ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಕನ್ನಡ ಭವನದಲ್ಲಿ ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಕಂಪನಿ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಗ್ರಾಮೀಣ ಮಕ್ಕಳಿಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬ ಮಾತಿನಂತೆ, ಬಿ.ಎಸ್.ಎಸ್.ಸಂಸ್ಥೆ ತನ್ನ ಲಾಭದಲ್ಲಿ ಕೆಲ ಅಂಶವನ್ನು ಶೈಕ್ಷಣಿಕ ವಿಚಾರಗಳಿಗೆ ಖರ್ಚು ಮಾಡುತ್ತಿರುವುದು ಸಂತೋಷದ ವಿಚಾರ, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಲಿ ಎಂದರು.
ಬಿ.ಎಸ್.ಎಸ್.ಸಂಸ್ಥೆ ಸೇರಿ ಯಾವುದೇ ಕಿರು ಹಣಕಾಸು ಸಂಸ್ಥೆಗಳಿಗೆ ಸಾಲ ಪಡೆಯುವ ಜನರು, ತಮಗೆ ಅವಶ್ಯಕತೆ ಇರುವಷ್ಟು ಮಾತ್ರ ಸಾಲ ಪಡೆದು, ಅದನ್ನು ನಿಗಧಿತ ಉದ್ದೇಶಕ್ಕೆ ಬಳಸಿಕೊಂಡು ಸರಿಯಾದ ಸಮಯಕ್ಕೆ ಮರುಪಾವತಿಸಿದರೆ, ಅದರಿಂದ ಸಂಸ್ಥೆಗೂ ಮತ್ತು ಸಾರ್ವಜನಿಕರಿಗೆ ಇಬ್ಬರಿಗೂ ಉಪಯೋಗ, ಸರಿಯಾದ ಸಮಯಕ್ಕೆ ಸಾಲ ಮರುಪಾವತಿಸಿದರೆ ಮತ್ತಷ್ಟು ಜನರಿಗೆ ಈ ರೀತಿಯ ಸೌಲಭ್ಯ ನೀಡಲು ಸಂಸ್ಥೆಗಳಿಗೆ ಶಕ್ತಿ ತುಂಬಿದಂತಾಗುತ್ತದೆ. ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಈ ವಿದ್ಯಾರ್ಥಿವೇತನವನ್ನು ಶೈಕ್ಷಣಿಕ ವಿಷಯಕ್ಕೆ ಅಗತ್ಯವಿರುವ ವಸ್ತುಗಳನ್ನು ಕೊಳ್ಳಲು ಬಳಸಿಕೊಂಡು, ಉತ್ತಮ ಪ್ರಜೆಗಳಾಗಿ ರೂಪಗೊಳ್ಳುವಂತೆ ಎಎಸ್ಪಿ ಅಬ್ದುಲ್ ಖಾದರ್ ಸಲಹೆ ನೀಡಿದರು.ಬಿ.ಎಸ್.ಎಸ್.ಸಂಸ್ಥೆಯ ಡೆಪ್ಯೂಟಿ ವೈಸ್ ಪ್ರೆಸಿಡೆಂಟ್ ಎಚ್.ವಿ.ಜಗದೀಶ್ ಮಾತನಾಡಿ, ಕಳೆದ 27 ವರ್ಷಗಳಿಂದ ದೇಶದ 13 ರಾಜ್ಯಗಳ 20 ಲಕ್ಷ ಗ್ರಾಹಕರೊಂದಿಗೆ ಬಿ.ಎಸ್.ಎಸ್.ಸಂಸ್ಥೆ ಕೆಲಸ ಮಾಡುತ್ತಾ ಬಂದಿದೆ ಎಂದರು.
ಇದೇ ಮೊದಲ ಬಾರಿಗೆ ವಿದ್ಯಾರ್ಥಿ ವೇತನ ಆರಂಭಿಸಲಾಗಿದೆ. ಹೆಚ್ಚಿನದಾಗಿ ಗ್ರಾಮೀಣ ಮಕ್ಕಳಿಗೆ ಈ ಸೌಲಭ್ಯ ಸಿಗಬೇಕೆಂಬ ಆಶಯ ಸಂಸ್ಥೆಯದಾಗಿದೆ. ಕಿರು ಸಾಲ ಹಿರಿ ಕನಸು ಅದುವೇ ಮೈಕ್ರೋ ಫೈನಾನ್ಸ್ ಎಂಬ ಘೋಷವಾಕ್ಯದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಕೇವಲ ನಂಬಿಕೆಯ ಮೇಲೆ ಸಾಲ ವಿತರಣೆ ಮಾಡುತ್ತಾ ಬಂದಿದ್ದೇವೆ. ವಿದ್ಯಾರ್ಥಿಗಳು ಒಳ್ಳೆಯ ಗುರಿಯೊಂದಿಗೆ ಮುನ್ನೆಡೆದರೆ ಯಶಸ್ಸು ಕಾಣಬಹುದು. ಈ ನಿಟ್ಟಿನಲ್ಲಿ ನಿಮ್ಮೆಲ್ಲರಿಗೂ ಶುಭವಾಗಲಿ ಎಂದರು.
ಬಿ.ಎಸ್.ಎಸ್ ಸಂಸ್ಥೆ ಕುರಿತು ಕೃಷಿಕ ಕುಣಿಗಲ್‌ನ ಗಂಗಾಧರಸ್ವಾಮಿ ಮತ್ತು ತುರುವೇಕೆರೆಯ ಮಂಜಯ್ಯ ಅವರು ಮಾತನಾಡಿದರು. ಸುಮಾರು 600 ವಿದ್ಯಾರ್ಥಿಗಳಿಗೆ ೨ ಸಾವಿರದಿಂದ ೫ ಸಾವಿರದವರೆಗೆ ವಿದ್ಯಾರ್ಥಿ ವೇತನ ನೀಡಿ ಅಭಿನಂದಿಸಲಾಯಿತು.