ಕನ್ನಡಪ್ರಭ ವಾರ್ತೆ ಮೈಸೂರು
ಈ ವೇಳೆ ಸೈಯದ್ ಇಸಾಕ್ ಮಾತನಾಡಿ, ಶಿಕ್ಷಣ ಎನ್ನುವುದು ದೇಶದ ಪ್ರತಿಯೊಂದು ಮಗುವಿಗೂ ಸಿಗಬೇಕು, ನಮ್ಮ ಬಳಿಯಿರುವ ಸಂಪತ್ತು ಅಂತಸ್ತು ಅಧಿಕಾರವನ್ನ ಯಾರಾದರೂ ಕಸಿದುಕೊಳ್ಳಬಹುದು. ಆದರೆ ನಮ್ಮಲ್ಲಿರುವ ಜ್ಞಾನವನ್ನು ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ ಎಂದರು.
ನಮ್ಮ ಗ್ರಂಥಾಲಯಕ್ಕೆ ಜೀವಧಾರ ರಕ್ತನಿಧಿ ಕೇಂದ್ರ ವತಿಯಿಂದ ಕಳೆದ ಒಂದು ವರ್ಷದಿಂದ ಕನ್ನಡ ದಿನಪತ್ರಿಕೆಗಳನ್ನ ಓದುಗರಿಗಾಗಿ ನೀಡುತ್ತಾ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳು, ಶುಭ ಸಮಾರಂಭಗಳು ಮತ್ತು ಹುಟ್ಟುಹಬ್ಬಗಳಲ್ಲಿ ಕನ್ನಡ ಪುಸ್ತಕಗಳನ್ನ ಉಡುಗರೆಯಾಗಿ ನೀಡುವ ಸಂಪ್ರದಾಯ ರೂಢಿಸಿಕೊಳ್ಳೋಣ. ಇದರಿಂದ ನಾಡಿನ ಕವಿಗಳಿಗೆ, ಸಾಹಿತಿಗಳಿಗೆ ಪ್ರೋತ್ಸಾಹಿಸಬಹುದು ಎಂದು ಹೇಳಿದರು.ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಕನ್ನಡ ಭಾಷೆಯ ಮಹತ್ವವನ್ನ ಮತ್ತು ಕರುನಾಡಿನ ಸಂಪತ್ತನ್ನ ಮುಂದಿನ ಯುಪೀಳಿಗೆಗೆ ಪರಿಚಯಿಸುವಲ್ಲಿ ಗ್ರಂಥಾಲಯದ ಪಾತ್ರ ಪ್ರಮುಖವಾದುದು. ಇತ್ತೀಚಿನ ದಿನದಲ್ಲಿ ರಾಜಕೀಯ, ಜಾತಿ ವ್ಯವಸ್ಥೆ, ಧರ್ಮ ಸಂಘರ್ಷದ ನಡುವೆ ಕನ್ನಡ ಭಾಷಾ ಅಭಿಮಾನ ಕಳೆದುಕಳ್ಳುತ್ತಿರುವುದು ಕನ್ನಡಿಗರಾಗಿ ನಾವು ನಮಗೆ ಮಾಡಿಕೊಳ್ಳುವ ಅಪಮಾನ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರೇಣುಕಾ ರಾಜ್, ನಗರ ಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ದುರ್ಗಾಪ್ರಸಾದ್, ರಾಕೇಶ್, ಎಸ್.ಎನ್. ರಾಜೇಶ್ ಮೊದಲಾದವರು ಇದ್ದರು.