ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಡಿ. ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸದ ಪುಟಗಳನ್ನು ಪುನರಾವರ್ತಿಸಿ ನೋಡಿದಾಗ ರೈತವಾರಿ ಪದ್ಧತಿ, ಜಮೀನ್ದಾರಿ ಪದ್ಧತಿಗಳು ಅಸ್ತಿತ್ವದಲ್ಲಿದ್ದ ರೀತಿಯಲ್ಲಿ ಜೀತಪದ್ಧತಿಯೂ ಕೂಡ ಅಸ್ತಿತದಲ್ಲಿದ್ದು ಇದರಲ್ಲಿ ವಂಶ ಪಾರಂಪರ್ಯವಾಗಿ ಜೀತದಾಳು ಪದ್ಧತಿ ರೂಢಿಯಲ್ಲಿದ್ದು ಇದರಿಂದ ನಿರಂತರವಾಗಿ ಶೋಷಣೆ ಎಂಬುದು ಜರುಗುತ್ತಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಜೀತ ಪದ್ಧತಿ ಕಡಿಮೆಯಾಗಿದ್ದರೂ ಕೆಲ ಭಾಗಗಳಲ್ಲಿ ಇದು ನಡೆಯುತ್ತಿದ್ದು, ವಿದ್ಯಾರ್ಥಿಗಳಾದ ನೀವು ಇಂತಹ ಶೋಚನೀಯ ವ್ಯವಸ್ಥೆ ಎಲ್ಲಿಯಾದರೂ ಕಂಡು ಬಂದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಯುವಶಕ್ತಿ ದೇಶದ ಆಸ್ತಿಯಾಗಿದ್ದು ತಾವೆಲ್ಲರೂ ಗುರು-ಹಿರಿಯರ ಮಾರ್ಗದರ್ಶದಲ್ಲಿ ನಡೆದು ಗುರಿಯೊಂದಿಗೆ ಸಾಧನೆಯ ಹಾದಿಯಲ್ಲಿ ಮುನ್ನುಗ್ಗಿ ಭವಿಷ್ಯದ ಬದುಕನ್ನು ಹಸನಾಗಿಸಿಕೊಂಡು ಭವ್ಯ ಭಾರತದ ಸತ್ಪ್ರೆಜೆಗಳಾಗಬೇಕು ಎಂದರು.ಪ್ಯಾನೆಲ್ ವಕೀಲ ಬಿ.ಎನ್. ಅಜಯ್ ಮಾತನಾಡಿ, ಹಿಂದಿನಿಂದಲೂ ಇಂತಹ ಅನಿಷ್ಠ ಪದ್ಧತಿಗಳು ರೂಢಿಯಲ್ಲಿದ್ದು ಪ್ರಸ್ತುತ ದಿನಗಳಲ್ಲಿ ಇವುಗಳನ್ನು ಇಲ್ಲವಾಗಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ. ಭವಿಷ್ಯದ ದಿನಗಳಲ್ಲಿ ತಮ್ಮಲ್ಲಿಯೇ ಇರುವ ವಿವಿಧ ಪ್ರತಿಭೆಗಳನ್ನು ಅನಾವರಣ ಮಾಡಿ ರಾಷ್ಟ್ರದ ಸದೃಢತೆಗೆ ಸಹಕಾರಿಯಾಗಬೇಕು. ಶಿಸ್ತು, ಸಂಯಮದಿಂದ ನಡೆದುಕೊಂಡು ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಉತ್ತಮವಾಗಿ ಕಾಪಾಡಬೇಕು ಎಂದ ಅವರು ಮಾನವನ ದಿನನಿತ್ಯ ಜೀವನದಲ್ಲಿ ಬಳಕೆಯಾಗುವ ಕಾನೂನುಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಲಯ ಪಾಲಕ ಮಂಜುನಾಥ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.