ದಾಬಸ್‌ಪೇಟೆ: ಸೋಂಪುರ ಗ್ರಾಪಂ ವ್ಯಾಪ್ತಿಗೆ ಸೇರುವ ಶಿವಾಸ್ ಡಾಬಾ ಬಳಿಯ ರಾಷ್ಟ್ರೀಯ ಹೆದ್ದಾರಿ-48ರ ಸರ್ವಿಸ್ ರಸ್ತೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಚರಂಡಿ ಹಾಗೂ ಶೌಚಾಲಯದ ನೀರು ರಸ್ತೆಗೆ ಹರಿಯುತ್ತಿದ್ದು, ವಾಹನ ಹಾಗೂ ಜನ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ. ಜಾಸ್ ಟೋಲ್ ಕಂಪನಿಯವರು ಈ ರಸ್ತೆಯನ್ನು ನಿರ್ವಹಿಸುತ್ತಿದ್ದು ಚರಂಡಿ ನಿರ್ಮಿಸದೆ ಕಾಟಾಚಾರಕ್ಕೆ ರಸ್ತೆ ನಿರ್ಮಿಸಿರುವುದೇ ಈ ಕೊಳಚೆ ನೀರು ರಸ್ತೆಗೆ ಬರಲು ಕಾರಣವೆಂಬುದು ಸಾರ್ವಜನಿಕರ ಆರೋಪ. ಈ ಸರ್ವಿಸ್ ರಸ್ತೆ ಮುಖಾಂತರ ದಕ್ಷಿಣಕಾಶಿ ಶಿವಗಂಗಾ ಕ್ಷೇತ್ರ, ಗೊರವನಹಳ್ಳಿ ಲಕ್ಷ್ಮೀ ದೇವಾಲಯ, ಸಾವನದುರ್ಗ, ಮಾಗಡಿ ರಂಗನಾಥ ಸ್ವಾಮಿ, ದೇವರಾಯನದುರ್ಗ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕಿದೆ. ಪ್ರತಿನಿತ್ಯ ಸಾವಿರಾರು ಜನರು ಈ ಗಲೀಜು ನೀರನ್ನು ಸಿಡಿಸಿಕೊಂಡೆ ಪ್ರವಾಸಿ ತಾಣಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಸಾರ್ವಜನಿಕರ ಆಕ್ರೋಶ: ಚರಂಡಿ ನಿರ್ಮಾಣ ವ್ಯವಸ್ಥೆ ಮತ್ತು ಸುವ್ಯವಸ್ಥಿತ ಪಾದಚಾರಿಗಳ ಮಾರ್ಗ ಮಾಡುವಂತೆ ಸ್ಥಳೀಯರು ಮನವಿ ಮಾಡಿಕೊಂಡರೂ ಸುಳ್ಳು ಭರವಸೆ ನೀಡಿ, ಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೆಟ್ಟ ವಾಸನೆ ಬರುತ್ತಿರುವ ಚರಂಡಿ ಹಾಗೂ ಶೌಚಾಲಯದ ನೀರನ್ನು ಬೇರೆ ಕಡೆ ಹರಿಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರೂ ಮನವಿಗೆ ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕೋಟ್ ..............ಈ ಸರ್ವಿಸ್ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುತ್ತದೆ. ಈಗಾಗಲೇ ಪ್ರಾಧಿಕಾರ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ರಸ್ತೆ ಸ್ವಚ್ಛಗೊಳಿಸಲು ಖಾಸಗಿಯವರಿಗೆ ವಹಿಸಿದ್ದಾರೆ. ಗ್ರಾಪಂಗೆ ಸ್ವಚ್ಛತೆಗೊಳಿಸಲು ವಹಿಸಿದರೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸುತ್ತೇವೆ.
-ರವಿಶಂಕರ್, ಪಿಡಿಒ, ಸೋಂಪುರ ಗ್ರಾಪಂಕೋಟ್..........ಸರ್ವೀಸ್ ರಸ್ತೆ ನಿರ್ಮಾಣ ಮಾಡಿದವರು ಚರಂಡಿಯನ್ನು ಸರಿಯಾಗಿ ನಿರ್ಮಿಸದಿರುವುದೇ ಈ ಅವ್ಯವಸ್ಥೆಗೆ ಮುಖ್ಯ ಕಾರಣವಾಗಿದೆ. ರಸ್ತೆ ಸರಿಪಡಿಸಲು ಎಷ್ಟು ಬಾರಿ ಮನವಿ ಮಾಡಿದರೂ ಹೆದ್ದಾರಿ ಪ್ರಾಧಿಕಾರ ಸ್ಪಂದಿಸುತ್ತಿಲ್ಲ. ಈಗಲಾದರೂ ಅಧಿಕಾರಿಗಳು ಗಮನಹರಿಸಿ ಕೂಡಲೇ ಸಮಸ್ಯೆ ಬಗೆಹರಿಸಬೇಕು.
-ಬಸವರಾಜು, ಸ್ಥಳೀಯ ನಿವಾಸಿ(ಒಂದು ಫೋಟೋ ಮಾತ್ರ ಬಳಸಿ)
ಪೋಟೋ 1 * 2 : ದಾಬಸ್‌ಪೇಟೆಯ ಶಿವಾಸ್ ಡಾಬಾ ಸಮೀಪ ರಾಷ್ಟ್ರೀಯ ಹೆದ್ದಾರಿ-48ರ ಸರ್ವೀಸ್ ರಸ್ತೆಯಲ್ಲಿ ಚರಂಡಿ ಹಾಗೂ ಶೌಚಾಲಯದ ನೀರು ರಸ್ತೆಗೆ ಹರಿಯುತ್ತಿರುವುದು.