ಹೊಸಕೋಟೆ: ಶಿಕ್ಷಣವೇ ಸಮಾಜದ ಬಲಿಷ್ಠ ಅಡಿಪಾಯವಾಗಿದ್ದು, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಸಮಾನ ಅವಕಾಶಗಳು ದೊರಕಬೇಕು ಎಂಬುದು ನಮ್ಮ ಪುಣ್ಯ ಭೂಮಿ ಸೇವಾ ಸಮಿತಿಯ ದೃಢ ನಿಲುವಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ ತಿಳಿಸಿದರು.
ಸಮಾಜ ಸೇವಕರಾದ ಸರ್ಜಾಪುರ ಎಸ್ಎಲ್‌ವಿ ಮಂಜುನಾಥ್ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಶಿಕ್ಷಣವೇ ಜೀವನದ ದಿಕ್ಕು ತೋರಿಸುವ ದೀಪವಾಗಿದ್ದು, ಇಂತಹ ಸಮಯದಲ್ಲಿ ನಮ್ಮ ಪುಣ್ಯ ಭೂಮಿ ಸೇವಾ ಸಮಿತಿಯ ಸೇವಾ ಕಾರ್ಯ ಶ್ಲಾಘನೀಯ. ಸಮಾಜದ ಪ್ರತಿಯೊಬ್ಬರೂ ಶಿಕ್ಷಣದ ಅಭಿವೃದ್ಧಿಗೆ ಕೈಜೋಡಿಸಬೇಕು. ಸರ್ಕಾರದ ಜೊತೆಗೆ ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮಾಜಮುಖಿ ವ್ಯಕ್ತಿಗಳು ಮುಂದೆ ಬಂದಾಗ ಮಾತ್ರ ಸರ್ಕಾರಿ ಶಾಲೆಗಳು ಇನ್ನಷ್ಟು ಬಲಿಷ್ಠವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಗಡದೇನಹಳ್ಳಿ ಗ್ರಾಪಂ ಸದಸ್ಯ ಸೊಪ್ಪಹಳ್ಳಿ ಸತೀಶ್, ಚಲನಚಿತ್ರ ನಟ ಸತ್ಯ, ಹಾರಗದ್ದೆ ಮನು, ಅಶೋಕ್, ಹಾಗೂ ನಮ್ಮ ಪುಣ್ಯ ಭೂಮಿ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.ಫೋಟೋ: 29 ಹೆಚ್‌ಎಸ್‌ಕೆ 2
ಹೊಸಕೋಟೆ ತಾಲೂಕಿನ ಅತ್ತಿವಟ್ಟ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನಮ್ಮ ಪುಣ್ಯ ಭೂಮಿ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಂತೋಷ್ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.