ಮಂಡ್ಯ ಮಂಜುನಾಥ
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಸಿಲಿಂಡರ್‌ಗೆ ಅಭಾವ ಸೃಷ್ಟಿಯಾಗಬಹುದೆಂಬ ಆತಂಕದಿಂದ ಜನರು ಬುಕ್ಕಿಂಗ್‌ಗೆ ಮುಗಿಬಿದ್ದಿದ್ದಾರೆ. ಏಕಕಾಲಕ್ಕೆ ಸಾವಿರಾರು ಮಂದಿ ಸಿಲಿಂಡರ್ ಬುಕ್ ಮಾಡಲು ದುಂಬಾಲು ಬಿದ್ದಿರುವುದರಿಂದ ಸರ್ವರ್ ಜಾಮ್ ಆಗಿದೆ. ಯಾವುದೇ ಬುಕ್ಕಿಂಗ್ ಆಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ವಾಣಿಜ್ಯ ಉದ್ದೇಶಕ್ಕೆ ಸಿಲಿಂಡರ್ ನೀಡದಂತೆ ನಿರ್ಬಂಧ ವಿಧಿಸಿರುವುದರಿಂದ ಹೋಟೆಲ್ ಉದ್ಯಮ ಕೂಡ ತಲ್ಲಣಗೊಂಡಿದೆ. ಹೋಟೆಲ್‌ಗಳಲ್ಲಿ ಎರಡು-ಮೂರು ದಿನಕ್ಕಾಗುವಷ್ಟು ಸಿಲಿಂಡರ್ ಮಾತ್ರ ದಾಸ್ತಾನು ಇದೆ. ಆನಂತರ ಮುಂದೇನು ಎಂಬ ಬಗ್ಗೆ ಹೋಟೆಲ್ ಮಾಲೀಕರು ದಿಕ್ಕೆಟ್ಟಿದ್ದಾರೆ.ಗೃಹ ಬಳಕೆಯ ಸಿಲಿಂಡರ್‌ಗೆ ಮಂಗಳವಾರದವರೆಗೆ ಬುಕ್ಕಿಂಗ್ ತೆಗೆದುಕೊಳ್ಳುತ್ತಿತ್ತು. ಆದರೆ, ಬುಧವಾರ ಬೆಳಗ್ಗೆಯಿಂದ ಸರ್ವರ್ ಸಮಸ್ಯೆ ಎದುರಾಗಿದೆ. ಹಲವೆಡೆ ಬುಕ್ಕಿಂಗ್ ತೆಗೆದುಕೊಳ್ಳುತ್ತಿಲ್ಲ. ಫೋನ್ ಮೂಲಕ ಗೃಹ ಬಳಕೆದಾರರು ನಿರಂತರವಾಗಿ ಬುಕ್ಕಿಂಗ್‌ಗೆ ಪ್ರಯತ್ನಿಸುತ್ತಿದ್ದರೂ ಬುಕ್ಕಿಂಗ್ ಆಗದೆ ಪೇಚಿಗೆ ಸಿಲುಕಿದ್ದಾರೆ. ಎರಡು ಸಿಲಿಂಡರ್‌ಗಳ ಪೈಕಿ ಒಂದು ಖಾಲಿ ಇದ್ದು, ಇನ್ನೊಂದನ್ನು ಉಪಯೋಗಿಸುತ್ತಿದ್ದರೂ ಅಭಾವ ಎದುರಾಗುವ ಆತಂಕದಿಂದ ಇನ್ನೊಂದು ಸಿಲಿಂಡರ್‌ನ್ನೂ ಬುಕ್ ಮಾಡಲು ಜನರು ಮುಗಿಬಿದ್ದಿದ್ದಾರೆ. ಇದರಿಂದ ಸಿಲಿಂಡರ್ ಅಗತ್ಯವಿರುವವರಿಗೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಣಿಜ್ಯ ಉದ್ದೇಶಕ್ಕೆ ಅಡುಗೆ ಅನಿಲ ನೀಡದಂತೆ ನಿರ್ಬಂಧ ವಿಧಿಸಿರುವುದರಿಂದ ಜಿಲ್ಲೆಯ ಹೋಟೆಲ್ ಮಾಲೀಕರು ದಿಕ್ಕೆಟ್ಟಿದ್ದಾರೆ. ಎರಡು-ಮೂರು ದಿನಕ್ಕೆ ಸಾಲುವಷ್ಟು ಸಿಲಿಂಡರ್‌ಗಳು ಮಾತ್ರ ಹೋಟೆಲ್‌ನವರ ಬಳಿ ದಾಸ್ತಾನಿರುವುದರಿಂದ ಶುಕ್ರವಾರದ ನಂತರ ಮುಂದೇನು ಎಂದು ಚಿಂತೆಗೀಡಾಗಿದ್ದಾರೆ.
