ಶಿಕ್ಷಣ ವಿಶ್ವದ ಸರ್ವತೋಮುಖ ಪ್ರಗತಿಯ ಆಧಾರ ಸ್ತಂಭ: ಕೋಡಿಮಠದ ಏಜೆಂಟ್‌ರಾದ ಮಹದೇವಪ್ಪ

KannadaprabhaNewsNetwork |  
Published : Dec 25, 2024, 12:46 AM IST
24ಎಚ್ಎಸ್ಎನ್11 : ಪೋಟೋ ಹಾರನಹಳ್ಳಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಗುರುವಂದಾನಕಾರ್ಯಕ್ರಮ ಮತ್ತು ಸ್ನೇಹಸಮ್ಮಿಲನ,ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು  ಕೋಡಿಮಠದ ಏಜೆಂಟ್ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯೆ ಎಂಬುದು ವಿಶ್ವವ್ಯಾಪಿ ಪದ. ಮಾನವನ ಬುದ್ಧಿ ವಿಕಾಸಕ್ಕೆ ಮೂಲಭೂತ ಬೀಜವೇ ವಿದ್ಯೆ ಹಾಗೂ ವಿಶ್ವದ ಸರ್ವತೋಮುಖ ಪ್ರಗತಿಯಲ್ಲಿ ಆಧಾರಸ್ತಂಭವೆ ಶಿಕ್ಷಣ. ಉತ್ತಮ್ಮ ಶಿಕ್ಷಣ ಪಡೆಯಬೇಕಾದರೆ ವಿದ್ಯಾರ್ಥಿಗಳು ಶಿಸ್ತನ್ನು ರೂಡಿಸಕೋಳ್ಳಬೇಕು. ಎಂದು ಕೋಡಿಮಠದ ಏಜೆಂಟ್‌ರಾದ ಮಹದೇವಪ್ಪ ಹೇಳಿದರು. ಹಾರನಹಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹಸಮ್ಮಿಲನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಶಿವಲಿಂಗೇಶ್ವರ ಕಾಲೇಜಲ್ಲಿ ಗುರುವಂದನೆ । ಸ್ನೇಹ ಸಮ್ಮಿಲನ, ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಹಾರನಹಳ್ಳಿ

ವಿದ್ಯೆ ಎಂಬುದು ವಿಶ್ವವ್ಯಾಪಿ ಪದ. ಮಾನವನ ಬುದ್ಧಿ ವಿಕಾಸಕ್ಕೆ ಮೂಲಭೂತ ಬೀಜವೇ ವಿದ್ಯೆ ಹಾಗೂ ವಿಶ್ವದ ಸರ್ವತೋಮುಖ ಪ್ರಗತಿಯಲ್ಲಿ ಆಧಾರಸ್ತಂಭವೆ ಶಿಕ್ಷಣ. ಉತ್ತಮ್ಮ ಶಿಕ್ಷಣ ಪಡೆಯಬೇಕಾದರೆ ವಿದ್ಯಾರ್ಥಿಗಳು ಶಿಸ್ತನ್ನು ರೂಡಿಸಕೋಳ್ಳಬೇಕು. ಯಾರಲ್ಲಿ ಶಿಸ್ತು, ಸಂಯಮದ ಧೈರ್ಯವಿರುತ್ತದೆಯೋ ಅಂತಹ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವೆಂದು ಕೋಡಿಮಠದ ಏಜೆಂಟ್‌ರಾದ ಮಹದೇವಪ್ಪ ಹೇಳಿದರು.

ಹಾರನಹಳ್ಳಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹಸಮ್ಮಿಲನ, ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಶಿಕ್ಷಣ ಜೊತೆ ಮಕ್ಕಳಿಗೆ ಉತ್ತಮ್ಮ ಸಂಸ್ಕಾರ ನೀಡುತ್ತಿದೆ. ಬರಿ ಸರ್ಕಾರಿ ಶುಲ್ಕ ತೆಗೆದುಕೊಂಡು ಉತ್ತಮ್ಮ ಶಿಕ್ಷಣವನ್ನು ನೀಡುತ್ತಿವೆ. ಮಠಗಳು ಅರಿವು ಆಹಾರ ಶಿಕ್ಷಣ ನೀಡುತ್ತಿದೆ. ನಮ್ಮ ಗುರುಗಳಾದ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಗ್ರಾಮೀಣ ಭಾಗದಲ್ಲಿ ಬಡಮಕ್ಕಳಿಗೆ ಉತ್ತಮ್ಮ ಶಿಕ್ಷಣ ನೀಡುವ ಉದೇಶದಿಂದ ಗ್ರಾಮೀಣ ಭಾಗದಲ್ಲಿ ಇಂತಹ ಶಿಕ್ಷಣ ಸಂಸ್ಥೆ ತೆರೆದು ಮಕ್ಕಳಿಗೆ ಸುಜ್ಞಾನ ನೀಡುತ್ತಿದ್ದಾರೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಎಚ್.ಪಿ.ಬಸವಲಿಂಗಪ್ಪ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಮ್ಮ ಕಾಲೇಜಿಗೆ ಉತ್ತಮ್ಮ ಫಲಿತಾಂಶ ಬರುತ್ತಿದೆ. ನಾವು ದೇವಾಲಯಕ್ಕ ಹೋದರೆ ದೇವರಿಗೆ ಹೇಗೆ ಶೃಂಗಾರ ಮಾಡುತ್ತಾರೊ ಹಾಗೇ ಮಕ್ಕಳಿಗೆ ಉಪನ್ಯಾಸಕರು ತಿದ್ದಿ ಮಕ್ಕಳ ಜೀವನಕ್ಕೆ ಶೃಂಗಾರ ಭಾವ ನೀಡುತ್ತಾರೆ. ಗುರು ಇದ್ದರೆ ಗುರಿ ಇರುತ್ತದೆ. ಮಕ್ಕಳಿಗೆ ವಿದ್ಯೆ ಸುಲುಭವಾಗಿ ಸಿಗುವ ವಸ್ತುವಲ್ಲ. ಅದಕ್ಕೆ ಪರಿಶ್ರಮ ಬೇಕು. ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಉತ್ತಮವಾದ ದಾರಿ ತೋರಿಸುತ್ತದೆ. ಆ ದಾರಿಯಲ್ಲಿ ನಾವು ನೆಡೆಯಬೇಕಾದರೆ ಮಕ್ಳಳಿಗೆ ಪೋಷಕರ ಮಾರ್ಗದರ್ಶನ ಬೇಕು. ಪಠ್ಯ ವಿಷಯಗಳ ಬಗ್ಗೆ ಆಸಕ್ತಿಯಿಂದ ಓದಬೇಕು. ಹಾಗಾದಾಗ ಮಾತ್ರ ನಮ್ಮ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.

