ಹರಪನಹಳ್ಳಿ: ತಾಲೂಕಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರೂಪಿಸಿರುವ ಅಕ್ಷರ ಅವಿಷ್ಕಾರದಡಿ ಸಾಕಷ್ಟು ಶೈಕ್ಷಣಿಕ ಅಭಿವೃದ್ಧಿ ಆಗುತ್ತಲಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಸಭಾ ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, 1997ರಲ್ಲಿ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಯಿಂದ ದಾವಣಗೆರೆ ಜಿಲ್ಲೆಗೆ ಸೇರಿದಾಗ ಕಲ್ಯಾಣ ಕರ್ನಾಟಕದಿಂದ ಕೈ ಬಿಟ್ಟು ಹೋಗಿತ್ತು. ನಂತರ ಈಚೆಗೆ ದಿ. ಎಂ.ಪಿ.ರವೀಂದ್ರ ಶಾಸಕರಾಗಿ ಶ್ರಮ ವಹಿಸಿ ಹರಪನಹಳ್ಳಿ ತಾಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸುವುದರ ಮೂಲಕ ಹರಪನಹಳ್ಳಿಗೆ 371 ಜೆ ಸೌಲಭ್ಯ ಸಿಗುವಂತಾಯಿತು ಎಂದು ಸ್ಮರಿಸಿದರು. ಇಂದು ಕೆಕೆಆರ್ ಡಿ ಬಿ ಯಿಂದ ನೂರಾರು ಕೋಟಿ ಅನುದಾನ ಬರುತ್ತಲಿದೆ. ಇದರಿಂದ ಹಿಂದುಳಿದ ಹರಪನಹಳ್ಳಿ ತಾಲೂಕು ಅಭಿವೃದ್ಧಿ ಪಥದಲ್ಲಿ ಸಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಕಲಚೇತನರಿಗೆ ತ್ರಿಚಕ್ರವಾಹನ, ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಹಾಯಧನದ ಚೆಕ್‌ಗಳನ್ನು ಶಾಸಕರು ವಿತರಿಸಿದರು.ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಪುರಸಭಾ ಸದಸ್ಯರಾದ ಅಬ್ದುಲ್ ರಹಿಮಾನ್, ಮಂಜುನಾಥ ಇಜಂತಕರ, ಭರತೇಶ, ವೆಂಕಟೇಶ, ಭೀಮವ್ವ, ಹನುಮವ್ವ ಮುಖಂಡರಾದ ವಾಗೀಶ, ಚಿಕ್ಕೇರಿ ಬಸಪ್ಪ, ಗುಂಡಗತ್ತಿ ಕೊಟ್ರಪ್ಪ, ಉಪಸ್ಥಿತರಿದ್ದರು.ವಿವಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ
ಕಾರ್ಯಕ್ರಮದ ಸಂಯೋಜಕ ಡಾ. ಎಚ್. ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮೋಹನದಾಸ್, ಡಾ. ಶಶಿಧರ್ ಕೆಲ್ಲೂರ್ ಹಾಗೂ ಡಾ. ಸಂತೋಷ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ನಿಕಾಯದ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.