ಸಮಾಜಕ್ಕೆ ಶಿಕ್ಷಣ ಉಪಯೋಗವಾಗಬೇಕು: ಗಂಗೇಶ್

KannadaprabhaNewsNetwork |  
Published : Jun 04, 2024, 12:30 AM IST
ಸಮಾಜಕ್ಕೆ ಶಿಕ್ಷಣ ಉಪಯೋಗವಾಗಬೇಕು | Kannada Prabha

ಸಾರಾಂಶ

ಪ್ರದರ್ಶನದಲ್ಲಿ ಕಂಡು ಬಂದ ಹಲವು ತಾಂತ್ರಿಕ ಮಾದರಿಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಉಪಯುಕ್ತವಾಗುವಂತೆ ರೂಪಿಸಿದ್ದಾರೆ. ಮುಂದೆ ಇದನ್ನು ಅಭಿವೃದ್ಧಿಪಡಿಸಿ ಸಮಾಜಕ್ಕೆ ಅರ್ಪಿಸುವಂತೆ ಗಂಗೇಶ್‌ ಗುಂಜನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಶಿಕ್ಷಣ ಸಮಾಜಕ್ಕೆ ಉಪಯೋಗ ಆಗುವಂತಿರಬೇಕು. ಕಲಿತದ್ದನ್ನು ಜೀವನದಲ್ಲಿ ಬಳಕೆಗೆ ಬರುವಂತಿರಬೇಕು ಎಂದು ತುಮಕೂರಿನ ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಸಹಾಯಕ ಮುಖ್ಯ ವ್ಯವಸ್ಥಾಪಕ ಗಂಗೇಶ್‌ ಗುಂಜನ್‌ ಹೇಳಿದರು.

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು ಸ್ಮಾರ್ಟ್ ಸಿಟಿ ಹಾಗೂ ತುಮಕೂರು ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಟೆಕ್ನೋಡಿಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಪ್ರದರ್ಶನದಲ್ಲಿ ಕಂಡು ಬಂದ ಹಲವು ತಾಂತ್ರಿಕ ಮಾದರಿಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಉಪಯುಕ್ತವಾಗುವಂತೆ ರೂಪಿಸಿದ್ದಾರೆ. ಮುಂದೆ ಇದನ್ನು ಅಭಿವೃದ್ಧಿಪಡಿಸಿ ಸಮಾಜಕ್ಕೆ ಅರ್ಪಿಸುವಂತೆ ಗಂಗೇಶ್‌ ಗುಂಜನ್ ತಿಳಿಸಿದರು.

ವಿದ್ಯಾರ್ಥಿಗಳು ಇಂದು ಉದ್ಯೋಗಿಯಾಗುವ ಗುರಿ ಬಿಟ್ಟು ಉದ್ಯಮಿಯಾಗುವತ್ತ ಗಮನ ಕೇಂದ್ರೀಕರಿಸಲು ಸಲಹೆ ನೀಡಿದ ಅವರು, ಉದ್ಯೋಗದಾತರಾಗಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದು ಇಂದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದ ಸಾಹೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡರವರು, ಪ್ರದರ್ಶನದಲ್ಲಿ ಪಾಲ್ಗೊಂಡು ತಾಂತ್ರಿಕ ಮಾದರಿ ಪ್ರದರ್ಶನ ಮಾಡಿದ್ದು ವಿದ್ಯಾರ್ಥಿಗಳಿಗೆ ದೊರತ ಅಭೂತಪೂರ್ವ ಅವಕಾಶ. ಇದನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.

ಸಾಹೆ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕುರಿಯನ್‌ರವರು ಕಥೆಯ ಮೂಲಕ ಶೈಕ್ಷಣಿಕ ಜ್ಞಾನದೊಂದಿಗೆ ಹೆಚ್ಚಿನ ಪಠೇತರ ಕೌಶಲ್ಯದ ಅರಿವಿನ ಮಹತ್ವವನ್ನು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶರವರು, ಮಾದರಿಗಳನ್ನು ರಚಿಸಿ ಪ್ರದರ್ಶಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ‘ಟೆಕ್ನೋಡಿಯ–೨೦೨೪’ ಮುಖ್ಯ ಸಂಚಾಲಕ, ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಲ್. ಸಂಜೀವ್‌ಕುಮಾರ್, ಸಹಾಯಕ ಪ್ರಾಧ್ಯಾಪಕಿಯರಾದ ವಿದ್ಯಾಲಕ್ಷ್ಮೀ, ಧನ್ಯ.ಪಿ, ಅನುರಾಧ.ಜಿ.ಆರ್, ಡಾ. ಎನ್. ಪ್ರದೀಪ್, ಡಾ. ಚಿದಾನಂದಮೂರ್ತಿ, ಎಂ.ಪ್ರದೀಪ್‌ರವರು ಮತ್ತು ಡಾ. ಮನು ಉಪಸ್ಥಿತರಿದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