ಕನ್ನಡಪ್ರಭ ವಾರ್ತೆ ಸಾಗರ
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ತಾಲ್ಲೂಕು ಪೈಂಟ್ ಗುತ್ತಿಗೆದಾರರು ಹಾಗೂ ಕೆಲಸಗಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಉದ್ಘಾಟಿಸಿ, ಕಾರ್ಮಿಕರಿಗೆ ವಿಮಾ ಪಾಲಿಸಿ ವಿತರಿಸಿ ಮಾತನಾಡಿದ ಅವರು, ಗುಡಿಸಲಿನಲ್ಲಿ ವಾಸಿಸುವ ಕುಟುಂಬ ವೊಂದರ ಮಗುವೊಂದು ಐ.ಎ.ಎಸ್. ಅಧಿಕಾರಿಯಾಗಿರುವ ಉದಾಹರಣೆ ನಮ್ಮ ಎದುರಿಗೆ ಇದೆ. ನಿಮ್ಮ ಮಕ್ಕಳು ಮನಸ್ಸು ಮಾಡಿದರೆ ಅದು ಸಾಧ್ಯವಾಗುತ್ತದೆ. ವರಿಗೆ ನಿಮ್ಮ ಪ್ರೋತ್ಸಾಹ ಮುಖ್ಯ ಎಂದರಲ್ಲದೆ ಕಾರ್ಮಿಕರು ವಿಮೆ ಮಾಡಿಸುವ ಮೂಲಕ ಆಪತ್ಕಾಲದಲ್ಲಿ ಕುಟುಂಬಕ್ಕೆ ನೆರವಾಗಬೇಕು. ಸಂಘಟಿತರಾಗಿ ಸರ್ಕಾರಿ ಸೌಲಭ್ಯ ಪಡೆಯಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಕೆ.ಸಿದ್ದಪ್ಪ ಮಾತನಾಡಿ, ಮನೆಯೊಂದು ಸುಂದರವಾಗಿ ಕಾಣಬೇಕಾದರೆ ಪೈಂಟರ್ಗಳ ಪಾತ್ರ ಪ್ರಮುಖವಾಗಿರುತ್ತದೆ. ಅತ್ಯಂತ ಕಷ್ಟಪಟ್ಟು ನೀವು ಕೆಲಸ ಮಾಡುತ್ತೀರಿ. ನೀವು ಸಂಘಟಿತರಾಗುವುದು ಹೆಚ್ಚು ಅಗತ್ಯವಾಗಿದೆ. ಅಸಂಘಟಿತ ಕಾರ್ಮಿಕ ವಲಯದಲ್ಲಿ ಗುರುತಿಸಿಕೊಂಡಿರುವ ನಿಮ್ಮ ಪರವಾಗಿ ನಮ್ಮ ಸಂಘಟನೆ ನಿಲ್ಲುತ್ತದೆ ಎಂದು ಹೇಳಿದರು.ಸಂಘದ ಅಧ್ಯಕ್ಷ ರಾಜು ಬಿ. ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಎಸ್.ವಿ.ಕೃಷ್ಣಮೂರ್ತಿ, ಕಾರ್ಮಿಕ ನಿರೀಕ್ಷಕಿ ಶಿಲ್ಪ, ಶ್ರೀನಿವಾಸ್ ಮೇಸ್ತ್ರಿ, ರಾಬರ್ಟ್ ಗೋಮ್ಸ್, ಗೌತಮ್ ಕೆ.ಎಸ್. ಹಾಜರಿದ್ದರು. ಜೆ.ಕೆ. ಶ್ರೀನಿವಾಸ್ ಸ್ವಾಗತಿಸಿದರು. ಮಂಜುಭಟ್ಟ ವಂದಿಸಿದರು. ಹರೀಶ್ ನಿರೂಪಿಸಿದರು.