ನಮ್ಮ ದೇಶ ಕಂಡ ಅದ್ಭುತ ದಾರ್ಶನಿಕ, ಚಿಂತಕ, ಅಪ್ಪಟ ಸಮಾಜವಾದಿ, ಸಾಮಾಜಿಕ ಹೋರಾಟಗಾರ, ಭಾರತೀಯ ಸಮನ್ವಯ ಧಾರ್ಮಿಕ ಪರಂಪರೆಯಲ್ಲಿ ಅಪರೂಪದ ಸಿದ್ಧಾಂತವಾದಿ. ಅವರ ಧಾರ್ಮಿಕ ಸಿದ್ಧಾಂತಗಳು ವಾದಕ್ಕಾಗಿ ಮಾತ್ರವಲ್ಲ, ವಾದಿಸಿ ಗೆಲ್ಲುವುದಕ್ಕೂ ಅಲ್ಲ. ಅದು ಸರ್ವರ ಜೀವನದ ಧರ್ಮವಾಗಬೇಕು ಎಂದು ತಾನು ಕಂಡ ಸತ್ಯವನ್ನು ಆಚರಿಸಿ ತೋರಿಸಿದವರು ನಾರಾಯಣ ಗುರುಗಳ ಆದರ್ಶ ಹಾಗೂ ಮಾರ್ಗದರ್ಶನದಲ್ಲಿ ಸಾಗಿದ ಈಡಿಗ ಜನಾಂಗದವರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಮೂಲಕ ಯಶಸ್ವಿ ಉದ್ಯಮಿಗಳಾಗಿ, ರಾಜಕೀಯವಾಗಿ ಸಫಲತೆ ಸಾಧಿಸಿದ್ದಾರೆ ಎಂದು ಸುದೀರ್ಘವಾಗಿ ಮಾತನಾಡಿ ಕರ್ನಾಟಕದ ವಿಧಾನಸಭೆಯಲ್ಲಿ ಈಡಿಗ ಸಮಾಜದ ೧೦ ಶಾಸಕರಿದ್ದಾರೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಕಲಿಯಿರಿ ಮತ್ತು ಕಲಿಸಿರಿ, ಬೆಳೆಯಿರಿ ಮತ್ತು ಬೆಳೆಸಿರಿ, ಯೋಚಿಸಿರಿ ಮತ್ತು ಯೋಜಿಸಿರಿ ಎನ್ನುತ್ತಾ ಚೈತನ್ಯಪೂರ್ಣರಾಗಿ ಒಗ್ಗಟ್ಟಿನಿಂದ, ಕರ್ತವ್ಯ ಪ್ರಜ್ಞೆಯಿಂದ ಜಾಗೃತರಾಗಿ ಸಮಾಜದಲ್ಲಿ ಸಮಾನತೆಯನ್ನು ಪಡೆಯುವ ಏಕೈಕ ಸಾಧನ ಶಿಕ್ಷಣ ಎಂದು ವೃತ್ತಿ ಶಿಕ್ಷಣಕ್ಕೆ, ವಯಸ್ಕರ ಶಿಕ್ಷಣಕ್ಕೆ, ಮಹಿಳಾ ಶಿಕ್ಷಣಕ್ಕೆ ಪ್ರಾಧಾನ್ಯವನ್ನು ನೀಡಿ, ಹುಟ್ಟಿನ ಮೂಲದ ಜಾತಿಯ ಕೊಳೆಯನ್ನು ಬದುಕುವ ನೀತಿಯಿಂದ ಹೋಗಲಾಡಿಸಿದ ಏಕೈಕ ಹೋರಾಟಗಾರ ಹಾಗೂ ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ವೆಂಕಟೇಶ್ವರ ವಿದ್ಯಾಸಂಸ್ಥೆಯ ಪಾಲುದಾರ ಎಚ್. ವಿ. ರವಿಕುಮಾರ್ ತಿಳಿಸಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ನುಲಿಯ ಚಂದ್ರಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೋಷಣೆಗೆ ಒಳಗಾಗಿದ್ದವರ, ನೊಂದವರ ಕಣ್ಣೀರು ಒರೆಸುತ್ತ ಅವರ ಸ್ವಾಭಿಮಾನದ ಬದುಕನ್ನು ಎಚ್ಚರಿಸುತ್ತಾ, ಹೋರಾಡಿ ಮೌನಕ್ರಾಂತಿಯ ಮೂಲಕ ಸಾಮಾಜಿಕ ಧಾರ್ಮಿಕ ಮತ್ತು ಶೈಕ್ಷಣಿಕ ಜಯವನ್ನು ದೊರಕಿಸಿಕೊಟ್ಟ ನಾರಾಯಣ ಗುರುಗಳು ದೇವಶಿಲ್ಪಿಯ ಅಂತರಾತ್ಮದ ಕ್ರಾಂತಿಯ ಕಿಡಿಯಾಗಿ ಆ ಕಾಲದ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಓರ್ವ ಮಹಾನ್ ದಾರ್ಶನಿಕರಾಗಿದ್ದಾರೆ. ನಮ್ಮ ದೇಶ ಕಂಡ ಅದ್ಭುತ ದಾರ್ಶನಿಕ, ಚಿಂತಕ, ಅಪ್ಪಟ ಸಮಾಜವಾದಿ, ಸಾಮಾಜಿಕ ಹೋರಾಟಗಾರ, ಭಾರತೀಯ ಸಮನ್ವಯ ಧಾರ್ಮಿಕ ಪರಂಪರೆಯಲ್ಲಿ ಅಪರೂಪದ ಸಿದ್ಧಾಂತವಾದಿ. ಅವರ ಧಾರ್ಮಿಕ ಸಿದ್ಧಾಂತಗಳು ವಾದಕ್ಕಾಗಿ ಮಾತ್ರವಲ್ಲ, ವಾದಿಸಿ ಗೆಲ್ಲುವುದಕ್ಕೂ ಅಲ್ಲ. ಅದು ಸರ್ವರ ಜೀವನದ ಧರ್ಮವಾಗಬೇಕು ಎಂದು ತಾನು ಕಂಡ ಸತ್ಯವನ್ನು ಆಚರಿಸಿ ತೋರಿಸಿದವರು ನಾರಾಯಣ ಗುರುಗಳ ಆದರ್ಶ ಹಾಗೂ ಮಾರ್ಗದರ್ಶನದಲ್ಲಿ ಸಾಗಿದ ಈಡಿಗ ಜನಾಂಗದವರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಮೂಲಕ ಯಶಸ್ವಿ ಉದ್ಯಮಿಗಳಾಗಿ, ರಾಜಕೀಯವಾಗಿ ಸಫಲತೆ ಸಾಧಿಸಿದ್ದಾರೆ ಎಂದು ಸುದೀರ್ಘವಾಗಿ ಮಾತನಾಡಿ ಕರ್ನಾಟಕದ ವಿಧಾನಸಭೆಯಲ್ಲಿ ಈಡಿಗ ಸಮಾಜದ ೧೦ ಶಾಸಕರಿದ್ದಾರೆ ಎಂದು ತಿಳಿಸಿದರು. ಪುರಸಭೆ ಮಾಜಿ ಅಧ್ಯಕ್ಷೆ ಸುಧಾ ನಳಿನಿ ಮಾತನಾಡಿ ನಾರಾಯಣ ಗುರುಗಳ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ನಾವು ನೆನಪಿಸಬೇಕಾಗಿರುವುದು ಅಂದು ನಮ್ಮ ಹಿರಿಯರು ಅನುಭವಿಸಿದ ಸಾಮಾಜಿಕ ಮತ್ತು ಧಾರ್ಮಿಕ ಶೋಷಣೆಗಳನ್ನು. ತೊಟ್ಟಿಲ ಮದುವೆ, ಬಾಲ್ಯವಿವಾಹ, ಬಹುಪತ್ನಿತ್ವ ಪದ್ಧತಿ, ವರದಕ್ಷಿಣೆ, ದುಂದು ವೆಚ್ಚದ ಮದುವೆಗಳು, ನೈತಿಕ ಮತ್ತು ಆರ್ಥಿಕ ದಿವಾಳಿತನಕ್ಕೆ ಕಾರಣ. ಶಿಶುಗಳು ಭವಿಷ್ಯದ ಸಮಾಜ, ಆದ್ದರಿಂದ ಶಿಶುಗಳ ಆರೈಕೆಯನ್ನು ಮಾಡಬೇಕು. ಸರಳ ವಿವಾಹವನ್ನು ಅನುಸರಿಸಬೇಕು ಎಂದು ಮೂಢನಂಬಿಕೆ ಮತ್ತು ಧಾರ್ಮಿಕ ಅಂಧಾನುಕರಣೆಯನ್ನು ವಿರೋಧಿಸಿದವರು ಎಂದು ತಿಳಿಸಿದರು. ಬಿಇಒ ಸೋಮಲಿಂಗೇಗೌಡ ಅವರು ಮಾತನಾಡಿ ನುಲಿಯ ಚಂದಯ್ಯನವರು ಬಸವಣ್ಣನ ಸಮಕಾಲೀನ. ಕಾಯಕದಲ್ಲಿ ದೇವರನ್ನು ಕಾಣುವ ಚಂದಯ್ಯನವರು ಯುದ್ಧಕ್ಕೆ ಹೊರಟ ಸೈನಿಕ ಮನೆಯ ಹಂಗು ತೊರೆದಂತೆ, ದೇವರ ಮೇಲೆ ಭಕ್ತಿ ಇಟ್ಟವ ವ್ಯಕ್ತಿಗತ ಸುಖ, ಸಂಪತ್ತನ್ನು ತೊರೆಯಬೇಕು ಎಂದು ನಂಬಿದವರು ಜತೆಗೆ ಹೀಗೆ ತೊರೆಯದವರನ್ನು ಚಂದೇಶ್ವರ ಮೆಚ್ಚಲಾರ ಎಂದು ಚಂದಯ್ಯ ವಚನ ಕಟ್ಟಿದ್ದಾನೆ. ಚಂದೇಶ್ವರಲಿಂಗ ಎನ್ನುವ ವಚನಾಂಕಿತದಿಂದ ನುಲಿಯ ಚಂದಯ್ಯನವರು ಬರೆದ ೪೮ ವಚನಗಳು ಸಿಕ್ಕಿವೆ. ಹುಲ್ಲಿನ ಬಗ್ಗೆ ಚಂದಯ್ಯನವರು ಒಂದು ವಚನದಲ್ಲಿ ನಿರೂಪಿಸಿದ್ದಾರೆ. ಕಾಯಕ ಮತ್ತು ದಾಸೋಹದ ಹರಿಕಾರರಾದ ೧೨ನೇ ಶತಮಾನದ ಶರಣರು ಕಾಯಕ ತತ್ವವನ್ನು ಬಲವಾಗಿ ಪ್ರತಿಪಾದಿಸಿದ್ದರು. ದುಡಿಯದೆ ಊಟ ಮಾಡುವ ಹಕ್ಕು ಯಾರಿಗೂ ಇಲ್ಲ ಎಂಬುದನ್ನು ಚಾಚೂ ತಪ್ಪದೆ ಅನುಷ್ಟಾನಕ್ಕೆ ತಂದ ನುಲಿಯ ಚಂದಯ್ಯನವರ ವಚನ ಈ ಕಾಯಕ ತತ್ವವನ್ನು ನಿರೂಪಿಸುತ್ತದೆ ಎಂದು ಸುದೀರ್ಘವಾಗಿ ಮಾತನಾಡಿದರು.ಸುಜಾತ ಅಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನ, ಸಿಡಿಪಿಒ ಸುರೇಶ್, ಮೀನುಗಾರಿಕೆ ಇಲಾಖೆ ಅಧಿಕಾರಿ ಸುಮಾ, ಈಡಿಗ ಸಮುದಾಯದ ಮುಕಂಡರು ಹಾಗು ಉದ್ಯಮಿಗಳಾದ ದೊಡ್ಡಮಲ್ಲೇಗೌಡ, ಟಿ.ಗಿರೀಶ್ ಹಾಗೂ ಕಾಂತರಾಜ್, ಸತೀಶ್, ಗ್ರಾ.ಪಂ. ಮಾಜಿ ಸದಸ್ಯ ಮಧುಕುಮಾರ್, ಪಾಪೇಗೌಡ, ಚಂದ್ರಕಲಾ, ರಾಮಣ್ಣ, ಲೊಕೇಶ್, ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.