ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ

KannadaprabhaNewsNetwork |  
Published : May 08, 2026, 02:15 AM IST
7ಕೆಪಿಎಲ್21ಕೊಪ್ಪಳ ತಾಲೂಕಿನ ಹೊಸ ಬಂಡಿಹರ್ಲಾಪುರದಲ್ಲಿ 4 ಕೋಟಿ ವೆಚ್ಚದಲ್ಲಿ ಕೆ.ಪಿ.ಎಸ್ ಶಾಲಾ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು. | Kannada Prabha

ಸಾರಾಂಶ

ಈಗಾಗಲೇ ಹಿಟ್ನಾಳ, ಹೊಸಳ್ಳಿ, ಹೊಸ ಬಂಡಿಹರ್ಲಾಪುರ ಗ್ರಾಮಗಳಲ್ಲಿ ಶಾಲಾ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದೇವೆ.

ಕೊಪ್ಪಳ: ಕ್ಷೇತ್ರದಲ್ಲಿ ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ತಾಲೂಕಿನ ಬಂಡಿಹರ್ಲಾಪುರ ಜಿಪಂ ವ್ಯಾಪ್ತಿಯ ಅಗಳಕೇರಿ, ಶಿವಪುರ, ಹೊಸ ಬಂಡಿಹರ್ಲಾಪುರ, ಹಳೇ ಬಂಡಿಹರ್ಲಾಪುರ, ಬಸಾಪುರ, ಅಯೋಧ್ಯ, ನಾರಾಯಣಪೇಟೆ, ರಾಜರಾಮಪೇಟೆ, ಮಹಮದ್ ನಗರ ಹಾಗೂ ಕವಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಕ್ಷೇತ್ರಕ್ಕೆ ಸುಮಾರು 8 ಕೆಪಿಎಸ್ ಶಾಲೆ ತರಲಾಗಿದೆ.ಈಗಾಗಲೇ ಹಿಟ್ನಾಳ, ಹೊಸಳ್ಳಿ, ಹೊಸ ಬಂಡಿಹರ್ಲಾಪುರ ಗ್ರಾಮಗಳಲ್ಲಿ ಶಾಲಾ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಕಳೆದ 13 ವರ್ಷಗಳಲ್ಲಿ ಸುಮಾರು 1000ಕ್ಕೂ ಹೆಚ್ಚು ಶಾಲಾ ಕೊಠಡಿ ನಿರ್ಮಾಣ ಮಾಡಿದ್ದೇವೆ. ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆದಡಿಯಲ್ಲಿ ಅನೇಕ ವಸತಿ ಶಾಲೆ ತರುವ ಕೆಲಸ ಮಾಡಿದ್ದೇವೆ ಎಂದರು.

ಬಂಡಿಹರ್ಲಾಪುರ ವ್ಯಾಪ್ತಿಯಲ್ಲಿ ಜಂಪ್ ಸರ್ವೇ ನಂಬರ್ ಸಮಸ್ಯೆ ಇದ್ದು, ಅದನ್ನು ರೀ ಸರ್ವೇ ಮಾಡಿಸಿ ಅವುಗಳನ್ನು ಪರಿಹರಿಸುವ ಕೆಲಸ ಮಾಡುತ್ತೇವೆ. ಈಗಾಗಲೇ ಅಧಿಕಾರಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ ಅದಕ್ಕೆ ಶೀಘ್ರದಲ್ಲಿ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಶಾಸಕರು ರೈತರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉದ್ಯಮಿ ಚಂದ್ರಶೇಖರ ಐ.ಎಲ್.ಸಿ,ಗ್ಯಾರಂಟಿ ಸಮಿತಿ ಅಧ್ಯಕ್ಷ ಬಾಲಚಂದ್ರನ್ ಮುನಿರಬಾದ್, ಕೆ.ಎಂ.ಸೈಯದ್,ವಿಶ್ವನಾಥ್ ರಾಜೂರು,ಯಂಕಪ್ಪ ಹೊಸಳ್ಳಿ, ಚಂದಕೃಷ್ಣ ಹರ್ಲಾಪುರ, ಕನಕರಾಯ, ನಾಗರಾಜ ಪಠವಾರಿ, ಯಮನೂರಪ್ಪ ಬಸಾಪುರ, ಸೀನಣ್ಣ ಶಿವಪುರ, ಧರ್ಮರಾಜ್ ಕಂಪಸಾಗರ, ಮಲ್ಲು ಪೂಜಾರ್, ಭೀಮಣ್ಣ ಹರ್ಲಾಪುರ, ರೇಣುಕಮ್ಮ ಹರ್ಲಾಪುರ, ಸೋಮಶೇಖರ್ ಹಿಟ್ನಾಳ,ಬಸಣ್ಣ ಅಗಳಕೇರಿ, ಓಬಳೇಶ, ಅಶೋಕ ಹಿಟ್ನಾಳ,ಅಕ್ಬರ್ ಪಲ್ಟಾನ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾಣಿ, ಪಕ್ಷಿ ನಿರ್ಲಕ್ಷಿಸಿದರೆ ಪರಿಸರ ನಾಶ: ಈಶ್ವರಪ್ಪ ಹಂಚಿನಾಳ
ಶಿಕ್ಷಕರ ಕೈಯಲ್ಲಿದೆ ಸರ್ಕಾರಿ ಶಾಲೆಗಳ ಭವಿಷ್ಯ: ಆನಂದಗೌಡ ಪಾಟೀಲ