ಹಳೆಯ ವಿಧ್ಯಾರ್ಥೀಗಳು ಹಾಗೂ ಚೈತ್ರ ಮಾತಮಾಡಿ, ನಮ್ಮ ಕಾಲೇಜಿನ ಪ್ರಾಂಶುಫಾರಾಗಿದ್ದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಪ್ರೇಮಕುಮಾರ್ ಸರ್ ನಮ್ಮಗೆ ಶಿಸ್ತು ಕಲಿಸಿದ್ದರು ಅವರು ಇಂದು ಮಾಡಬೇಕಾದ ಕೆಲಸಗಳನ್ನೆಲ್ಲಾ ಶ್ರದ್ದೆಯಿಂದ ಮಾಡಿದರೆ ಎಂದಿಗೂ ಯಶಸ್ಸು ಸಿಗುತ್ತದೆ ಎಂದು ಹೇಳುತ್ತಿದ್ದರು ಎಂದು ಕಾಲೇಜು ಬಗ್ಗೆ ಉಪನ್ಯಾಸಕರ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದರು.

ಹಳೆಯ ವಿಜ್ಞಾನ ವಿಧ್ಯಾರ್ಥಿಗಳು ಕಾಲೇಜಿಗೆ ಕುಡಿಯವ ನೀರಿನ ವಾಟರ್ ಪ್ಯೂರಿಫೈ ನೀಡಿದ್ದು ಇದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ್ಮ ಕುಡಿಯುವ ನೀರು ಸಿಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಜೆ.ಎಸ್.ಎಸ್.ಪದವಿಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ಸರ್ವಜ್ಞಮೂರ್ತಿ ಉಪನ್ಯಾಸ ನೀಡಿ ಎಲ್ಲಿ ಉತ್ತಮ್ಮ ವಾದ ಉಪನ್ಯಾಸಕರು, ಶಿಸ್ತು ಪ್ರಾಂಶುಪಾಲರು ಇರುತ್ತಾರೋ ಮಕ್ಕಳಿಗೆ ತಾನಾಗಿಯೇ ಕಲಿಯು ಅಸಕ್ತಿ ಬರುತ್ತದೆ. ಗ್ರಾಮೀಣ ಭಾಗದಲ್ಲಿ ಈ ಕಾಲೇಜು ಉತ್ತಮ್ಮ ವಾಗಿದೆ ಇದಕ್ಕೆ ಪ್ರತಿವರ್ಷದ ಫಲಿತಾಂಶವೇ ಸಾಕ್ಷಿಯಾಗಿದೆ ಎಂದರು. ಮಕ್ಕಳ ವಿಕಸನ ಶಿಸ್ತು ಭಾಷೆಯ ಬಳಕೆ ಬಗ್ಗೆ ಉಪನ್ಯಾನ ನೀಡಿದರು.

ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಬಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ,ವಿವಿದ ಕಾರ್ಯಕ್ರಮಗಳು ನಡೆದವು.

ವಿವಿಧ ಹೈಸೂಲ್ ಶಿಕ್ಷಕರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾಧ ಶಿವಕುಮಾರ್ ಎಂ.ಎಸ್., ಮಹಾಪೋಷಕರಾದ ಶಿವಣ್ಣ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕುಮಾರ್, ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಕಲ್ಪನ ಆರ್., ರುದ್ರಪ್ಪ ಎಸ್.ಎನ್., ಕೋಡಿಮಠದ ಮುಖ್ಯ ಶಿಕ್ಷಕ ಬಸವರಾಜು, ಮುಖ್ಯ ಶಿಕ್ಷಕರಾದ ಹಂದ್ರಾಳು ಕೃಷ್ಣಮೂರ್ತಿ ನಾಯಕ್, ಉಂಡಿಗನಾಳು, ಬಾಗೇಶಪುರ ಮುಖ್ಯ ಶಿಕ್ಷಕರು, ಕೃಷಿಕ ಮಂಜುನಾಥ್ ಇದ್ದರು

ವಿದ್ಯಾರ್ಥಿಗಳ ಪೋಷಕರು, ಹಾರನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು, ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು. ವಿದ್ಯಾರ್ಥಿ ನಂದಿನಿ ತಂಡ ಫ್ರಾರ್ಧನೆ ಮಾಡಿದರು. ಉಪನ್ಯಾಸಕರಾದ ದಿನೇಶ್ ಸ್ವಾಗತಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