ಶ್ರೀ ತರಳಬಾಳು ವಿದ್ಯಾಸಂಸ್ಥೆಯಿಂದ ಗ್ರಾಮೀಣರಿಗೆ ಶೈಕ್ಷಣಿಕ ಸೌಲಭ್ಯ: ವೀರಣ್ಣ ಎಸ್.ಜತ್ತಿ

KannadaprabhaNewsNetwork |  
Published : Oct 06, 2025, 01:00 AM IST
ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಒಂದು ದಿನದ ಕಲಿಕಾ ದೃಢೀಕರಣದ ಪ್ರಗತಿ ಪರಿಶೀಲನಾ ಕಾರ್ಯಾಗಾರ | Kannada Prabha

ಸಾರಾಂಶ

ತರೀಕೆರೆಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ನೂರಾರು ಶಾಲಾ ಕಾಲೇಜುಗಳನ್ನು ಗ್ರಾಮೀಣ ಭಾಗದಲ್ಲಿ ಕಟ್ಟಿ, ಜನರಿಗೆ ಶೈಕ್ಷಣಿಕ ಸೌಲಭ್ಯ ನೀಡುತ್ತಿದೆ ಇದು ಹಿರಿಯ ಲಿಂಗೈಕ್ಯ ಶ್ರೀಗಳ ತ್ಯಾಗದ ಮನೋಭಾವ ಎಂದು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವಿಶೇಷ ಅಧಿಕಾರಿ ವೀರಣ್ಣ ಎಸ್. ಜತ್ತಿ ಹೇಳಿದ್ದಾರೆ.

- ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಒಂದು ದಿನದ ಕಲಿಕಾ ದೃಢೀಕರಣದ ಪ್ರಗತಿ ಪರಿಶೀಲನಾ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ನೂರಾರು ಶಾಲಾ ಕಾಲೇಜುಗಳನ್ನು ಗ್ರಾಮೀಣ ಭಾಗದಲ್ಲಿ ಕಟ್ಟಿ, ಜನರಿಗೆ ಶೈಕ್ಷಣಿಕ ಸೌಲಭ್ಯ ನೀಡುತ್ತಿದೆ ಇದು ಹಿರಿಯ ಲಿಂಗೈಕ್ಯ ಶ್ರೀಗಳ ತ್ಯಾಗದ ಮನೋಭಾವ ಎಂದು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವಿಶೇಷ ಅಧಿಕಾರಿ ವೀರಣ್ಣ ಎಸ್. ಜತ್ತಿ ಹೇಳಿದ್ದಾರೆ.ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಅನುದಾನಿತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜ್ ಮುಖ್ಯಸ್ಥರಿಗೆ ನಡೆದ ಒಂದು ದಿನದ ಕಲಿಕಾ ದೃಢೀಕರಣದ ಪ್ರಗತಿ ಪರಿಶೀಲನಾ ಕಾರ್ಯಾಗಾರದಲ್ಲಿ ಮಾತನಾಡಿದರು. ನಮ್ಮ ಸಂಸ್ಥೆ ಎಲ್ಲ ಶಾಲಾ, ಕಾಲೇಜುಗಳ ಮುಖ್ಯಸ್ಥರು ತಮ್ಮನ್ನು ತಾವು ಪೂರ್ಣವಾಗಿ ಅರ್ಪಿಸಿಕೊಂಡಾಗ, ಈ ನೇರಲ ಕೆರೆಯಂಥ ಅದ್ಭುತ ಶಾಲಾ ವಾತಾವರಣ ನಿರ್ಮಿಸಲು ಸಾಧ್ಯ ಎಂಬುದನ್ನು ತಿಳಿಸಿ, ಆರ್ಥಿಕವಾಗಿ ಹಿಂದುಳಿದ ಸುಮಾರು 74 ತಾಲೂಕುಗಳಲ್ಲಿ, ಅಲ್ಲಿ ಮಕ್ಕಳಿಗೆ ಹೇಗೆ ಉತ್ತಮ ಶೈಕ್ಷಣಿಕ ಸೌಲಭ್ಯವನ್ನು ಶ್ರೀ ನಂಜುಂಡಪ್ಪ ವರದಿ ಆಧಾರದಲ್ಲಿ ನೀಡಲಾಯಿತು, ಮುಖ್ಯಸ್ಥರು ಹಲವಾರು ಆಧುನಿಕ ಕ್ರಮ ಕೈಗೊಳ್ಳುವ ಮೂಲಕ ಶಾಲಾ, ಕಾಲೇಜ್‌ಗಳ ದಾಖಲಾತಿ ಮತ್ತು ಫಲಿತಾಂಶ ಹೇಗೆ ಉತ್ತಮ ಪಡಿಸಬಹುದು ಎಂಬ ಬಗ್ಗೆ ವಿವರಿಸಿದರು. ಶಾಲೆ ಮುಖ್ಯೋಪಾಧ್ಯಾಯ ಹಾಲೇಶ್ ಕೆ. ಟಿ ಮಾತನಾಡಿ ಕರ್ನಾಟಕ ಕಸ್ತೂರ್‌ಬಾ ಗಾಂಧಿ ಬಾಲಕಿಯರ ವಸತಿ ನಿಲಯವನ್ನು ನೇರಲಕೆರೆ ಗ್ರಾಮಕ್ಕೆ ತರಲು ಮಾಡಿದ ಪ್ರಯತ್ನ ಮತ್ತು ವಸತಿ ನಿಲಯಕ್ಕೆ ಇಡೀ ರಾಜ್ಯದಲ್ಲಿಯೇ ಉತ್ತಮ ಸೌಲಭ್ಯ ಒದಗಿಸಿರುವ ಬಗ್ಗೆ ತಿಳಿಸಿ. ನೇರಲಕೆರೆ ಈ ಶಾಲಾ ಕ್ಯಾಂಪಸ್‌ನ ಸುಂದರ ವಾತಾವರಣ ಸೃಷ್ಠಿಗೆ ಹಲವಾರು ಮಹನೀಯರ ಕೊಡುಗೆ ನೆನಪಿಸಿಕೊಂಡು, ಅಂತವರ ಉದಾತ್ತ ಗುಣಗಳನ್ನು ನಾವೂ ಕೂಡ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳೋಣ ಎಂದು ತಿಳಿಸಿದರು. ಶಾಲೆ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ .ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಯಿಂದ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಸುವ್ಯವಸ್ಥಿತವಾದ ಶಾಲಾ ಕಟ್ಟಡವನ್ನು ನೇರಲಕೆರೆ ಗ್ರಾಮ ದಲ್ಲಿ ನಿರ್ಮಿಸುತ್ತಿದ್ದು, ಅದರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲಿ, ಅಲ್ಲದೆ 14 ಜಿಲ್ಲೆಗಳಿಂದ ಬಂದಿರುವ ಪ್ರೌಢಶಾಲೆ ಮತ್ತು ಕಾಲೇಜ್‌ಗಳ ಮುಖ್ಯಸ್ಥರು, ತಮ್ಮ ಶಾಲಾ, ಕಾಲೇಜ್‌ಗಳ ಕ್ಯಾಂಪಸ್‌ಗಳನ್ನು ನಮ್ಮ ನೇರಲಕೆರೆ ರೀತಿ ಅಭಿವೃದ್ಧಿ ಪಡಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು. ಶಾಲಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ, ಶಾಲಾ ಸಮಿತಿ ಸದಸ್ಯ ಪುಟ್ಟಪ್ಪ ಚಿಕ್ಕಮಗಳೂರು ಶ್ರೀ ಭುವನೇಶ್ವರಿ ಪ್ರೌಢಶಾಲೆ ಮತ್ತು ಪಿ ಯು ಕಾಲೇಜ್‌ನ ಮುಖ್ಯಸ್ಥ ಚೇತನ ಮತ್ತು ಸುರಕೋಡಪ್ಪ, ಮಮತಾ, ಸ್ಥಳೀಯ ಸಲಹಾ ಸಮಿತಿ ಪದಾಧಿಕಾರಿ ಬಸವರಾಜಪ್ಪ ಎನ್. ಟಿ. ಮಹೇಶಪ್ಪ, ಮಹೇಶಣ್ಣ, ನಾಗರಾಜಣ್ಣ, ಪಾರ್ವತಮ್ಮ, ದಾನಿಗಳಾದ ಶಿವಣ್ಣ, ಶ್ರೀ ಬಸವೇಶ್ವರರ ಪುತ್ಥಳಿ ದಾನಿ ಪುಟ್ಟಮ್ಮ ಷಡಕ್ಷರಪ್ಪರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರು, ದಾನಿಗಳು, ಶಾಲಾ ಶಿಕ್ಷಕರು ಮತ್ತು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.5ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.

PREV

Recommended Stories

5 ವರ್ಷ ಸಿಎಂ ಎಂದೇ ಸಿದ್ದುಗೆ ಮತ ಹಾಕಿದ್ದೇವೆ : ರಾಯರಡ್ಡಿ
ಹಸು ಕೊಂದಿದ್ದಕ್ಕೆ ಎಂ.ಎಂ.ಹಿಲ್ಸ್‌ ಹುಲಿಯ ಹತ್ಯೆಗೈದು ಪ್ರತೀಕಾರ!