ಮಡಿಕೇರಿ : ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ಎನ್.ಐ.ಎಂ.ಎ), ಕೊಡಗು ಸಂಘದ ವತಿಯಿಂದ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣವನ್ನು ಮಡಿಕೇರಿಯಲ್ಲಿ ಆಯೋಜಿಸಲಾಗಿತ್ತು.
ಸಮಯಕ್ಕೆ ಸರಿಯಾದ ಭೋಜನ, ನಮ್ಮ ಜೀವನಶೈಲಿ, ಮಾನಸಿಕ ಸುಸ್ಥಿತಿ, ಹೀಗೆ ಯಾವ ಬದಲಾವಣೆ ಹೇಗೆ ನಮ್ಮ ದೀಘಾ೯ಯಷ್ಯವನ್ನು ಆರೋಗ್ಯಕರವಾಗಿ ಉತ್ಸಾಹಭರಿತವಾಗಿ ಕಾಪಾಡುವಲ್ಲಿ ಆಯುರ್ವೇದ ನೆರವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ವಿರಾಮವಿಲ್ಲದೆ, ನಿಯಮಿತ ಗುರಿ ಇಲ್ಲದೆ ಓಡುತ್ತಿರುವ ಈ ಸಮಾಜ ವಿಶ್ರಮಿಸುವಷ್ಟರಲ್ಲಿ ವಾರ್ಧಕ್ಯ ಮತ್ತು ಅನಾರೋಗ್ಯ ಮಾನವನನ್ನು ಸಂಪೂರ್ಣ ದುರ್ಬಲನನ್ನಾಗಿಸುತ್ತದೆ. ಆದ್ದರಿಂದ ಸರಿಯಾದ ಸಮಯದಲ್ಲಿ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಉಪಚಾರಗಳನ್ನು ಕೂಡ ಮಾಡುವುದರ ಮೂಲಕ ಆರೋಗ್ಯಕರ ವಾರ್ಧಕ್ಯವನ್ನು ಕಳೆಯುವ ಬಗ್ಗೆ ಡಾ. ಗಣಪತಿ ಭಟ್ ಎಚ್ಚರಿಕೆಯ ಸಲಹೆ ನೀಡಿದರು.
ಎನ್.ಐ.ಎಂ.ಎ ಕೊಡಗು, ಘಟಕದ ಅಧ್ಯಕ್ಷ ಡಾ.ರಾಜಾರಾಮ್, ಕಾರ್ಯದರ್ಶಿ ಡಾ. ಶ್ಯಾಮಪ್ರಸಾದ ಪಿ.ಎಸ್, ಖಜಾಂಜಿ ಡಾ.ಪದ್ಮನಾಭ, ಮಹಿಳಾ ಘಟಕದ ಅಧ್ಯಕ್ಷೆ ಡಾ.ಶೈಲಜಾ ರಾಜೇಂದ್ರ ಉಪಸ್ಥಿತರಿದ್ದರು.ಖಜಾಂಚಿ ಡಾ.ಹೀನ ಸ್ವಾಗತಿಸಿ, ಡಾ.ಈಶ್ವರಿ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದ ಕಾರ್ಯಕ್ರಮದಲ್ಲಿ ಡಾ.ರೋಷನ್ ವಂದಿಸಿ, ಡಾ.ಅನುಷಾ ನಿರೂಪಿಸಿದರು. ಎನ್.ಐ.ಎಂ.ಎ ಕೊಡಗು ಘಟಕದ, ಹಿರಿಯ ವೈದ್ಯರಾದ ಡಾ. ಉದಯಶಂಕರ್, ಡಾ.ಉದಯಕುಮಾರ್, ಡಾ.ಸಾವಿತ್ರಿ, ಡಾ. ರಾಜೇಂದ್ರ, ಮತ್ತಿತರರೂ ಸೇರಿದಂತೆ ಜಿಲ್ಲೆಯಾದ್ಯಂತ 30 ಆಯುರ್ವೇದ ವೈದ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.