ನಾಲಂದಾ ಶಾಲೆಯ ಶೈಕ್ಷಣಿಕ, ಭೌತಿಕ ಅಭಿವೃದ್ಧಿ ಗುರಿ: ಎಚ್.ಎಂ.ಶಿವಕುಮಾರ

KannadaprabhaNewsNetwork | Published : Jan 19, 2025 2:20 AM

ಸಾರಾಂಶ

ನಾಲಂದಾ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪುನಾ ಉಚ್ಛಾಯಕ್ಕೆ ಬರುತ್ತದೆ ಎಂಬ ಭರವಸೆಯಲ್ಲಿ ಸಂಸ್ಥೆಯನ್ನು ಅವರಿಗೆ ಹಸ್ತಾಂತರಿಸಿದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಶಿವಕುಮಾರ ಹೇಳಿದರು. ತಾಳಗುಪ್ಪದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಿಂದ ಬೆಂಗಳೂರಿನ ಕಾಯಕ ಟ್ರಸ್ಟಿಗೆ ತಾಳಗುಪ್ಪದ ನಾಲಂದಾ ಶಿಕ್ಷಣ ಸಂಸ್ಥೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರು ಕಾಯಕ ಟ್ರಸ್ಟಿಗೆ ತಾಳಗುಪ್ಪದ ನಾಲಂದಾ ಶಿಕ್ಷಣ ಸಂಸ್ಥೆ ಹಸ್ತಾಂತರ

ಕನ್ನಡ ಪ್ರಭ ವಾರ್ತೆ ತಾಳಗುಪ್ಪ

ಹಂಪೆ ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಡಾ. ಅಂಕದ ಮುರಿಗೆಪ್ಪನವರ ಕಾಯಕ ಫೌಂಡೇಶನ್ ಟ್ರಸ್ಟ ಸಾರಥ್ಯದಲ್ಲಿ ನಾಲಂದಾ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಪುನಾ ಉಚ್ಛಾಯಕ್ಕೆ ಬರುತ್ತದೆ ಎಂಬ ಭರವಸೆಯಲ್ಲಿ ಸಂಸ್ಥೆಯನ್ನು ಅವರಿಗೆ ಹಸ್ತಾಂತರಿಸಿದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಶಿವಕುಮಾರ ಹೇಳಿದರು.

ತಾಳಗುಪ್ಪದ ನಾಲಂದಾ ಪ್ರೌಢ ಶಾಲಾ ಆವರಣದಲ್ಲಿ ಸಾಗರ ಮಲೆನಾಡು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಿಂದ ಬೆಂಗಳೂರಿನ ಕಾಯಕ ಟ್ರಸ್ಟಿಗೆ ತಾಳಗುಪ್ಪದ ನಾಲಂದಾ ಶಿಕ್ಷಣ ಸಂಸ್ಥೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

