ಸ್ವಾಭಿಮಾನದ ಬದುಕಿಗೆ ಶಿಕ್ಷಣವೇ ಮದ್ದು: ಶ್ರೀಷಡಕ್ಷರ ಮುನಿ ಸ್ವಾಮೀಜಿ

KannadaprabhaNewsNetwork |  
Published : Jul 30, 2024, 01:30 AM IST
ಚಿತ್ರ 2 | Kannada Prabha

ಸಾರಾಂಶ

Education is the medicine for a self-respecting life: Shrishadakshara Muni Swamiji

-ದಲಿತ ಸಂಘರ್ಷ ಸಮಿತಿಯ ತಾಲೂಕು ಮಹಿಳಾ ಮತ್ತು ವಾರ್ಡ್ ಶಾಖೆಗಳ ಉದ್ಘಾಟನಾ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ ಹಿರಿಯೂರು

ದಲಿತರು ಸಶಕ್ತ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಒಂದೇ ಸರಿಯಾದ ಮಾರ್ಗ ಎಂದು ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಹರಿಶ್ಚಂದ್ರಘಾಟ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಮಹಿಳಾ ಮತ್ತು ವಾರ್ಡ್ ಶಾಖೆಗಳನ್ನು ಉದ್ಘಾಟಿಸಿ ಮಾತನಾಡಿದರು.

ದಲಿತರು ಬಡತನವನ್ನೇ ನೆಪ ಮಾಡಿಕೊಂಡು ಯಾವುದೇ ಕ್ಷೇತ್ರದಲ್ಲಿ ಶ್ರಮವಹಿಸಿ ಸಾಧನೆ ಮಾಡದೆ ನಿರ್ಲಕ್ಷ್ಯವಹಿಸಿದರೆ ಬದುಕಿನಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಂಡು ಅವರಂತೆ ಬದುಕಲು ಮತ್ತು ಬೆಳೆಯಲು ಪ್ರಯತ್ನಿಸಬೇಕು. ಸಂಘರ್ಷಗಳನ್ನು ಹಿಂದಿಕ್ಕಿ ಶಿಕ್ಷಣ ಪಡೆದು ಉದ್ಯೋಗ ಸಂಪಾದಿಸಿ ಸಮಾಜದ ಮುಖ್ಯವಾಹಿನಿಗೆ ದಲಿತರು ಬರಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಮಾತ್ರ ದಲಿತರು ಅಭಿವೃದ್ಧಿಯತ್ತ ಸಾಗಬಹುದಾಗಿದೆ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ, ಅಂಬೇಡ್ಕರ್ ದಲಿತರ ಬಾಳಿನ ಬೆಳಕಾಗಿದ್ದು, ಅವರ ನಿಷ್ಠೆ, ಹೋರಾಟ, ಸಾಧನೆಯನ್ನು ಯಾರೂ ಮರೆಯಬಾರದು. ದಲಿತರ ಉದ್ದಾರಕ್ಕಾಗಿ ತಮ್ಮ ಜೀವಮಾನವಿಡಿ ಶ್ರಮಿಸಿದ ದಲಿತರ ದೈವ ಅಂಬೇಡ್ಕರ್ ಆವರ ಆಶಯಗಳಿಗೆ ಚ್ಯುತಿ ಬರದಂತೆ ಬದುಕುವುದೇ ನಾವು ಅವರಿಗೆ ಕೊಡುವ ಬಹುದೊಡ್ಡ ಗೌರವ ಎಂದರು.

ಪಾವಗಡದ ಸರ್ವಧರ್ಮ ಶಾಂತಿ ಪೀಠದ ಶ್ರೀರಾಮಮೂರ್ತಿ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.

ರಾಜ್ಯ ಪ್ರಧಾನ ಸಂಚಾಲಕ ಎಂ ಗೋವಿಂದರಾಜ್, ಹೆಗ್ಗೆರೆ ಮಂಜುನಾಥ್, ಬೌದ್ಧ ಧರ್ಮದ ಗುರುಗಳಾದ ಅರವಿಂದ್ ಬೋತ್, ಶೇಖರ್ ಕೆ ಬೆಂಗಳೂರು ರಾಜ್ಯ ವಿಭಾಗಿಯ ಸಂಚಾರಕ ಶೇಖರ್,ರಾಜ್ಯ ಮುಖಂಡರಾದ ಅಂಬರೀಶ್, ಹಂಪಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತಪ್ಪ, ರಾಜಣ್ಣ ಕೊಟ್ಟಿಗೆ, ಜೀವೇಶ್, ರಘು, ಸುಭದ್ರಮ್ಮ, ಶಾರದಮ್ಮ, ಕೆಂಚಮ್ಮ,ಸಿದ್ದಮ್ಮ, ಮಂಜಮ್ಮ, ನಿಂಗಮ್ಮ, ಕಣ್ಮಕ್ಕ, ಲಕ್ಷ್ಮೀದೇವಿ, ಶ್ರುತಿ, ಮಂಜುನಾಥ್, ಕೂನಿಕೆರೆ ಮಾರುತೇಶ್,ಚಂದ್ರಪ್ಪ ಘಾಟ್ ಹಾಜರಿದ್ದರು.

------

ಫೋಟೊ: 1,2

ನಗರದ ಹರಿಶ್ಚಂದ್ರಘಾಟ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಮಹಿಳಾ ಮತ್ತು ವಾರ್ಡ್ ಶಾಖೆಗಳನ್ನು ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!