ಎಚ್‌ಪಿ ಕಾರ್ಪೋರೇನ್‌ನ ಕಂಪನಿಯ ೨,೧೨,೭೨೭ ಸಂಪರ್ಕವಿದ್ದು, ೧೪.೨ ಕೆಜಿಯ ಅಡುಗೆ ಬಳಕೆಯ ಸಿಲಿಂಡರ್‌ಗಳು ೭೬೯೪ ದಾಸ್ತಾನಿದೆ. ವಾಣಿಜ್ಯ ಉದ್ದೇಶದ ೧೧೪ ಸಿಲಿಂಡರ್‌ಗಳು ದಾಸ್ತಾನಿದ್ದು, ೫ ಕೆಜಿ ಗೃಹ ಬಳಕೆ ಹಾಗೂ ವಾಣಿಜ್ಯ ಉದ್ದೇಶದ ೮೦೬ ಸಿಲಿಂಡರ್‌ಗಳು ದಾಸ್ತಾನಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ೧೬ ಏಜೆನ್ಸಿಗಳಲ್ಲಿ ೧,೯೩,೪೬೮ ಸಂಪರ್ಕವಿದ್ದು, ೫೯೩೪ ಗೃಹಬಳಕೆ ಸಿಲಿಂಡರ್‌ಗಳು, ವಾಣಿಜ್ಯ ಉದ್ದೇಶದ ೩೦೩ ಹಾಗೂ ೫ ಕೆಜಿಯ ೫೭೧ ಸಿಲಿಂಡರ್‌ಗಳು ದಾಸ್ತಾನಿದೆ. ಬಿಪಿಸಿಯ ೯ ಏಜೆನ್ಸಿಗಳಲ್ಲಿ ೧,೩೮,೪೧೦ ಸಂಪರ್ಕವಿದ್ದು ಗೃಹ ಬಳಕೆಯ ೧೭೨೩, ವಾಣಿಜ್ಯ ಉದ್ದೇಶದ ೭೦೧ ಹಾಗೂ ೫ ಕೆಜಿಯ ೯೦೦ ಸಿಲಿಂಡರ್‌ಗಳು ದಾಸ್ತಾನಿದೆ. ಒಟ್ಟು ೩೯ ಏಜೆನ್ಸಿಗಳಿಂದ ೫,೪೪,೬೦೫ ಸಂಪರ್ಕಗಳಿದ್ದು ೧೫೩೫೧ ಗೃಹಬಳಕೆ, ೧೩೪೯ ವಾಣಿಜ್ಯ ಹಾಗೂ ೫ ಕೆಜಿ ಸಾಮರ್ಥ್ಯದ ೨೨೭೭ ಅಡುಗೆ ಅನಿಲ ದಾಸ್ತಾನಿರುವುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವ್ಯವಸ್ಥಾಪಕಿ ಎಂ.ರೇಣುಕಾ ಕನ್ನಡಪ್ರಭ ಪತ್ರಿಕೆಗೆ ಮಾಹಿತಿ ನೀಡಿದರು.
- ಅನಿಲ್, ಅಪೂರ್ವ ವೆಜ್
- ಗೋಪಿ, ಹರ್ಷ ಕೆಫೆ
- ಕಿರಣ್ ಪ್ರಶಾಂತ್, ಮಂಡ್ಯ ಟಿಫಾನೀಸ್
- ಪ್ರತೀಕ್ ಹೆಗ್ಡೆ, ಉಪ ನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ನಿಗಮ
ನಿನ್ನೆಯವರೆಗೂ ಗೃಹಬಳಕೆ ಸಿಲಿಂಡರ್‌ಗಳ ಬುಕ್ಕಿಂಗ್ ತೆಗೆದುಕೊಳ್ಳುತ್ತಿತ್ತು. ಆದರೆ, ಇವತ್ತು ಬೆಳಗ್ಗೆಯಿಂದ ಸರ್ವರ್ ಸಮಸ್ಯೆಯಾಗಿದೆ. ಒಂದೇ ಒಂದು ಬುಕ್ಕಿಂಗ್ ತೆಗೆದುಕೊಳ್ಳುತ್ತಿಲ್ಲ. ಬುಕ್ಕಿಂಗ್‌ಗೆ ಹೆಚ್ಚು ಜನರು ಏಕಕಾಲಕ್ಕೆ ಮುಗಿಬಿದ್ದಿರುವುದೇ ಇದಕ್ಕೆ ಕಾರಣ.- ಗುರು ನರಸಿಂಹ ಗ್ಯಾಸ್ ಏಜೆನ್ಸಿ, ಶ್ರೀರಂಗಪಟ್ಟಣ