ಶಿಕ್ಷಣವು ಅಭಿವೃದ್ಧಿ, ರಾಷ್ಟ್ರ ನಿರ್ಮಾಣದ ಆಧಾರಸ್ತಂಭ-ನೆಹರು ಓಲೇಕಾರ

KannadaprabhaNewsNetwork |  
Published : Jul 19, 2026, 03:30 AM IST
ಬ್ಯಾಡಗಿ ತಾಲೂಕಿನ ಹಳೇಶಿಡೇನೂರ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಶಿಕ್ಷಣವು ವೈಯಕ್ತಿಕ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದ ಆಧಾರಸ್ತಂಭವಾಗಿದ್ದು, ಸಾಮಾಜಿಕ ಚಲನಶೀಲತೆ, ಆರ್ಥಿಕ ಸಬಲೀಕರಣ ಮತ್ತು ಸಾಂಸ್ಕೃತಿಕ ಸಂರಕ್ಷಣೆಗೆ ಪ್ರಥಮ ಹೆಜ್ಜೆಯಾಗಿದೆ ಎಂದು ಮಾಜಿ ಶಾಸಕ ನೆಹರು ಓಲೇಕಾರ ಅಭಿಪ್ರಾಯಪಟ್ಟರು.

ಬ್ಯಾಡಗಿ: ಶಿಕ್ಷಣವು ವೈಯಕ್ತಿಕ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣದ ಆಧಾರಸ್ತಂಭವಾಗಿದ್ದು, ಸಾಮಾಜಿಕ ಚಲನಶೀಲತೆ, ಆರ್ಥಿಕ ಸಬಲೀಕರಣ ಮತ್ತು ಸಾಂಸ್ಕೃತಿಕ ಸಂರಕ್ಷಣೆಗೆ ಪ್ರಥಮ ಹೆಜ್ಜೆಯಾಗಿದೆ ಎಂದು ಮಾಜಿ ಶಾಸಕ ನೆಹರು ಓಲೇಕಾರ ಅಭಿಪ್ರಾಯಪಟ್ಟರು.

ತಾಲೂಕಿನ ಹಳೇ ಶಿಡೇನೂರ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಒಕ್ಕೂಟಗಳ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಶೈಕ್ಷಣಿಕ ವ್ಯವಸ್ಥೆಗಳ ಮೇಲೆ ಅವಲಂಬಿತ: ಪ್ರಾಚೀನ ಕಾಲದ ಆಧ್ಯಾತ್ಮಿಕ ಜ್ಞಾನ ಭಂಡಾರದಿಂದ ಇಂದಿನ ಡಿಜಿಟಲ್ ಕಾಲದವರೆಗೆ ದೇಶದ ಪ್ರಜಾಪ್ರಭುತ್ವ ಮತ್ತು ಆರ್ಥಿಕ ಭವಿಷ್ಯ ಭದ್ರಪಡಿಸಿಕೊಳ್ಳಲು ಸುಶಿಕ್ಷಿತ ಜನರು ಅವಶ್ಯಕವಿದೆ, ಬೃಹತ್ ಯುವಪಡೆ ಹೊಂದಿರುವ ಭಾರತವು ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆಗಳ ಮೇಲೆ ಹೆಚ್ಚು ಅವಲಂಬಿತವಾಗುತ್ತಿದೆ ಎಂದರು.

ಐತಿಹಾಸಿಕ ವಿಕಸನ: ಗುರುಕುಲದಿಂದ ಆಧುನಿಕ ಶೈಕ್ಷಣಿಕ ವ್ಯವಸ್ಥೆಗಳವರೆಗೆ ಭಾರತೀಯ ಶಿಕ್ಷಣದ ಬೇರುಗಳು ಸಮಗ್ರ ಅಭಿವೃದ್ಧಿ ಪಾಲುದಾರಿಕೆ ವಹಿಸಿವೆ, ಶಿಕ್ಷಣ ಸಾಂಪ್ರದಾಯಿಕ ಗುರುಕುಲ ವ್ಯವಸ್ಥೆಯೊಂದಿಗೆ ಪ್ರಾರಂಭವಾಯಿತು. ಅಂದಿನ ವಿದ್ಯಾರ್ಥಿಗಳು ತತ್ವಶಾಸ್ತ್ರ, ರಾಜ್ಯ ಕೌಶಲ್ಯ, ಯುದ್ಧ ಮತ್ತು ನೈತಿಕ ಮೌಲ್ಯ ಕಲಿಯಲು ತಮ್ಮ ಶಿಕ್ಷಕರೊಂದಿಗೆ (ಗುರುಗಳು) ವಾಸಿಸುತ್ತಿದ್ದರು. ಹೀಗಾಗಿ ನಳಂದ ಮತ್ತು ತಕ್ಷಶಿಲಾದಂತಹ ಪ್ರಸಿದ್ಧ ಪ್ರಾಚೀನ ವಿಶ್ವವಿದ್ಯಾಲಯಗಳು ಪ್ರಪಂಚದಾದ್ಯಂತ ವಿದ್ವಾಂಸರನ್ನು ಕರೆ ತರುವ ಮೂಲಕ ಜ್ಞಾನದ ಜಾಗತಿಕ ಕೇಂದ್ರವಾಗಿದ್ದವು ಎಂದರು.

