್ಯಾಭ್ಯಾಸ ಹಾಗೂ ಇತರೆ ಸೇವಾ ಕಾಯಗಳ ಮೂಲಕ ಬದುಕು ರೂಪಿಸಿಕೊಂಡು ಮುನ್ನಡೆಯುತ್ತಿರುವುದು ಸಂತಸ ತಂದಿದೆ. ಸಮುದಾಯದ ಪ್ರಗತಿಗೆ ಸದಾ ಸಹಕಾರ ಹಾಗೂ ಬೆಂಬಲವಿರುವ ಭರವಸೆ ವ್ಯಕ್ತಪಡಿಸಿದರು. ಅತಿ ಹೆಚ್ಚು ಆಂಕಗಳಿಸಿ ಸನ್ಮಾನಿತರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.