62 ವರ್ಷಗಳಿಂದ ಗ್ರಾಮಾಂತರ ಪ್ರದೇಶದ ಅವಕಾಶ ವಂಚಿತ ಮಕ್ಕಳ ಶೈಕ್ಷಣಿಕ ಹಾಗೂ ಭೌದ್ಧಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ನಾಲಂದಾ ಪ್ರೌಢಶಾಲೆಯ ಹಲವು ಕಾರಣಗಳಿಂದ ಪ್ರಗತಿ ಕುಂಠಿತವಾಗಿತ್ತು. ಈ ನ್ಯೂನತೆಯನ್ನು ಸರಿಪಡಿಸುವ ಸದುದ್ದೇಶದಿಂದ ಶೈಕ್ಷಣಿಕ ಪ್ರಗತಿಯ ಕಾರ್ಯಚಟುವಟಿಕೆಗಾಗಿ ಶಾಲೆಯನ್ನು ಹಸ್ತಾಂತರಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ, ನಿರ್ವಹಣೆ ಕಾಯಕ ಪೌಂಡೇಶನ್ ನಿಯಂತ್ರಣದಲ್ಲಿಯೇ ನಡೆಯುತ್ತದೆ. ಶಾಲೆಯ ಭೂಮಿ, ಕಟ್ಟಡದ ಹಕ್ಕು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಮಾಲಿಕತ್ವದಲ್ಲಿಯೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಕಾಯಕ ಟ್ರಸ್ಟಿನ ಅಧ್ಯಕ್ಷ ಡಾ.ಮುರಿಗೆಪ್ಪ ಅಂಕದ ಮಾತನಾಡಿ, ಟ್ರಸ್ಟ ಸೇವಾ ಸಂಕಲ್ಪದ ಸಂಸ್ಥೆಯಾಗಿದ್ದು ಪ್ರತಿಫಲಾಪೇಕ್ಷೆ ಇಲ್ಲದೆ ಕಾರ್ಯ ತತ್ಪರವಾಗಿದೆ. ನಾಲಂದಾ ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ಕಲ್ಪಿಸಿ ಗುಣ ಮಟ್ಟದ ಶಿಕ್ಷಣ ನೀಡಿ ಸಮುದಾಯಕ್ಕೆ ಉತ್ತಮ ಕೊಡುಗೆ ನೀಡುವ ಉದ್ದೇಶದಿಂದ ಜವಾಬ್ದಾರಿ ಸ್ವೀಕರಿಸುತ್ತಿದ್ದೇವೆ. ಶಾಲೆಯ ಶೈಕ್ಷಣಿಕ, ಮತ್ತು ಭೌತಿಕ ಅಭಿವೃದ್ಧಿ ಸಾಧನೆ ಮಾತ್ರ ನಮ್ಮ ಹೊಣೆಯಾಗಿದ್ದು, ಸಂಸ್ಥೆಯ ಆಸ್ತಿ ಪಾಸ್ತಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಕ್ಷೆಯಲ್ಲಿಯೇ ಮುಂದುವರಿಯುತ್ತದೆ. ಪ್ರತಿಷ್ಠಾನ ಮತ್ತು ಟ್ರಸ್ಟಿನ ಸಮನ್ವಯ ಹಾಗೂ ಸ್ಥಳೀಯರ ಸಹಕಾರದೊಡನೆ ವಿದ್ಯೆಯ ಪೋಷಣೆಗಾಗಿ ಹೊಸ ಚಿಂತನೆಗಳನ್ನು ರೂಢಿಸಿಕೊಳ್ಳುವ ಹಂಬಲ ಇದೆ ಎಂದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಆರ್. ಜಯಂತರವರು ಹಸ್ತಾಂತರ ಪಕ್ರಿಯೆಯ ದಾಖಲಾತಿಯನ್ನು ಕಾಯಕ ಫೌಂಡೇಷನ್ ಅಧ್ಯಕ್ಷ ಡಾ.ಮುರಿಗೆಪ್ಪನವರಿಗೆ ಹಸ್ತಾಂತರಿಸಿದರು.

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ವೆಂಕಟೇಶ, ಸತ್ಯನಾರಾಯಣ, ಕಾಯಕ ಸೇವಾ ಟ್ರಸ್ಟಿನ ಮಹೇಶ ಅಂಕದ, ಅಪೂರ್ವ ಅಂಕದ, ವಿರುಪಾಕ್ಷ ,ಎಸ್.ಎಸ್.ಸಂತೋಷ ಕುಮಾರ , ಮತ್ತು ಕೆ.ಆರ್.ಶ್ರೀನಿವಾಸ ಮೂರ್ತಿ, ಗುರುಮೂರ್ತಿ ಹೆಗಡೆ ಮಲವಳ್ಳಿ, ಜಯಪ್ರಕಾಶ ಗುಂಡು, ಸೋಮಶೇಖರ ಬಸ್ತಿಕೊಪ್ಪ, ಪದಾದಿಕಾರಿಗಳು, ಶಿಕ್ಷಕರು ಹಾಜರಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹೇಶ್ ಸ್ವಾಗತಿಸಿ ವಂದಿಸಿದರು.

Share this article