ಕಡ್ಡಾಯ ಶಿಕ್ಷಣ ಸ್ವಾಗತಾರ್ಹ: ನಿವೃತ್ತ ಪ್ರಾಚಾರ್ಯ ಲಿಂಗಯ್ಯ ಹಿರೇಮಠ ಮಾತನಾಡಿ, ಬ್ರಿಟಿಷ್ ಆಳ್ವಿಕೆ ಇಂಗ್ಲಿಷ್ ಮಾತನಾಡುವ ಆಡಳಿತ ಗುಮಾಸ್ತರ ವರ್ಗವನ್ನು ಉತ್ಪಾದಿಸುವತ್ತ ಸಾಗಿದ ಸಂದರ್ಭದಲ್ಲಿ ಸ್ವಾತಾಂತ್ರ್ಯಾನಂತರ ಸರ್ಕಾರ ಅನಕ್ಷರತೆ ನಿರ್ಮೂಲನೆ ಮಾಡಲು ಸಂವಿಧಾನದ 21ಏ ವಿಧಿಯ ಮೂಲಕ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಪ್ರಸಕ್ತ ವರ್ಷದ ಪ್ರಥಮ ಪಿಯುಸಿ ವಿಭಾಗಕ್ಕೆ ಸೇರ್ಪಡೆಯಾದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡುವ ಮೂಲಕ ಕಾಲೇಜು ಶಿಕ್ಷಣಕ್ಕೆ ಸ್ವಾಗತಿಸಲಾಯಿತು.

ಈ ವೇಳೆ ಗ್ರಾಮ ಆಡಳಿತಾಧಿಕಾರಿ ಶಬ್ಬೀರ ಬಾಗೇವಾಡಿ, ನಿವೃತ್ತ ಮುಖ್ಯಶಿಕ್ಷಕ ಶಿವಾನಾಯ್ಕ, ಪ್ರಾಚಾರ್ಯ ಶಿವಾನಂದ ಬೆನ್ನೂರ, ಉಪನ್ಯಾಸಕ ಡಿ.ಸಿ. ಚಂದ್ರಪ್ಪ, ತಿಪ್ಪೇಶ ಛಲವಾದಿ, ಹನುಮಂತಪ್ಪ ಗುಡ್ಡಣ್ಣನವರ, ಮಾಲತೇಶ ಹಕ್ಕಿಮರಣ್ಣನವರ, ಯಲ್ಲಪ್ಪ ಶಿವಣ್ಣನವರ, ಮಂಜುನಾಥ ಹಾದಿಮನಿ, ಎನ್.ವಿ. ಪ್ಯಾಟಿಗೌಡ್ರ, ಟಿ.ಎ. ಕಿಲ್ಲೇದಾರ, ಸಂತೋಷ ಬಣಕಾರ, ಭಾಗ್ಯಜ್ಯೋತಿ ಕಡೇಮನಿ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಪತ್ರಕರ್ತರಿಗೆ ಸರ್ಕಾರ ಗೌರವಧನ ನೀಡಲಿ: ಶಾಸಕ ಕೆ.ನೇಮಿರಾಜ್ ನಾಯ್ಕ
ಹರಪನಹಳ್ಳಿ ತಾಲೂಕನ್ನು ಬರ ಪೀಡಿತ ಎಂದು ಘೋಷಣೆಗೆ ಆಗ್ರಹ